Budh Margi 2024: ಏಪ್ರಿಲ್ 2ರವರೆಗೆ ಈ ಜನರಿಗೆ ಅಪಾರ ಧನಸಂಪತ್ತು ಕರುಣಿಸಲಿದ್ದಾನೆ ಬುದ್ಧಿದಾತ ಬುಧ, ಭಾಗ್ಯ ಚಿನ್ನದಂತೆ ಹೊಳೆಯಲಿದೆ!

Sat, 13 Jan 2024-2:47 pm,

Budh Margi 2024: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ವೃಶ್ಚಿಕ ರಾಶಿಯಲ್ಲಿ ಬುಧನ ನೇರ ನಡೆ ಆರಂಭಗೊಂಡಿದ್ದು, ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ. (Spiritual News In Kannada)  

ಕುಂಭ ರಾಶಿ: ಬುಧ ನಿಮ್ಮ ಗೋಚರ ಜಾತಕದ ಆದಾಯ ಭಾವದಲ್ಲಿ ನೇರನಡೆ ಅನುಸರಿಸಿದ್ದಾನೆ ಮಾತು ಆತ ಏಪ್ರಿಲ್ 2, 2024ರವರೆಗೆ ಆತ ನೆರನಡೆಯಲ್ಲಿಯೇ ಇರಲಿದ್ದಾನೆ, ಹೀಗಾಗಿ ಈ ಅವಧಿಯಲ್ಲಿ ನಿಮ್ಮ ಆದಾಯದಲ್ಲಿ ಜಬರ್ದಸ್ತ್ ಹೆಚ್ಚಳ ಸಂಭವಿಸಲಿದೆ. ಆದಾಯದ ಹೊಸ ಮಾರ್ಗಗಳು ನಿಮ್ಮ ಪಾಲಿಗೆ ತೆರೆದುಕೊಳ್ಳಲಿವೆ. ಹೂಡಿಕೆಯಿಂದ ಲಾಭ ಉಂಟಾಗುವ ಎಲ್ಲಾ ಸಂಕೇತಗಳಿವೆ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡುತ್ತಿದ್ದರೆ, ಈ ಸಮಯ ಹಣ ಹೂಡಿಕೆಗೆ ಸಾಕಷ್ಟು ಅನುಕೂಲಕರವಾಗಿದೆ. ನಿಮ್ಮ ಕೌಶಲ್ಯದಲ್ಲಿ ಸುಧಾರಣೆಯಾಗಲಿದ್ದು, ಕಾರ್ಯಸ್ಥಳದಲ್ಲಿ ಅದರ ಲಾಭ ನಿಮಗೆ ಸಿಗಲಿದೆ ಮತ್ತು ನಿಮ್ಮ ಪ್ರಭಾವ ಹೆಚ್ಚಾಗಲಿದೆ. 

ವೃಶ್ಚಿಕ ರಾಶಿ: ಬುಧ ನಿಮ್ಮ ಗೋಚರ ಜಾತಕದ ಲಗ್ನ ಭಾವದಲ್ಲಿ ನೇರ ನಡೆ ಅನುಸರಿಸಿದ್ದಾನೆ. ಇದರಿಂದ ನಿಮ್ಮ ಏಕಾಗ್ರತೆ ಹೆಚ್ಚಾಗಲಿದ್ದು, ಬುದ್ಧಿ ವಿಕಸನಗೊಳ್ಳಲಿದೆ. ನಿರ್ಣಯ ಕೈಗೊಳ್ಳುವ ನಿಮ್ಮ ಕ್ಷಮತೆ ಹೆಚ್ಚಾಗಲಿದ್ದು, ಕೆಲಸ ಕಾರ್ಯಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. ಬಾಳಸಂಗಾತಿಯ ಜೊತೆಗೂಡಿ ಸಂಯುಕ್ತ ರೂಪದಲ್ಲಿ ಧನ ಸಂಪತ್ತನ್ನು ಹೆಚ್ಚಿಸುವಲ್ಲಿ ಯಶಸ್ಸನ್ನು ಕಾಣುವಿರಿ. ಈ ಅವಧಿಯಲ್ಲಿ ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ. 

ಕನ್ಯಾ ರಾಶಿ: ಬುಧನ ಈ ನೇರನಡೆ ನಿಮ್ಮ ಪಾಲಿಗೆ ಸಾಕಷ್ಟು ಅನುಕೂಲಕರ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಒಂದೆಡೆ ಬುಧ ನಿಮ್ಮ ರಾಶಿಯ ಅಧಿಪತಿಯಾಗಿದ್ದು, ನಿಮ್ಮ ಗೋಚರ ಜಾತಕದ ಚತುರ್ಥ ಭಾವದಲ್ಲಿ ಆತ ನೇರನಡೆ ಅನುಸರಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿಮಗೆ ವಾಹನ, ಆಸ್ತಿಪಾಸ್ತಿ ಸುಖ ಪ್ರಾಪ್ತಿಯಾಗಲಿದೆ. ಕಾರ್ಯಸ್ಥಳದಲ್ಲಿ ನೀವು ನಿಮ್ಮ ಕೆಲಸಗಳನ್ನು ಸಾಕಷ್ಟು ಪರಿಶ್ರಮದಿಂದ ಪೂರ್ಣಗೊಳಿಸುವಿರಿ ಮತ್ತು ನಿಮ್ಮ ವೃತ್ತಿ ಜೀವನ ಹೊಸ ಎತ್ತರಕ್ಕೆ ತಲುಪಲಿದೆ. ರಿಯಲ್ ಎಸ್ಟೇಟ್, ಮೆಡಿಕಲ್, ಆಸ್ತಿಪಾಸ್ತಿ, ಹೊಟೇಲ್ ಲೈನ್ ಗೆ ಸಂಬಂಧಿದ ವ್ಯಾಪಾರ ಮಾಡುವ ಜನರಿಗೆ ಉತ್ತಮ ಲಾಭ ಸಿಗಲಿದೆ. 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ZEENEWS TRENDING STORIES

By continuing to use the site, you agree to the use of cookies. You can find out more by Tapping this link