ಡಿಸೆಂಬರ್ 13 ರಿಂದ ಈ ಜನರಿಗೆ ಅಪಾರ ಧನ-ಸಂಪತ್ತು ಕರುಣಿಸಲಿದ್ದಾನೆ ಧನಕುಬೇರ, ಜೀವನದಲ್ಲಿ ಹಣವೋ ಹಣ ಹರಿದುಬರಲಿದೆ!
Budh Vakri In Vruschik Rashi 2023: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಶೀಘ್ರದಲ್ಲಿಯೇ ಬುಧ ವೃಶ್ಚಿಕ ರಾಶಿಯಲ್ಲಿ ತನ್ನ ವಕ್ರ ನಡೆಯನ್ನು ಅನುಸರಿಸಲಿದ್ದು, ಇದರಿಂದ ಕೆಲ ರಾಶಿಗಳ ಜನರ ಭಾಗ್ಯ ಚಿನ್ನದಂತೆ ಹೊಳೆಯಲಿದೆ ಮತ್ತು ಅವರ ಜೀವನದಲ್ಲಿ ಸಾಕಷ್ಟು ಧನಲಾಭ ಉಂಟಾಗುವ ಸಾಧ್ಯತೆ ಇದೆ. (Spiritual News In Kannada)
ವೃಷಭ ರಾಶಿ: ಬುಧ ನಿಮ್ಮ ಗೋಚರ ಜಾತಕದ ಸಪ್ತಮ ಭಾವದಲ್ಲಿ ತನ್ನ ವಕ್ರನಡೆಯನ್ನು ಅನುಸರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ವಿವಾಹಿತರ ವೈವಾಹಿಕ ಜೀವನ ಸುಖಮಯವಾಗಿರಲಿದೆ. ನಿಮ್ಮ ಕ್ಷೇತ್ರದಲಿ ನಿಮಗೆ ನಿರೀಕ್ಷಿತ ಫಲಗಳು ಪ್ರಾಪ್ತಿಯಾಗಳಿವೆ. ಅರ್ಥಾತ್ ನೀವು ಮಾಡುವಂತಹ ಕೆಲಸದಲ್ಲಿ ನಿಮಗೆ ಲಾಭ ಉಂಟಾಗಲಿದೆ ಮತ್ತು ನಿಮ್ಮ ಜೀವನದಲ್ಲಿ ಅದರ ಸಕಾರಾತ್ಮಕ ಪ್ರಭಾವ ಬೀಳಲಿದೆ. ಅವಿವಾಹಿತರಿಗೆ ವಿವಾಹ ಪ್ರಸ್ತಾಪ ಬರುವ ಸಾಧ್ಯತೆ ಇದೆ. ಹೊಸ ಕಾರ್ಯ ಆರಂಭಿಸಲು ಇದು ಸಕಾಲವಾಗಿದೆ.
ಕುಂಭ ರಾಶಿ: ಬುಧನ ವಕ್ರ ನಡೆ ನಿಮ್ಮ ಪಾಲಿಗೆ ಲಾಭದಾಯಕವಾಗಿರಲಿದೆ. ಏಕೆಂದರೆ ಬುಧ ನಿಮ್ಮ ಗೋಚರ ಜಾತಕದ ಕರ್ಮ ಭಾವದಲ್ಲಿ ವಕ್ರನಡೆಯನ್ನು ಅನುಸರಿಸಲಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನಿರುದ್ಯೋಗಿಗಳಿವೆ ಉದ್ಯೋಗ ಭಾಗ್ಯ ಪ್ರಾಪ್ತಿಯಾಗುವ ಸಾಧ್ಯತೆ ಇದೆ. ಒಂದು ವೇಳೆ ನೀವು ವ್ಯಾಪಾರಿಗಳಾಗಿದ್ದರೆ, ದೊಡ್ಡ ವ್ಯಾಪಾರ ಒಪ್ಪಂದವನ್ನು ನೀವು ಅಂತಿಮಗೊಳಿಸುವ ಸಾಧ್ಯತೆ ಇದೆ. ಅದರಿಂದ ಭವಿಷ್ಯದಲ್ಲಿ ನಿಮಗೆ ಸಾಕಷ್ಟು ಲಾಭ ಸಿಗಲಿದೆ. ವ್ಯಾಪಾರದಲ್ಲಿ ನಿರೀಕ್ಷಿತ ಯಶಸ್ಸು ಸಿಗಲಿದೆ. ನೌಕರಿಯಲ್ಲಿ ಪ್ರಮೋಷನ್ ಸಿಗುವ ಎಲ್ಲಾ ಸಾಧ್ಯತೆಗಳಿವೆ.
