Mercury-Venus Conjunction: ಆಗಸ್ಟ್ 7ರವರೆಗೆ 5 ರಾಶಿಗಳ ಮೇಲೆ ಬುಧ-ಶುಕ್ರ ದೆಸೆಯಿಂದ ಅಪಾರ ಧನವೃಷ್ಟಿ!

Thu, 27 Jul 2023-6:44 pm,

ಮೇಷ ರಾಶಿ: ಮೇಷ ರಾಶಿಯವರಿಗೆ ಶುಕ್ರ-ಬುಧರ ಹತ್ತಿರ ಬರುವಿಕೆ ಸಾಕಷ್ಟು ಫಲಪ್ರದ ಸಾಬೀತಾಗಲಿದೆ. ಈ ಮೈತ್ರಿಯ ಪರಿಣಾಮದಿಂದ ಸಾಮಾಜಿಕ ಮಟ್ಟದಲ್ಲಿ ಜನರಿಂದ ನಿಮಗೆ ಸಹಕಾರ ಸಿಗಲಿದೆ. ಹಿರಿಯ ಅಧಿಕಾರಿಗಳ ಬೆಂಬಲ ನಿಮಗೆ ಪ್ರಾಪ್ತಿಯಾಗಲಿದೆ ಮತ್ತು ಅವರ ನಡವಳಿಕೆಯು ನಿಮಗೆ ಪ್ರೋತ್ಸಾಹ ನೀಡಲಿದೆ. ಆದಾಗ್ಯೂ, ನಿಮ್ಮ ಕೆಲಸದ ಕ್ಷೇತ್ರದಲ್ಲಿ ಕೆಲವು ಧನಾತ್ಮಕ ಬದಲಾವಣೆಗಳಾಗಬಹುದು. ಅಲ್ಲದೆ, ಈ ಸಮಯದಲ್ಲಿ ನಿಮ್ಮ ಎಲ್ಲಾ ಆಸೆಗಳು ಮತ್ತು ಗುರಿಗಳು ಈಡೇರಲಿವೆ. ಉದ್ಯಮಿಗಳಿಗೂ ಹೆಚ್ಚಿನ ಲಾಭವನ್ನು ಗಳಿಸುವ ಅವಕಾಶ ಸಿಗಲಿದೆ. ನಿಮಗೆ ದೊಡ್ಡ ಆರ್ಡರ್ ಸಿಗುವ ಸಾಧ್ಯತೆ ಇದೆ ಮತ್ತು ಉದ್ಯೋಗಾಕಾಂಕ್ಷಿಗಳ ಉದ್ಯೋಗ ಹುಡುಕಾಟಕ್ಕೆ ತೆರೆಬೀಳಲಿದೆ. ರಾಜಕಾರಣಿಗಳಿಗೆ ಸ್ಥಾನಮಾನ ಪ್ರಾತಿಯಾಗಲಿದೆ.   

