Budh Vakri 2023: ಧನು ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆ, ನಾಲ್ಕು ರಾಶಿಯವರಿಗೆ ಸಂಕಷ್ಟ
ಜ್ಯೋತಿಷ್ಯ ಶಾಸ್ತ್ರದಲ್ಲಿ, ಬುಧ ಗ್ರಹವನ್ನು ಗ್ರಹಗಳ ರಾಜಕುಮಾರ ಎಂದು ಬಣ್ಣಿಸಲಾಗುತ್ತದೆ. ಮಾತ್ರವಲ್ಲ, ಬುಧನನ್ನು ಬುದ್ಧಿವಂತಿಕೆ, ಜ್ಞಾನ, ತರ್ಕ, ಸಂವಹನ ಕೌಶಲ್ಯಗಳ ಅಂಶ ಎಂತಲೂ ಹೇಳಲಾಗುತ್ತದೆ.
ಬುಧ ಸಂಚಾರ ಬದಲಾವಣೆ : ಬುಧನು ಡಿಸೆಂಬರ್ 13 ರಂದು ಮಧ್ಯಾಹ್ನ 12:01 ಕ್ಕೆ ಧನು ರಾಶಿಯಲ್ಲಿ ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಡಿಸೆಂಬರ್ 28 ರವರೆಗೂ ಇದೇ ಸ್ಥಿತಿಯಲ್ಲಿರುತ್ತಾನೆ.
ಬುಧ ವಕ್ರಿ ಪ್ರಭಾವ: ಬುಧನ ಈ ವಕ್ರ ನಡೆಯ ಪರಿಣಾಮ ಎಲ್ಲಾ 12 ರಾಶಿಯವರ ಮೇಲೂ ಕಂಡು ಬರುತ್ತದೆ. ಆದರೂ, ಈ ಸಮಯವು 4 ರಾಶಿಯವರಿಗೆ ತುಂಬಾ ಭಾರವಾಗಿರುತ್ತದೆ.
ಬುಧ ಹಿಮ್ಮುಖ ಚಲನೆಯ ಅಶುಭ ಪರಿಣಾಮ : ಈ ಸಮಯದಲ್ಲಿ ನಾಲ್ಕು ರಾಶಿಯವರ ಜೀವನದಲ್ಲಿ ಅಶುಭ ಪರಿಣಾಮಗಳನ್ನು ಬೀರುವ ಬುಧ ಸ್ನೇಹ ಸಂಬಂಧದಲ್ಲಿ ಮಾತ್ರವಲ್ಲದೆ ಉದ್ಯೋಗ ಕ್ಷೇತ್ರದಲ್ಲೂ ಕೆಲವು ಸಮಸ್ಯೆಗಳನ್ನು ಸೃಷ್ಟಿಸಬಹುದು ಎಂದು ಹೇಳಲಾಗುತ್ತಿದೆ. ಆ ರಾಶಿಗಳೆಂದರೆ...
ಮೇಷ ರಾಶಿ: ಬುಧನ ಹಿಮ್ಮುಖ ಚಲನೆಯು ಮೇಷ ರಾಶಿಯವರಿಗೆ ಸಂವಹನಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು. ಹಾಗಾಗಿ, ನೀವು ಯಾರೊಂದಿಗಾದರೂ ಮಾತನಾಡುವಾಗ ನಿಮ್ಮ ಮಾತು, ಪದಗಳ ಆಯ್ಕೆ ಬಗ್ಗೆ ತುಂಬಾ ಜಾಗರೂಕಾರಾಗಿರಿ.
ಮಿಥುನ ರಾಶಿ: ವಕ್ರಿ ಬುಧನು ಮಿಥುನ ರಾಶಿಯವರ ಜೀವನದಲ್ಲಿ ಹಲವು ರೀತಿಯ ಸಮಸ್ಯೆಗಳನ್ನು ಸೃಷ್ಟಿಸಲಿದ್ದಾನೆ. ಈ ಸಮಯದಲ್ಲಿ ನೀವು ನಿಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ಕೆಲವು ವಿವಾದಗಳು ಅಥವಾ ತಪ್ಪುಗ್ರಹಿಕೆಗಳು ಹೆಚ್ಚಾಗಬಹುದು.
ಕರ್ಕಾಟಕ ರಾಶಿ: ಬುಧನ ಹಿಮ್ಮುಖ ನಡೆಯ ಅಶುಭ ಪರಿಣಾಮಗಳು ಕರ್ಕಾಟಕ ರಾಶಿಯವರ ಮೇಲೂ ಸಹ ಕಂಡು ಬರುತ್ತದೆ. ಈ ಸಂದರ್ಭದಲ್ಲಿ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಅನೇಕ ಏರಿಳಿತಗಳು ಇರಬಹುದು. ನಿಮ್ಮ ಒರಟು ಮಾತುಗಳಿಂದಾಗಿ ನೀವು ಕೆಲವು ವಿವಾದಗಳಲ್ಲಿ ಸಿಲುಕಿಕೊಳ್ಳಬಹುದು.
ಧನು ರಾಶಿ: ಸ್ವ ರಾಶಿಯಲ್ಲಿ ಬುಧನ ಹಿಮ್ಮುಖ ಚಲನೆಯಿಂದಾಗಿ ಧನು ರಾಶಿಯ ಜನರ ಖ್ಯಾತಿಗೆ ಧಕ್ಕೆ ಬರುವ ಸಾಧ್ಯತೆಗಳಿವೆ. ಕಚೇರಿಯಲ್ಲಿ ನಿಮ್ಮ ಕೆಲಸದಲ್ಲಿ ಹಲವು ರೀತಿಯ ಅಡೆತಡೆಗಳು ಎದುರಾಗಬಹುದು. ಈ ಸಮಯದಲ್ಲಿ ಯಾವುದೇ ವೃತ್ತಿ ಸಂಬಂಧಿತ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.