Budh Nakshatra Privartan: ಕೇತುವಿನ ನಕ್ಷತ್ರಕ್ಕೆ ಬುಧನ ಪ್ರವೇಶ, ಈ ಜನರ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭ!
ಜೋತಿಷ್ಯ ಶಾಸ್ತ್ರದ ಪ್ರಕಾರ ಅಶ್ವಿನಿ ನಕ್ಷತ್ರ 27 ನಕ್ಷತ್ರಗಳಲ್ಲಿ ಮೊದಲ ನಕ್ಷತ್ರವಾಗಿದ್ದು, ಈ ನಕ್ಷತ್ರಕ್ಕೆ ಕೇತು ಅಧಿಪತಿಯಾಗಿದ್ದಾನೆ. ಹೀಗಿರುವಾಗ ಕೇತುವಿನ ನಕ್ಷತ್ರಕ್ಕೆ ಬುಧನ ಪ್ರವೇಶದಿಂದ ಪ್ರತಿಭೆ, ಭಾಷೆ, ಕ್ಷಮತೆ, ಬುದ್ಧಿ ಇತ್ಯಾದಿಗಳ ಹೆಚ್ಚಳವಾಗುತ್ತದೆ.
ಮೇಷ ರಾಶಿ: ಬುಧನ ನಕ್ಷತ್ರ ಪ್ರವೇಶದಿಂದ ನಿಮಗೆ ವಿಶೇಷ ಲಾಭ ಸಿಗಲಿದೆ. ಪ್ರತಿಯೊಂದು ಕ್ಷೇತ್ರದಲ್ಲಿ ನಿಮಗೆ ಯಶಸ್ಸು ಸಿಗಲಿದ್ದು, ಆಕಸ್ಮಿಕ ಧನಲಾಭ ಕೂಡ ಪ್ರಾಪ್ತಿಯಾಗಲಿದೆ. ಆತ್ಮವಿಶ್ವಾಸ ಹೆಚ್ಚಾಗಲಿದೆ, ಇದರಿಂದ ಎಲ್ಲಾ ಕಡೆಗಳಿಂದಲೂ ಬಂದ ಸವಾಲುಗಳನ್ನು ದಿಟ್ಟತನದಿಂದ ಎದುರಿಸುವಿರಿ.
ಬುಧನ ಈ ನಕ್ಷತ್ರ ಪರಿವರ್ತನೆಯಿಂದ ಮೇಷ ರಾಶಿಯವರ ಸಮಯ ಬಂಧು ಮಿತ್ರರು, ಸಹೋದರ-ಸಹೋದರಿಯರ ಜೊತೆಗೆ ಉತ್ತಮ ಕಳೆಯಲಿದೆ. ನೀವು ಕೈಗೊಳ್ಳುವ ನಿರ್ಣಯ ಭವಿಷ್ಯದಲ್ಲಿ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ವೈವಾಹಿಕ ಜೀವನ ಸಾಕಷ್ಟು ಖುಷಿಗಳಿಂದ ಕೂಡಿರಲಿದೆ. ಆರೋಗ್ಯಕ್ಕೆ ಸಂಬಂಧಿಸಿದಂತೆ ಸ್ವಲ್ಪ ಸವಾಲುಗಳು ಎದುರಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಲಾಭದ ಎಲ್ಲಾ ಸಂಕೇತಗಳಿವೆ.
ಮಿಥುನ ರಾಶಿ: ಬುಧನ ಅಶ್ವಿನಿ ನಕ್ಷತ್ರ ಪ್ರವೇಶ ನಿಮ್ಮ ಪಾಲಿಗೆ ಲಾಭದಾಯಕ ಸಾಬೀತಾಗಲಿದೆ. ಆದಾಯದ ಹೊಸ ಮಾರ್ಗಗಳು ತೆರೆದುಕೊಳ್ಳಲಿವೆ. ನೌಕರಿ ವ್ಯಾಪಾರದಲ್ಲಿ ಸಾಕಷ್ಟು ಲಾಭ ಸಿಗಲಿದೆ. ವ್ಯಾಪಾರದ ಕುರಿತು ಹೇಳುವುದಾದರೆ, ಅತ್ಯುತ್ತಮ ಡೀಲ್ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗುವಿರಿ. ಹಿರಿಯ ಅಧಿಕಾರಿಗಳ ಬೆಂಬಲ ನಿಮಗೆ ಸಿಗಲಿದೆ.