ವೃಷಭ ರಾಶಿ- ಶುಕ್ರ ಮತ್ತು ಬುಧರ ಮೈತ್ರಿವೃಷಭ ರಾಶಿಯವರಿಗೆ ಎಲ್ಲಾ ರೀತಿಯ ಭೌತಿಕ ಸುಖ ಸಂತೋಷಗಳನ್ನು ನೀಡಲಿದೆ. ವ್ಯಾಪಾರ ಮತ್ತು ವೃತ್ತಿಪರ ಜೀವನದಲ್ಲಿ ನಿಮಗೆ ನಿಮ್ಮ ಅದೃಷ್ಟದ ಸಂಪೂರ್ಣ ಬೆಂಬಲ ಸಿಗಲಿದೆ. ಹೊಸ ಉದ್ಯೋಗ ಸಿಗುವ ಸಾಧ್ಯತೆಯೂ ಇದೆ. ಉದ್ಯೋಗ ನಿಮಿತ್ತ ವಿದೇಶಕ್ಕೆ ತೆರಳುವ ಆಲೋಚನೆಯಲ್ಲಿರುವ ಸ್ಥಳೀಯರಿಗೆ ಉತ್ತಮ ಅವಕಾಶ ದೊರೆಯಲಿದೆ. ಸ್ವಂತ ವ್ಯಾಪಾರವನ್ನು ಹೊಂದಿರುವ ಮತ್ತು ತಮ್ಮ ವ್ಯಾಪಾರವನ್ನು ವಿಸ್ತರಿಸಲು ಬಯಸುವ ಸ್ಥಳೀಯರು ಪ್ರಸ್ತುತ ಮಾರುಕಟ್ಟೆ ಪರಿಸ್ಥಿತಿಯ ಲಾಭವನ್ನು ಪಡೆದುಕೊಳ್ಳಬೇಕು. ಆಧ್ಯಾತ್ಮಿಕತೆಯಲ್ಲಿ ನಿಮ್ಮ ಆಸಕ್ತಿಯು ಹೆಚ್ಚಾಗುವ ಸಾಧ್ಯತೆಯಿದೆ ಮತ್ತು ನೀವು ಹೆಚ್ಚಿನ ಸಮಯವನ್ನು ಧ್ಯಾನದಲ್ಲಿ ಕಳೆಯುತ್ತೀರಿ. ಅದು ನಿಮ್ಮ ವ್ಯಕ್ತಿತ್ವದ ಬೆಳವಣಿಗೆಗೆ ಪ್ರಯೋಜನಕಾರಿಯಾಗಿದೆ.  

ಮಿಥುನ ರಾಶಿ-ಮಿಥುನ ರಾಶಿಯವರಿಗೆ ಈ ಮೈತ್ರಿಯು ತುಂಬಾ ಶುಭಕರವಾಗಿರುತ್ತದೆ. ಹಣಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವ ಸಾಧ್ಯತೆಯಿದೆ. ನಿಮ್ಮ ಸಂಬಳದಲ್ಲಿ ಹೆಚ್ಚಳ ಅಥವಾ ಉದ್ಯೋಗ ಕ್ಷೇತ್ರದಲ್ಲಿನ ಅತ್ಯುತ್ತಮ ಕೆಲಸಕ್ಕಾಗಿ ಬೋನಸ್ ಪಡೆಯುವ ಸಾಧ್ಯತೆಗಳಿವೆ. ಶುಕ್ರ ಮತ್ತು ಬುಧದ ಸಂಯೋಗವು ನಿಮಗೆ ಧೈರ್ಯವನ್ನು ತುಂಬುತ್ತದೆ ಮತ್ತು ಜೀವನದಲ್ಲಿ ಪ್ರಮುಖ ಕಾರ್ಯಗಳನ್ನು ಸ್ವೀಕರಿಸಲು ನಿಮ್ಮನ್ನು ಪ್ರೋತ್ಸಾಹಿಸುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ನಿಮ್ಮನ್ನು ಪ್ರೇರೇಪಿಸುತ್ತೀರಿ. ಸ್ಥಗಿತಗೊಂಡ ಕೆಲಸ ಕಾರ್ಯಗಳು ಮತ್ತೆ ವೇಗ ಪಡೆದುಕೊಳ್ಳಲಿವೆ. ನೀವು ಈ ಹಿಂದೆ ಮಾಡಿದ ಯಾವುದಾದರೊಂದು ಹೂಡಿಕೆಯಿಂದ ಲಾಭವನ್ನು ಗಳಿಸುವಲ್ಲಿ ಯಶಸ್ವಿಯಾಗುವಿರಿ. ಹಣಕಾಸಿನ ಬಿಕ್ಕಟ್ಟಿನ ಸ್ಥಿತಿಯಲ್ಲಿ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ.   

