100 ಗಂಟೆಗಳಲ್ಲಿ ಸಿದ್ದವಾಗಿತ್ತು 100 ಕಿಮೀ ರಸ್ತೆ..! ಇದು ಬೇರೆಲ್ಲೂ ಅಲ್ಲ ಭಾರತದಲ್ಲಿಯೇ ನಡೆದ ಕಥೆ..
ಒಂದು ರಸ್ತೆ ಹಾಕುವುದೆಂದರೆ ಅದು ಸುಲಭವಾದ ವಿಷಯವಲ್ಲ. ಅಷ್ಟು ಸುಲಭವಾಗಿ ಅವಸರದಲ್ಲಿ ರಸ್ತೆ ಹಾಕಲು ಸಾಧ್ಯವಿಲ್ಲ. ಈ ಕಲ್ಪನೆಯನ್ನು ಭಾರತದ ಆ ಪ್ರಾಂತ್ಯ ಅದೊಂದು ದಿನ ಹುಸಿ ಮಾಡಿತ್ತು. ಸೂರು ಗಂಟೆಗಳಲ್ಲಿ 100 ಕಿಮೀ ರಸ್ತೆ ಹಾಕಿ ದಾಖಲೆ ಬರೆದಿತ್ತು.
ಒಂದು ರಸ್ತೆ ಹಾಕುವುದೆಂದರೆ ಅದು ಸುಲಭವಾದ ವಿಷಯವಲ್ಲ. ಅಷ್ಟು ಸುಲಭವಾಗಿ ಅವಸರದಲ್ಲಿ ರಸ್ತೆ ಹಾಕಲು ಸಾಧ್ಯವಿಲ್ಲ. ಈ ಕಲ್ಪನೆಯನ್ನು ಭಾರತದ ಆ ಪ್ರಾಂತ್ಯ ಅದೊಂದು ದಿನ ಹುಸಿ ಮಾಡಿತ್ತು. ಸೂರು ಗಂಟೆಗಳಲ್ಲಿ 100 ಕಿಮೀ ರಸ್ತೆ ಹಾಕಿ ದಾಖಲೆ ಬರೆದಿತ್ತು. ಹೌದು, ಅಷ್ಟಕ್ಕೂ ಈ ಘಟನೆ ನಡೆದದ್ದು ಈಗ ಅಲ್ಲ 2023 ರಲ್ಲಿ ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ ನಡೆದ ಘಟನೆ ಇದು.
ಉತ್ತರ ಪ್ರದೇಶದ ಬುಲಂದ್‌ಶಹರ್ ಜಿಲ್ಲೆಯಲ್ಲಿ, ಘಜಿಯಾಬಾದ್-ಅಲಿಘರ್ ರಾಷ್ಟ್ರೀಯ ಎಕ್ಸ್‌ಪ್ರೆಸ್‌ವೇ 100 ಗಂಟೆಗಳಲ್ಲಿ 100 ಕಿಲೋಮೀಟರ್ ರಸ್ತೆ ನಿರ್ಮಿದಸುವಲ್ಲಿ ಕ್ಯೂಬ್ ಹೈವೇಸ್ ವಿಶ್ವದಾಖಲೆ ಮಾಡಿದೆ. ಈ ರಸ್ತೆಯ ಉದ್ಘಾಟನೆ ಸಮಾರಂಭವನ್ನು ಆಗಿನ ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವರಾಗಿದ್ದ ನಿತೀನ್ ಗಡ್ಕರಿ ಕಾರ್ಯಕ್ರಮವನ್ನು ಮೇ 19 ರಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗವಹಿಸಿದ್ದರು.
ಈ ರಾಷ್ಟ್ರೀಯ ಹೆದ್ದಾರಿಯನ್ನು ನಿರ್ಮಿಸಲು ಸುಮಾರು 80 ಸಾವಿರ ಕಾರ್ಮಿಕರು ಕೆಲಸ ಮಾಡಿದ್ದರೆ, 200 ಕ್ಕೂ ಹೆಚ್ಚು ರೋಡ್ ರೋಲರ್‌ಗಳನ್ನು ಬಳಸಲಾಗಿದೆ. ರಾಷ್ಟ್ರೀಯ ಹೆದ್ದಾರಿ 91ರ ಸೌಂದರ್ಯೀಕರಣಕ್ಕೂ ಹೆಚ್ಚಿನ ಕಾಳಜಿ ವಹಿಸಲಾಗಿದೆ. ರಸ್ತೆಬದಿಯಲ್ಲಿ ಸರಿಯಾದ ಬೆಳಕು ಹಾಗೂ ಸುಂದರ ವಿಭಜಕಗಳನ್ನು ಮಾಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ನಡುವಿನ ವಿಭಜಕವು ಹಸಿರಿನಿಂದ ಕೂಡಿದ್ದು, ಮರಗಳನ್ನು ಸಹ ನೆಡಲಾಗಿದೆ.
ರಾಷ್ಟ್ರೀಯ ಹೆದ್ದಾರಿ 91ರಲ್ಲಿ ಹಗಲಿರುಳು ಕಾಮಗಾರಿ ನಡೆಸಿ, ಕೇವಲ 100 ಗಂಟೆಗಳಲ್ಲಿ 100 ಕಿಮೀ ರಸ್ತೆಯನ್ನು ಸಂಫೂರ್ಣ ಮಾಡಲಾಗಿತ್ತು. ಈ ರೀತಿ ಈ ಮೊದಲು ಬೇರೆ ಇಲ್ಲೂ ಮಾಡಿಲ್ಲದ ಕಾರಣ ಇದು ವಿಶ್ವ ದಾಖಲೆಯನ್ನು ಬರೆದಿತ್ತು.