Budh Uday: ಬುಧ ಉದಯದ ಪ್ರಭಾವ, ನಾಲ್ಕು ರಾಶಿಯವರ ಜೀವನದಲ್ಲಿ ತೆರೆಯಲಿದೆ ಅದೃಷ್ಟದ ಬಾಗಿಲು
ವೈದಿಕ ಜ್ಯೋತಿಷ್ಯ ಶಾಸ್ತ್ರದಲ್ಲಿ, ತರ್ಕ, ಬುದ್ದಿವಂತಿಕೆ, ವ್ಯವಹಾರ, ಸಂವಹನದ ಅಂಶ ಎಂದು ಪರಿಗಣಿಸಲಾಗಿರುವ ಬುಧ ಇಂದು (ಮಾರ್ಚ್ 15) ಮೀನ ರಾಶಿಯಲ್ಲಿ ಉದಯಿಸಲಿದ್ದಾನೆ. ಬುಧ ಉದಯದೊಂದಿಗೆ ನಾಲ್ಕು ರಾಶಿಯ ಜನರ ಅದೃಷ್ಟವೂ ಎಚ್ಚರಗೊಳ್ಳಲಿದ್ದು, ಅವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳು ತೆರೆಯಲಿವೆ ಎಂದು ಹೇಳಲಾಗುತ್ತಿದೆ. ಆ ಅದೃಷ್ಟದ ರಾಶಿಗಳೆಂದರೆ...
ಮೀನ ರಾಶಿಯಲ್ಲಿ ಉದಯಿಸಲಿರುವ ಬುಧನು ಮೇಷ ರಾಶಿಯವರಿಗೆ ಹಲವು ಕ್ಷೇತ್ರಗಳಲ್ಲಿ ಫಲಕಾರಿ ಆಗಿದ್ದು, ಈ ಸಮಯದಲ್ಲಿ ಆದಾಯ ಹೆಚ್ಚಳದಿಂದ ಹಣಕಾಸಿನ ಸ್ಥಿತಿ ಉತ್ತಮಗೊಳ್ಳಲಿದೆ. ಉದ್ಯೋಗಸ್ಥರಿಗೆ ಪ್ರಮೋಷನ್ ಭಾಗ್ಯ, ಸ್ವಂತ ವ್ಯವಹಾರ ಮಾಡುವವರಿಗೆ ಬಂಪರ್ ಲಾಭವಾಗಲಿದೆ.
ಬುಧ ಉದಯವು ವೃಷಭ ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದೆ. ಇದು ವೃತ್ತಿ ಬದುಕಿನಲ್ಲಿ ಹೊಸ ಆದಾಯಗಳನ್ನು ಸೃಷ್ಟಿಸಲಿದ್ದು, ಪ್ರಗತಿಯನ್ನು ಕಾಣುವಿರಿ. ನಿಮ್ಮ ಕಠಿಣ ಪರಿಶ್ರಮಕ್ಕೆ ಸರಿಯಾದ ಪ್ರತಿಫಲವನ್ನು ಪಡೆಯುವಿರಿ.
ಬುಧ ಉದಯವು ಮಿಥುನ ರಾಶಿಯ ಜನರಿಗೂ ತುಂಬಾ ಫಲಪ್ರದವಾಗಿದೆ. ಈ ಸಮಯದಲ್ಲಿ ವೃತ್ತಿ ಬದುಕಿನಲ್ಲಿ ಪ್ರಗತಿ ಕಂಡು ಬರಲಿದೆ. ಉದ್ಯಮಿಗಳಿಗೆ ಆಕಸ್ಮಿಕ ಧನಲಾಭ ಸಾಧ್ಯತೆ ಇದೆ. ಹೊಸ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿರುವವರಿಗೂ ಇದು ಅತ್ಯುತ್ತಮ ಸಮಯ ಎಂತಲೇ ಹೇಳಬಹುದು.
ಬುಧ ಉದಯವು ಸಿಂಹ ರಾಶಿಯವರ ಬದುಕಿನಲ್ಲಿ ಬಂಗಾರದ ಸಮಯವನ್ನೇ ಹೊತ್ತು ತರಲಿದೆ. ಈ ವೇಳೆ ಉದ್ಯೋಗಸ್ಥರಿಗೆ ಹೊಸ ಜವಾಬ್ದಾರಿಗಳು ಪ್ರಾಪ್ತಿಯಾಗಲಿದ್ದು, ಇದನ್ನು ನೀವು ಯಶಸ್ವಿಯಾಗಿ ನಿರ್ವಹಿಸುವಿರಿ. ಹೂಡಿಕೆಯಿಂದ ಲಾಭ. ಕುಟುಂಬದಲ್ಲಿ ಸುಖ-ಸಂತೋಷವನ್ನು ಕಾಣಬಹುದು.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.