Grah Gochar: ಫೆಬ್ರವರಿಯಲ್ಲಿ ನಾಲ್ಕು ಪ್ರಮುಖ ಗ್ರಹಗಳ ಬದಲಾವಣೆ, ಈ ರಾಶಿಯವರಿಗೆ ಎಚ್ಚರಿಕೆ ಅಗತ್ಯ
)
ಫೆಬ್ರವರಿ 2024ರಲ್ಲಿ , ಬುಧ, ಮಂಗಳ, ಶುಕ್ರ ಮತ್ತು ಸೂರ್ಯ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಯನ್ನು ಬದಲಾಯಿಸಲಿವೆ.
)
ಇದಲ್ಲದೆ, ನ್ಯಾಯದ ದೇವರು ಶನಿ ತನ್ನದೇ ಆದ ಕುಂಭ ರಾಶಿಯಲ್ಲಿ ಅಸ್ತಮಿಸಲಿದ್ದಾನೆ.
)
ಇನ್ನೂ ಮಕರ ರಾಶಿಯಲ್ಲಿ ಮಂಗಳ, ಬುಧ ಮತ್ತು ಶುಕ್ರರ ಸಂಯೋಗದಿಂದಾಗಿ ಶುಭಕರ ತ್ರಿಗ್ರಾಹಿ ಯೋಗ ರೂಪುಗೊಳ್ಳಲಿದೆ.
ಫೆಬ್ರವರಿ ತಿಂಗಳಿನಲ್ಲಿ ಒಂದೇ ರಾಶಿಯಲ್ಲಿ ಶನಿ ಮತ್ತು ಸೂರ್ಯನ ಉಪಸ್ಥಿತಿಯು ಕೆಲವು ರಾಶಿಯ ಜನರ ಜೀವನದಲ್ಲಿ ಅಶುಭ ಫಲಗಳನ್ನು ಉಂಟು ಮಾಡಲಿದ್ದು, ಈ ಸಮಯದಲ್ಲಿ ಅವರು ಜಾಗರೂಕರಾಗಿರಬೇಕು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
ಮಿಥುನ ರಾಶಿ: ಫೆಬ್ರವರಿ ತಿಂಗಳಿನಲ್ಲಿ ಗ್ರಹಗಳ ಸಾಗಣೆ ಮಿಥುನ ರಾಶಿಯವರಿಗೆ ಅಷ್ಟು ಶುಭಕರವಾಗಿಲ್ಲ. ಈ ವೇಳೆ ನಿಮ್ಮ ಒಡಹುಟ್ಟಿದವರೊಂದಿಗೆ ಭಿನ್ನಾಭಿಪ್ರಾಯಗಳು ಉಂಟಾಗಬಹುದು. ಹಣಕಾಸಿನ ಸಮಸ್ಯೆಗಳು ಹೆಚ್ಚಾಗಬಹುದು.
ಧನು ರಾಶಿ: ಫೆಬ್ರವರಿ ತಿಂಗಳಿನಲ್ಲಿ ಧನು ರಾಶಿಯ ಜನರು ವಿಶೇಷವಾಗಿ ಉದ್ಯೋಗ ಕ್ಷೇತ್ರದಲ್ಲಿ ಏರಿಳಿತಗಳನ್ನು ಅನುಭವಿಸಬೇಕಾಗಬಹುದು. ಈ ಸಮಯದಲ್ಲಿ ನಿಮ್ಮ ಆದಾಯಕ್ಕಿಂತ ಖರ್ಚು ಹೆಚ್ಚಾಗಬಹುದು.
ಕುಂಭ ರಾಶಿ: ಕುಂಭ ರಾಶಿಯವರಿಗೆ ಫೆಬ್ರವರಿ ತಿಂಗಳಿನಲ್ಲಿ ರಹಸ್ಯ ಚಿಂತನೆಗಳು ಕಾಡಬಹುದು. ಸೂರ್ಯ ಮತ್ತು ಶನಿ ಸಂಯೋಜನೆಯು ವ್ಯಾಪಾರ-ವ್ಯವಹಾರದಲ್ಲಿ ತೊಡಕನ್ನು ಉಂಟು ಮಾಡಬಹುದು.
ಮೀನ ರಾಶಿ: ಮೀನ ರಾಶಿಯವರಿಗೆ ಈ ತಿಂಗಳು ಒಂದಲ್ಲಾ ಒಂದು ವಿಷಯಕ್ಕೆ ನಿಮ್ಮ ಮಾನಸಿಕ ಒತ್ತಡ ಹೆಚ್ಚಾಗಲಿದೆ. ಯಾವುದೇ ಕೆಲಸದಲ್ಲಿ ನಿರೀಕ್ಷಿತ ಫಲ ಪಡೆಯಲು ಕಷ್ಟಪಟ್ಟು ಕೆಲಸ ಮಾಡಬೇಕಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.