ಕರ್ಕ ರಾಶಿ-ಕರ್ಕ ರಾಶಿಯವರ ಗೋಚರ ಜಾತಕದ ದ್ವಿತೀಯ ಭಾವದಲ್ಲಿ ಬುಧ ಹಾಗೂ ಶುಕ್ರರ ಮೈತ್ರಿ ನೆರವೇರುತ್ತಿದೆ. ಈ ಸಮಯದಲ್ಲಿ ನೀವು ಶಾಂತವಾಗಿರುತ್ತೀರಿ ಮತ್ತು ಇದು ನಿಮ್ಮ ಸೃಜನಶೀಲತೆಯನ್ನು ಹೆಚ್ಚಿಸುತ್ತದೆ. ಇದರಿಂದ ಕೆಲಸದಲ್ಲಿ ಸುಗಮವಾಗಿ ಕೆಲಸ ಮಾಡಲು ನೀವು ಉತ್ತಮ ತಂತ್ರಗಳನ್ನು ರೂಪಿಸಲು ಸಾಧ್ಯವಾಗುತ್ತದೆ. ಕಛೇರಿಯಲ್ಲಿ ನೀವು ಮೆಚ್ಚುಗೆ ಪಾತ್ರರಾಗುವಿರಿ ಮತ್ತು ಸಹೋದ್ಯೋಗಿಗಳು ಮತ್ತು ಹಿರಿಯ ಅಧಿಕಾರಿಗಳಲ್ಲಿ ನಿಮ್ಮ ಖ್ಯಾತಿ ಹೆಚ್ಚಾಗಲಿದೆ. ಸೃಜನಶೀಲ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಈ ಸಮಯವು ತುಂಬಾ ಪ್ರಯೋಜನಕಾರಿಯಾಗಿದೆ. ಜನರು ನಿಮ್ಮ ಮಾತಿನಿಂದ  ಆಕರ್ಷಿತರಗಲಿದ್ದಾರೆ. ವಿಶೇಷವಾಗಿ ಬರವಣಿಗೆ, ಪತ್ರಿಕೋದ್ಯಮ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಜನರಿಗೆ ಆಕಷ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ.   

ಸಿಂಹ ರಾಶಿ- ಹಾಗೆ ನೋಡಿದರೆ ಈ ಯುತಿ ಈ ರಾಶಿಯಲ್ಲಿಯೇ ನೆರವೇರುತ್ತಿದೆ. ನಿಮ್ಮ ಮನಸ್ಸು ಸಂತೋಷದಿಂದ ಕೂಡಿರುತ್ತದೆ.. ಈ ಸಮಯದಲ್ಲಿ, ನೀವು ತುಂಬಾ ಶಾಂತವಾಗಿರುತ್ತೀರಿ, ಇದರಿಂದ ನೀವು ನಿಮ್ಮ ಎಲ್ಲಾ ಕೆಲಸಗಳನ್ನು ಬಹಳ ಸುಲಭವಾಗಿ ಮಾಡಲು ಸಾಧ್ಯವಾಗುತ್ತದೆ ಮತ್ತು ನಂತರ ನೀವು ಅದರಿಂದ ಉತ್ತಮ ಪ್ರಯೋಜನಗಳನ್ನು ಪಡೆಯುತ್ತೀರಿ. ನಿಮ್ಮ ಪ್ರಯತ್ನಗಳಿಂದ ವಿತ್ತೀಯ ಲಾಭಗಳನ್ನು ಗಳಿಸುವಲ್ಲಿ ಈ ಮೈತ್ರಿ ನಿಮಗೆ ಸಹಾಯ ಮಾಡಲಿದೆ. ಏಕೆಂದರೆ ಲಗ್ನ ಭಾವದಲ್ಲಿ ನಿಮ್ಮ ರಾಷ್ಯಾಧಿಪ ಸೂರ್ಯ ವಿರಾಜಮಾನನಾಗಿದ್ದಾನೆ ಈ ಸಂಯೋಗದಿಂದ ನೀವು ದೊಡ್ಡ ಉದ್ಯಮಿ ಅಥವಾ ರಾಜಕಾರಣಿಯಾಗುವ ಅವಕಾಶವನ್ನು ಪಡೆಯಬಹುದು. ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಕಾಣುವಿರಿ. ವಿಶೇಷವಾಗಿ ವಿರುದ್ಧ ಲಿಂಗದವರಲ್ಲಿ ನಿಮ್ಮ ಜನಪ್ರಿಯತೆ ಹೆಚ್ಚಾಗಲಿದೆ. ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)  

ZEENEWS TRENDING STORIES

By continuing to use the site, you agree to the use of cookies. You can find out more by Tapping this link