ವರ್ಷದ ಬಳಿಕ ತುಲಾದಲ್ಲಿ ಲಕ್ಷ್ಮಿ ನಾರಾಯಣ ಯೋಗ: ಈ ರಾಶಿಯವರಿಗೆ ರಾಜಯೋಗ, ಪ್ರತಿ ಹೆಜ್ಜೆಗೂ ಯಶಸ್ಸು
ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ವರ್ಷದ ಬಳಿಕ ಅಕ್ಟೋಬರ್‌ನಲ್ಲಿ ತುಲಾ ರಾಶಿಯಲ್ಲಿ ಬುಧ-ಶುಕ್ರರ ಮೈತ್ರಿ ಏರ್ಪಡಲಿದೆ.
ತುಲಾ ರಾಶಿಯಲ್ಲಿ ಬುಧ-ಶುಕ್ರ ಯುತಿಯಿಂದ ಅತ್ಯಂತ ಶುಭಕರ ಯೋಗಗಳಲ್ಲಿ ಒಂದಾದ ಲಕ್ಷ್ಮಿ ನಾರಾಯಣ ಯೋಗ ರೂಪುಗೊಳ್ಳುತ್ತಿದೆ.
ಲಕ್ಷ್ಮಿ ನಾರಾಯಣ ರಾಜಯೋಗ ಪ್ರಭಾವದಿಂದ ಮೂರು ರಾಶಿಯ ಜನರಿಗೆ ವೃತ್ತಿ-ವ್ಯವಹಾರದಲ್ಲಿ ಭಾರಿ ಯಶಸ್ಸು, ಪ್ರತಿ ಹೆಜ್ಜೆಗೂ ಶುಭ ಫಲಗಳು ಪ್ರಾಪ್ತಿಯಾಗಲಿದೆ.
ಸ್ವ ರಾಶಿಯಲ್ಲಿ ಲಕ್ಷ್ಮಿ ನಾರಾಯಣ ಯೋಗಾದ ರಚನೆ ತುಲಾ ರಾಶಿಯ ಜನರಿಗೆ ಹಣಕಾಸಿನ ಮೂಲಗಳನ್ನು ಹೆಚ್ಚಿಸಲಿದೆ. ವೃತ್ತಿ ಬದುಕಿನಲ್ಲಿ ಬಹುದಿನಗಳ ಕನಸು ನನಸಾಗಲಿದೆ. ಇನ್ನೂ ಮದುವೆಯಾಗದ ಯುವಕ-ಯುವತಿಯರಿಗೆ ಕಂಕಣ ಭಾಗ್ಯ ಕೂಡಿ ಬರುವ ಸಕಾಲ.
ಲಕ್ಷ್ಮಿ ನಾರಾಯಣ ರಾಜಯೋಗದ ಫಲವಾಗಿ ಉದ್ಯೋಗ ರಂಗದಲ್ಲಿ ಏಳ್ಗೆ ಕಂಡು ಬರಲಿದೆ. ವಿಶೇಷವಾಗಿ ಸ್ವಂತ ವ್ಯವಹಾರ ಮಾಡುವವರ ಅದೃಷ್ಟ ಬೆಳಗಲಿದ್ದು, ನಿಮ್ಮ ವ್ಯವಹಾರವನ್ನು ವಿಸ್ತರಿಸಲು ಸಾಧ್ಯವಾಗಲಿದೆ. ಹಣಕಾಸಿನ ಸ್ಥಿತಿಯೂ ಉತ್ತಮವಾಗಿರಲಿದೆ.
ಮಂಗಳಕರ ಯೋಗಗಳಲ್ಲಿ ಒಂದಾದ ಲಕ್ಷ್ಮಿ ನಾರಾಯಣ ಯೋಗವು ಕುಂಭ ರಾಶಿಯ ಜನರಿಗೆ ಭಾರಿ ಅದೃಷ್ಟವನ್ನು ತರಲಿದೆ. ನೀವು ಕೈ ಹಾಕುವ ಪ್ರತಿ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿದ್ದು, ಮನೆಯಲ್ಲಿ ಮಂಗಳ ಕಾರ್ಯಗಳು ಜರುಗುವ ಅವಕಾಶಗಳಿವೆ.
ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.