Budh Gochar 2024: ಇಂದು ಮಿಥುನ ರಾಶಿಗೆ ಬುಧನ ಪ್ರವೇಶ, ಜಾಗೃತಗೊಳ್ಳಲಿದೆ ಮೂರು ರಾಶಿಯವರ ಅದೃಷ್ಟ
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಇಂದು (ಜೂನ್ 14) ಬುಧನು ಮಿಥುನ ರಾಶಿಯನ್ನು ಪ್ರವೇಶಿಸುತ್ತಿದ್ದಾನೆ. ಎರಡು ವಾರಗಳ ಬಳಿಕ ಇದೇ ರಾಶಿಯಲ್ಲಿ ಬುಧ ಉದಯಿಸಲಿದ್ದಾನೆ.
ಮಿಥುನ ರಾಶಿಗೆ ಬುಧನ ಪ್ರವೇಶವು ಎಲ್ಲಾ 12 ರಾಶಿಯವರ ಮೇಲೂ ಪರಿಣಾಮ ಬೀರುತ್ತದೆ. ಆದರೆ, ಈ ಸಮಯದಲ್ಲಿ ಮೂರು ರಾಶಿಯವರಿಗೆ ಮಲಗಿರುವ ಅದೃಷ್ಟ ಜಾಗೃತಗೊಳ್ಳಲಿದೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಬುಧ ಸಂಚಾರದಿಂದ ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಬಡ್ತಿ, ವಾಹನ ಖರೀದಿ ಯೋಗವಿದೆ. ಹಣಕಾಸಿನ ಸ್ಥಿತಿ ಸುಧಾರಿಸುವುದರಿಂದ ಕುಟುಂಬದಲ್ಲಿ ನೆಮ್ಮದಿಯನ್ನು ಕಾಣಬಹುದು.
ಬುಧ ಸಂಚಾರದಿಂದ ಸಿಂಹ ರಾಶಿಯ ಉದ್ಯೋಗಿಗಳಿಗೆ ಭಾರೀ ಅದೃಷ್ಟ ಕೂಡಿ ಬರಲಿದೆ. ಸಂಬಳ ಹೆಚ್ಚಾಗಲಿದ್ದು, ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಉದ್ಯಮಿಗಳಿಗೂ ಅದೃಷ್ಟದ ಸಮಯ.
ಬುಧ ಗೋಚಾರದಿಂದ ಧನು ರಾಶಿಯವರ ಮಲಗಿರುವ ಅದೃಷ್ಟ ಎಚ್ಚರಗೊಳ್ಳಲಿದೆ. ವ್ಯಾಪಾರದಲ್ಲಿ ಬಂಪರ್ ಲಾಭ, ಉದ್ಯೋಗದಲ್ಲಿ ನೀವು ಬಯಸಿದ ಸ್ಥಳಕ್ಕೆ ವರ್ಗಾವಣೆ ಸಾಧ್ಯತೆ ಇದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.