ಬುಧನ ಅಶ್ವಿನಿ ನಕ್ಷತ್ರ ಪ್ರವೇಶದಿಂದ ಮಿಥುನ ರಾಶಿಯವರ ಆರ್ಥಿಕ ಪರಿಸ್ಥಿತಿ ಅಪಾರ ಸುಧಾರಿಸಲಿದೆ. ಪ್ರೇಮ ಜೀವನದಲ್ಲಿ ಹೊಸ ಶಕ್ತಿ ನಿರ್ಮಾಣಗೊಳ್ಳಲಿದೆ. ಆಸೆ ಆಕಾಂಕ್ಷೆಗಳು ಈಡೇರಲಿವೆ. ಇದರಿಂದ ಆತ್ಮವಿಶ್ವಾಸ ಹೆಚ್ಚಾಗಲಿದೆ. ಮಿತ್ರರ ಜೊತೆಗೆ ಉತ್ತಮ ಕಾಲ ಕಳೆಯುವಿರಿ, ವಾಹನ ಸಂಪತ್ತು ಖರೀದಿಗೆ ನೀವು ಮನಸ್ಸು ಮಾಡುವಿರಿ.
ಸಿಂಹ ರಾಶಿ: ಬುಧನ ನಕ್ಷತ್ರ ಪ್ರವೇಶ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಯಾತ್ರೆಗಳು ಸಂಭವಿಸುವ ಸಾಧ್ಯತೆ ಇದೆ. ಆದರೆ, ಈ ಯಾತ್ರೆಗಲಿನ ನಿಮಗೆ ಯಶಸ್ಸು ಸಿಗಲಿದೆ ಮತ್ತು ಆತ್ಮ ವಿಶ್ವಾಸ ಹೆಚ್ಚಾಗಲಿದೆ. ಕೌಟುಂಬಿಕ ವ್ಯಾಪಾರದಲ್ಲಿಯೂ ಕೂಡ ಉತ್ತಮ ಲಾಭ ನಿಮ್ಮದಾಗಲಿದೆ. ವೃತ್ತಿ ಜೀವನದಲ್ಲಿ ಸ್ಥಿರತೆ ಇರಲಿದೆ.
ಬುಧನ ಅಶ್ವಿನಿ ನಕ್ಷತ್ರ ಪ್ರವೇಶದಿಂದ ಸಿಂಹ ರಾಶಿಯ ಜನರು ತಮ್ಮ ಕೆಲಸವನ್ನು ಉತ್ತಮವಾಗಿ ನಿರ್ವಹಿಸುವರು. ಇದರಿಂದ ಅಧಿಕಾರಿಗಳು ನಿಮ್ಮ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸುವರು. ಇದರ ಜೊತೆಗೆ ನೀವು ನಿಮ್ಮ ಭವಿಷ್ಯದ ಕುರಿತು ಉತ್ತಮ ನಿರ್ಯಾಣ ಕೈಗೊಳ್ಳುವಿರಿ. ಒಂದು ವೇಳೆ ಹೂಡಿಕೆಗಾಗಿ ಯೋಜನೆ ರೂಪಿಸುತ್ತಿದ್ದರೇ, ಈ ಅವಧಿ ನಿಮಗೆ ಸಾಕಷ್ಟು ಲಾಭದಾಯಕ ಸಾಬೀತಾಗಲಿದೆ. ಮಾನಸಿಕ, ಶಾರೀರಿಕ ಒತ್ತಡದಿಂದ ಮುಕ್ತಿ ಸಿಗಲಿದೆ.
(Disclaimer- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)