Budh Gochar 2024: ವಾರದ ಬಳಿಕ ಈ ಮೂರು ರಾಶಿಯವರ ಜೀವನದಲ್ಲಿ ಹರಿದುಬರಲಿದೆ ಧನ-ಸಂಪತ್ತು
ಬುಧ ಗೋಚಾರ: ವೈದಿಕ ಜ್ಯೋತಿಷ್ಯದಲ್ಲಿ ಗ್ರಹಗಳ ರಾಜಕುಮಾರ ಎಂದು ಕರೆಯಲ್ಪಡುವ ಬುಧನನ್ನು ಬುದ್ಧಿ, ತರ್ಕ, ವೃತ್ತಿ-ವ್ಯವಹಾರದ ಅಂಶ ಎಂದು ಪರಿಗಣಿಸಲಾಗಿದೆ.
ಬುಧನು ವಾರದ ಬಳಿಕ ಫೆಬ್ರವರಿ 01, 2024ರಂದು ಮಧ್ಯಾಹ್ನ 02:29ಕ್ಕೆ ಮಕರ ರಾಶಿಯನ್ನು ಪ್ರವೇಶಿಸಲಿದ್ದಾನೆ.
ಮಕರ ರಾಶಿಗೆ ಬುಧನ ಸಂಚಾರವು ಎಲ್ಲಾ 12 ರಾಶಿಯವರ ಜೀವನದ ಮೇಲೆ ಶುಭ-ಅಶುಭ ಪರಿಣಾಮಗಳನ್ನು ಉಂಟು ಮಾಡುತ್ತದೆ.
ಆದಾಗ್ಯೂ, ಮಕರ ರಾಶಿಗೆ ಪ್ರವೇಶಿಸಲಿರುವ ಬುಧನು ಮೂರು ರಾಶಿಯವರ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ಬೀರಲಿದ್ದಾನೆ. ಈ ಸಮಯದಲ್ಲಿ ಈ ಮೂರು ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದ್ದು ಶ್ರೀಮಂತರಾಗುವ ಯೋಗವೂ ಇದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೇಷ ರಾಶಿ: ಬುಧ ಸಂಚಾರದ ಪರಿಣಾಮವಾಗಿ ಮೇಷ ರಾಶಿಯವರಿಗೆ ಇಷ್ಟು ದಿನಗಳ ಕಾಲ ಉದ್ಯೋಗ ಕ್ಷೇತ್ರದಲ್ಲಿ ಕಾಡುತ್ತಿದ್ದ ಸಮಸ್ಯೆಗಳು ನಿವಾರಣೆಯಾಗಳಿವೆ. ವ್ಯಾಪಾರಸ್ಥರಿಗೆ ಬಂಪರ್ ಲಾಭವಾಗಲಿದೆ. ವೈವಾಹಿಕ ಜೀವನದಲ್ಲೂ ಸುಖ-ಸಂತೋಷ ಹೆಚ್ಚಾಗಲಿದೆ.
ಮಿಥುನ ರಾಶಿ: ಬುಧ ರಾಶಿ ಪರಿವರ್ತನೆಯು ಹೊಸ ವ್ಯವಹಾರವನ್ನು ಆರಂಭಿಸಲು ಯೋಜಿಸುತ್ತಿರುವ ಮಿಥುನ ರಾಶಿಯ ಜನರಿಗೆ ಫಲಪ್ರದವಾಗಿದೆ. ಈ ಸಮಯದಲ್ಲಿ ವೃತ್ತಿ ರಂಗದಲ್ಲಿ ಏಳ್ಗೆ ಸಾಧ್ಯತೆ ಇದ್ದು, ಸಮಾಜದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗಲಿದೆ.
ಸಿಂಹ ರಾಶಿ: ಫೆಬ್ರವರಿ ಮೊದಲ ದಿನದಂದು ಬುಧ ರಾಶಿ ಬದಲಾವಣೆಯು ಸಿಂಹ ರಾಶಿಯವರ ಜೀವನದಲ್ಲಿ ಧನಾತ್ಮಕ ಫಲಗಳನ್ನು ತರಲಿದೆ. ಈ ಸಮಯದಲ್ಲಿ ನಿಮ್ಮ ಆರೋಗ್ಯದ ವಿಚಾರವಾಗಿ ಶುಭ ಸುದ್ದಿ ನಿರೀಕ್ಷಿಸಬಹುದು. ಉದ್ಯೋಗ ರಂಗದಲ್ಲಿ ಎದುರಾಗಿದ್ದ ಸಮಸ್ಯೆಗಳಿಂದ ಪರಿಹಾರದ ಜೊತೆಗೆ ಬಂಪರ್ ಹಣಕಾಸಿನ ಪ್ರಯೋಜನವನ್ನು ಪಡೆಯಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.