ಬುಧಾದಿತ್ಯ ಯೋಗದಿಂದ ಸಿರಿವಂತರಾಗುವ ರಾಶಿಗಳಿವು.. ಒಲಿಯುವಳು ಮಹಾಲಕ್ಷ್ಮಿ, ಮನೆ ತುಂಬಲಿದೆ ಧನ ಕನಕ!
ಬುಧಾದಿತ್ಯ ಯೋಗ: ಗ್ರಹಗಳ ಅಧಿಪತಿ ಬುಧ ಮತ್ತು ಸೂರ್ಯ ತುಲಾ ರಾಶಿಯಲ್ಲಿ ಒಂದಾಗಲಿದ್ದಾರೆ. ಇದರಿಂದ ಬುಧಾದಿತ್ಯ ಯೋಗವು ರೂಪುಗೊಳ್ಳಲಿದೆ. ಈ ರಾಜಯೋಗದ ವಿಶೇಷ ಪರಿಣಾಮವು ಕೆಲವು ರಾಶಿಗಳ ಜನರ ಮೇಲೆ ಬೀಳಲಿದೆ.
ಧನು ರಾಶಿ: ವ್ಯಾಪಾರದಲ್ಲಿ ಹೊಸ ಹೂಡಿಕೆ ಮಾಡುವವರು ಉತ್ತಮ ಲಾಭವನ್ನು ಪಡೆಯುತ್ತಾರೆ. ಸದಾ ರಾಜಕೀಯದಲ್ಲಿರುವವರು ಅನಿರೀಕ್ಷಿತ ಯಶಸ್ಸು ಸಾಧಿಸುತ್ತಾರೆ. ಆರೋಗ್ಯ ಸಂಬಂಧಿತ ಸಮಸ್ಯೆ ಸಹ ಸುಲಭವಾಗಿ ದೂರವಾಗುತ್ತದೆ.
ತುಲಾ ರಾಶಿ : ವೈಯಕ್ತಿಕ ಜೀವನದಲ್ಲಿ ಪ್ರಗತಿ, ಯಶಸ್ಸು ಮತ್ತು ಸಮೃದ್ಧಿಯನ್ನು ಪಡೆಯಲಿದ್ದಾರೆ. ರಾಜರಂತಹ ಜೀವನ ನಡೆಸುವರು, ಕಷ್ಟ ಕಳೆದು ಬಾಳಲ್ಲಿ ಬೆಳಕು ಮೂಡುವುದು.
ಸಿಂಹ ರಾಶಿ: ಕಠಿಣ ಪರಿಶ್ರಮದಿಂದ ಸುಲಭವಾಗಿ ಯಶಸ್ಸನ್ನು ಸಾಧಿಸುತ್ತಾರೆ. ಹೊಸ ಉದ್ಯಮಗಳನ್ನು ಪ್ರಾರಂಭಿಸಲು ಇದು ಉತ್ತಮ ಸಮಯ. ಕುಟುಂಬದೊಂದಿಗೆ ಸಂತೋಷದಿಂದ ಕಾಲ ಕಳೆಯಲು ಅವಕಾಶ ಸಿಗಲಿದೆ.
ಮಿಥುನ ರಾಶಿ : ಭೌತಿಕ ಆನಂದವನ್ನು ಪಡೆಯುತ್ತಾರೆ. ಕುಟುಂಬದಲ್ಲಿ ಸಂತಸ ಮೂಡಲಿದೆ. ಈ ಸಮಯದಲ್ಲಿ ಜೀವನದಲ್ಲಿ ಧನಾತ್ಮಕ ಬದಲಾವಣೆಗಳೂ ಬರಬಹುದು. ಈ ರಾಜಯೋಗದಿಂದ ಹೊಸ ವಾಹನ, ಭೂಮಿ ಖರೀದಿ ಮಾಡುವ ಸಾಧ್ಯತೆ ಇದೆ.