ಬುಧನ ಶ್ರೀರಕ್ಷೆಯಿಂದ ಬೆಳಗಲಿದೆ ಈ ರಾಶಿಯವರ ಲಕ್: ಸಂಪತ್ತು ಹೆಚ್ಚಾಗಲಿದೆ-ವ್ಯಾಪಾರದಲ್ಲಿ ಉತ್ತುಂಗಕ್ಕೇರುವ ಭಾಗ್ಯ

Mon, 17 Jul 2023-3:01 pm,

ಬುಧ ಗ್ರಹವನ್ನು ಜ್ಞಾನ, ಬುದ್ಧಿವಂತಿಕೆ, ವ್ಯವಹಾರ, ಗಣಿತ, ತರ್ಕಶಾಸ್ತ್ರದ ಅಂಶವೆಂದು ಪರಿಗಣಿಸಲಾಗುತ್ತದೆ.

ಮಿಥುನ ರಾಶಿ: ಬುಧ ಗ್ರಹದ ಉದಯದಿಂದ ಮಿಥುನ ರಾಶಿಯವರಿಗೆ ಲಾಭವಾಗಲಿದೆ. ಈ ರಾಶಿಯವರಿಗೆ ಹಣಕ್ಕೆ ಕಿಂಚಿತ್ತೂ ಸಮಸ್ಯೆ ಇರಲ್ಲ. ಆತ್ಮವಿಶ್ವಾಸ ಹೆಚ್ಚಾಗಲಿದೆ. ಆಸ್ತಿ ಮತ್ತು ವಾಹನಗಳನ್ನು ಖರೀದಿಸುವ ಅವಕಾಶವಿರುತ್ತದೆ.

ಕನ್ಯಾ ರಾಶಿ: ಕನ್ಯಾ ರಾಶಿಯವರಿಗೆ ಬುಧದ ಉದಯವೂ ಫಲಕಾರಿಯಾಗಲಿದೆ. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸವು ಉತ್ತುಂಗದಲ್ಲಿರುತ್ತದೆ. ಉದ್ಯೋಗದ ನಿರೀಕ್ಷೆಯಲ್ಲಿರುವವರಿಗೆ ಯಶಸ್ಸು ಸಿಗಲಿದೆ. ಕೆಲಸ ಮತ್ತು ವ್ಯವಹಾರದಲ್ಲಿಯೂ ಪ್ರಗತಿಯ ಸಾಧ್ಯತೆಗಳಿವೆ.

ಮಕರ ರಾಶಿ: ಮಕರ ರಾಶಿಯವರಿಗೆ ಬುಧದ ಉದಯವು ತುಂಬಾ ಶುಭಕರವಾಗಿರುತ್ತದೆ. ಈ ರಾಶಿಯ ಜನರು ಅದೃಷ್ಟವನ್ನು ಪಡೆಯುವ ಅವಕಾಶಗಳನ್ನು ಹೊಂದಿರುತ್ತಾರೆ. ಯಶಸ್ಸು ಸಿಗಲಿದೆ. ವಿವಾಹಿತರ ಜೀವನವು ಹೆಚ್ಚು ಆಹ್ಲಾದಕರವಾಗಿರುತ್ತದೆ. ಸಹಭಾಗಿತ್ವದಲ್ಲಿ ಕೆಲಸ ಮಾಡುವವರಿಗೆ ಲಾಭವಾಗಲಿದೆ.

(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ZEENEWS TRENDING STORIES

By continuing to use the site, you agree to the use of cookies. You can find out more by Tapping this link