ಇಂದಿನಿಂದ ಈ ರಾಶಿಗಳ ಜನರ ಸುವರ್ಣಕಾಲ ಆರಂಭಗೊಂಡಿದೆ, ಧನ ಕುಬೇರ ಕೃಪೆಯಿಂದ ಜೀವನದಲ್ಲಿ ಹಣವೇ ಹಣ ಹರಿದುಬರಲಿದೆ!

Sat, 16 Sep 2023-7:17 pm,

Budh Margi In Leo 2023: ಇಂದು ಸೆಪ್ಟೆಂಬರ್ 16, ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಸಿಂಹ ರಾಶಿಯಲ್ಲಿ ಗ್ರಹಗಳ ರಾಜಕುಮಾರ ಅಂದರೆ ಬುಧನ ನೇರ ನಡೆ ಆರಂಭಗೊಂಡಿದೆ. ಹೀಗಿರುವಾಗ ಬುಧನ ಈ ನಡೆ ಪರಿವರ್ತನೆ ಮೂರು ರಾಶಿಗಳ ಜನರ ಪಾಲಿಗೆ ಅತ್ಯಂತ ಶುಭ ಫಲಗಳನ್ನು ನೀಡಲಿದೆ. ಧನ ಕುಬೇರ ಕೃಪೆಯಿಂದ ಈ ಜನರ ಜೀವನದಲ್ಲಿ ಹಣದ ಕೊರತೆಗೆ ದೂರಾಗಲಿದೆ.   

ಮಿಥುನ ರಾಶಿ- ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಬುಧನ ಈ ನೇರ ನಡೆ ಮಿಥುನ ರಾಶಿಯ ಜನರ ಜೀವನದ ಮೇಲೆ ಶುಭ ಪರಿಣಾಮಗಳನ್ನು ಬೀರುತ್ತದೆ. ವೃತ್ತಿಜೀವನದಲ್ಲಿ ಪ್ರಗತಿಯ ಪ್ರಚಂಡ ಅವಕಾಶಗಳು ತೆರೆದುಕೊಳ್ಳಲಿವೆ.  ಈ ಅವಧಿಯಲ್ಲಿ, ಅನೇಕ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆಯಿದೆ. ಉದ್ಯೋಗದಲ್ಲಿ ನಿಮ್ಮ ಜಾಬ್ ಪ್ರೊಫೈಲ್‌ನಲ್ಲಿ ಸೂಕ್ತ ಬದಲಾವಣೆಯಾಗುವ ಸಾಧ್ಯತೆ ಇದೆ. ಧೈರ್ಯ ಹೆಚ್ಚಾಗಲಿದೆ. ಪಿತ್ರಾರ್ಜಿತ ಆಸ್ತಿಯಿಂದ ಲಾಭ ಪಡೆಯುವಲ್ಲಿ ಯಶಸ್ವಿಯಾಗುವಿರಿ. ಹೊಸ ವಾಹನ ಖರೀದಿಗೆ ಇದು ಉತ್ತಮ ಸಮಯ.  

ಸಿಂಹ ರಾಶಿ- ಬುಧನ ಈ ನೆರನಡೆ, ದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದ ನಿಮ್ಮ ಕಾರ್ಯಗಳನ್ನು ಪೂರ್ಣಗೊಳಿಸಲಿದೆ. ಈ ಸಮಯದಲ್ಲಿ ನಿಮ್ಮ ವೃತ್ತಿಜೀವನದಲ್ಲಿ ನೀವು ಬಯಸಿದ ಫಲಿತಾಂಶಗಳನ್ನು ನೀಡಲಿದೆ. ವೃತ್ತಿ ಜೀವನದಲ್ಲಿ ಯಶಸ್ಸನ್ನು ಪಡೆಯುವ ಸಾಧ್ಯತೆಗಳಿವೆ. ಪ್ರಯಾಣದ ಸಾಧ್ಯತೆಗಳಿವೆ. ಈ ಅವಧಿಯಲ್ಲಿ ನೀವು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತೀರಿ. ಆರ್ಥಿಕ ಲಾಭದ ಸಾಧ್ಯತೆಗಳಿವೆ. ಅನೇಕ ಸಮಸ್ಯೆಗಳನ್ನು ಜಯಿಸಲು ಈ ಸಮಯವು ತುಂಬಾ ಅನುಕೂಲಕರವಾಗಿದೆ.

ಧನು ರಾಶಿ- ಬುಧನ ನೇರನಡೆಯಿಂದ ಧನು ರಾಶಿಯ ಜಾತಕದವರ ಕನಸುಗಳು ನನಸಾಗಲಿವೆ. ನಿಮ್ಮ ವೃತ್ತಿಜೀವನದ ಗುರಿಗಳತ್ತ ಸಾಗಲು ಈ ಸಮಯವು ಅನುಕೂಲಕರ ಸಮಯ ಸಾಬೀತಾಗಲಿದೆ. ಯಶಸ್ಸನ್ನು ಸಾಧಿಸಲು ಈ ಸಮಯವನ್ನು ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಈ ಸಮಯದಲ್ಲಿ ಆರ್ಥಿಕ ಲಾಭದ ಸಾಧ್ಯತೆ ಹೆಚ್ಚಾಗಿದೆ. ಈ ಅವಧಿಯಲ್ಲಿ, ನಿಮ್ಮ ಆಯ್ಕೆಗೆ ಅನುಗುಣವಾಗಿಯೇ ನೀವು ಉದ್ಯೋಗಾವಕಾಶಗಳನ್ನು ಪಡೆಯುತ್ತೀರಿ. ನೀವು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದರೆ, ಯಶಸ್ಸಿನ ಎಲ್ಲಾ ಸಾಧ್ಯತೆಗಳಿವೆ. ಈ ಸಮಯವು ವಿದ್ಯಾರ್ಥಿಗಳಿಗೆ ಅತ್ಯುತ್ತಮ ಸಾಬೀತಾಗುವ ಸಾಧ್ಯತೆ ಇದೆ.   

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ).  

ZEENEWS TRENDING STORIES

By continuing to use the site, you agree to the use of cookies. You can find out more by Tapping this link