Budh Gochar: ಮುಂದಿನ 19 ದಿನಗಳ ಕಾಲ ಈ ರಾಶಿಯವರಿಗೆ ಪ್ರತಿ ಕೆಲಸದಲ್ಲೂ ಯಶಸ್ಸು, ಕೈತುಂಬಾ ಹಣ

Fri, 02 Feb 2024-6:47 am,

ಬುಧ ಗೋಚಾರ:   ವೈದಿಕ ಜ್ಯೋತಿಷ್ಯದಲ್ಲಿ ಸಂಪತ್ತು, ವ್ಯವಹಾರ, ಮಾತು ಮತ್ತು ಸಂವಹನದ ಅಂಶ ಎಂದು ಪರಿಗಣಿಸಲಾಗಿರುವ ಬುಧ ಗ್ರಹ  1 ಫೆಬ್ರವರಿ 2024 ರಂದು ಮಕರ ರಾಶಿಯನ್ನು ಪ್ರವೇಶಿಸಿದೆ. ಫೆಬ್ರವರಿ 20ರವರೆಗೂ ಬುಧ ಮಕರ ರಾಶಿಯಲ್ಲಿಯೇ ಸಂಚರಿಸಲಿದ್ದಾನೆ. 

ಬುಧಾದಿತ್ಯ ರಾಜಯೋಗ:  ಗ್ರಹಗಳ ರಾಜ ಸೂರ್ಯ ಈಗಾಗಲೇ ಮಕರ ರಾಶಿಯಲ್ಲಿದ್ದು, ಇದೀಗ ಅದೇ ರಾಶಿಯಲ್ಲಿ ಬುಧನ ಪ್ರವೇಶದೊಂದಿಗೆ ಬುಧಾದಿತ್ಯ ರಾಜಯೋಗ ನಿರ್ಮಾಣವಾಗಿದೆ. 

ಈ ರಾಶಿಯವರಿಗೆ ಪ್ರಯೋಜನ:  ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಮಕರ ರಾಶಿಗೆ ಬುಧನ ಪ್ರವೇಶವು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತದೆ. ಆದರೂ, ಈ ಸಮಯವನ್ನು ಕೆಲವು ರಾಶಿಯವರಿಗೆ ಅದೃಷ್ಟದ ಸಮಯ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ....  

ಮೇಷ ರಾಶಿ:  ಬುಧನ ಸಂಚಾರವು ಮೇಷ ರಾಶಿಯವರಿಗೆ ಹೆಚ್ಚಿನ ಲಾಭವನ್ನು ತರಲಿದೆ. ಈ ಸಮಯದಲ್ಲಿ ಮೇಷ ರಾಶಿಯವರು ಉದ್ಯೋಗದಲ್ಲಿ ಯಶಸ್ಸನ್ನು ಪಡೆಯುತ್ತಾರೆ. ಬಡ್ತಿಗೆ ಸಂಬಂಧಿಸಿದಂತೆ ಶುಭ ಸುದ್ದಿಗಳನ್ನು ಕೂಡ ಕೇಳಬಹುದು. 

ವೃಷಭ ರಾಶಿ:  ಬುಧ ರಾಶಿ ಪರಿವರ್ತನೆಯು ವೃಷಭ ರಾಶಿಯವರ ಜೀವನದಲ್ಲೂ ಸಕಾರಾತ್ಮಕ ಫಲಗಳನ್ನು ತರಲಿದೆ. ಈ ಸಮಯದಲ್ಲಿ ವೃತ್ತಿ ಬದುಕಿನಲ್ಲಿ ಪ್ರಗತಿ ಕಂಡು ಬರಲಿದ್ದು, ವಿದೇಶದಿಂದ ಉದ್ಯೋಗಾವಕಾಶಗಳನ್ನು ಪಡೆಯಬಹುದು. ಆರ್ಥಿಕವಾಗಿಯೂ ಸಮಯ ತುಂಬಾ ಚೆನ್ನಾಗಿದೆ. 

ಕರ್ಕಾಟಕ ರಾಶಿ:  ಬುಧ ಸಂಚಾರವು ಕರ್ಕಾಟಕ ರಾಶಿಯವರ ಜೀವನದಲ್ಲೂ ಒಳ್ಳೆಯ ಫಲಗಳನ್ನು ತರಲಿದೆ. ಈ ಸಮಯದಲ್ಲಿ ಹೊಸ ಆದಾಯದ ಮೂಲಗಳು ಸೃಷ್ಟಿಯಾಗಲಿದೆ. ಉದ್ಯೋಗ ಕ್ಷೇತ್ರದಲ್ಲಿ ತ್ವರಿತ ಪ್ರಗತಿಯನ್ನು ಕಾಣಬಹುದು. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link