ಮೀನ ರಾಶಿ: ಬುಧ ನಿಮ್ಮ ಜಾತಕದ ಭಾಗ್ಯ ಸ್ಥಾನದಲಿ ವಕ್ರನಡೆ ಅನುಸರಿಸಲಿದ್ದಾನೆ. ಇದರಿಂದ ನಿಮಗೆ ಭಾಗ್ಯದ ಸಂಪೂರ್ಣ ಬೆಂಬಲ ಸಿಗಲಿದೆ. ಆಸೆ ಆಕಾಂಕ್ಷೆಗಳು ಈಡೇರಲಿವೆ. ನೀವು ಅಂದುಕೊಂಡ ಯೋಜನೆಗಳು ಪೂರ್ಣಗೊಳ್ಳಲಿವೆ. ಆದಾಯದ ಹಲವು ಮಾರ್ಗಗಳು ತೆರೆದುಕೊಳ್ಳಲಿವೆ ಮತ್ತು ಹಣಗಳಿಕೆಯ ಅವಕಾಶಗಳು ಒದಗಿ ಬರಲಿವೆ ಮತ್ತು ನಿಮಗೆ ಶುಭ ಲಾಭವಾಗಲಿದೆ. ಮೊದಲಿಗಿಂತ ಹೆಚ್ಚು ಹಣ ಉಳಿತಾಯ ಮಾಡುವಲ್ಲಿ ನೀವು ಯಶಸ್ವಿಯಾಗುವಿರಿ. ಈ ಅವಧಿಯಲ್ಲಿ ನೀವು ಮಂಗಳ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೊಳ್ಳುವಿರಿ. ಕೆಲಸ ಕಾರ್ಯಗಳ ನಿಮಿತ್ತ ನಿಮ್ಮ ಯಾತ್ರೆ ಸಂಭವಿಸುವ ಸಾಧ್ಯತೆ ಇದೆ. ಈ ಯಾತ್ರೆ ಶುಭ ಸಾಬೀತಾಗಲಿದೆ. ನಿಮ್ಮ ಮೇಲೆ ಶನಿಯ ಸಾಡೇಸಾತಿ ಇರುವ ಕಾರಣ ಆರೋಗ್ಯ ಸ್ಥಿತಿ ಸ್ವಲ್ಪ ಬಿಗಡಾಯಿಸುವ ಸಾಧ್ಯತೆ ಇದೆ.
(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಯಾವುದೇ ಮಾಹಿತಿಯ ನಿಖರತೆ ಅಥವಾ ಸ್ಪಷ್ಟತೆಯನ್ನು ಜೀ ಕನ್ನಡ ನ್ಯೂಸ್ ಖಚಿತಪಡಿಸುವುದಿಲ್ಲ. ಜೋತಿಷಿಗಳು, ಪಂಚಾಂಗ, ಮಾನ್ಯತೆಗಳು ಅಥವಾ ಧರ್ಮ ಗ್ರಂಥಗಳಂತಹ ವಿವಿಧ ಮಾಧ್ಯಮಗಳಿಂದ ಸಂಗ್ರಹಿಸಲಾಗಿರುವ ಮಾಹಿತಿಯನ್ನು ನಿಮ್ಮ ಬಳಿ ತಲುಪಿಸುವುದು ಮಾತ್ರ ನಮ್ಮ ಉದ್ದೇಶವಾಗಿದೆ. ಈ ಮಾಹಿತಿಯ ನೈಜತೆ ಹಾಗೂ ಸ್ಪಷ್ಟತೆಯನ್ನು ಖಚಿತಪಡಿಸಲಾಗುವುದಿಲ್ಲ. ಹೀಗಾಗಿ ಯಾವುದೇ ರೀತಿಯಲ್ಲಿ ಈ ಮಾಹಿತಿಯನ್ನು ಬಳಸುವ ಮುನ್ನ ಸಂಬಂಧಿತ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)