ಒಂದೇ ಒಂದು ಲವಂಗವನ್ನು ಇದರ ಜೊತೆ ಸುಟ್ಟು ಮನೆಯ ಈ ದಿಕ್ಕಿನಲ್ಲಿಡಿ: ಮನೆತುಂಬಾ ಶುಕ್ರದೆಸೆ ವೃದ್ಧಿಸಿ ಸಂಪತ್ತು ತುಂಬಿತುಳುಕುವುದು! ಕಾರು-ಬಂಗಲೆಗೆ ಮಾಲೀಕರಾಗುವಿರಿ
ಕರ್ಪೂರವನ್ನು ವಿಶೇಷವಾಗಿ ಪೂಜೆಯಲ್ಲಿ ಬಳಸಲಾಗುತ್ತದೆ. ಮನೆಯಲ್ಲಿ ಕರ್ಪೂರವನ್ನು ಉರಿಸುವುದು ಸಂತೋಷವನ್ನು ಕಾಪಾಡುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಕರ್ಪೂರವು ಸಕಾರಾತ್ಮಕತೆಗೆ ಸಂಬಂಧಿಸಿದ ಒಂದು ಅಂಶವಾಗಿದ್ದು, ಮನೆಯಿಂದ ಯಾವುದೇ ದುಷ್ಟ ಶಕ್ತಿಗಳನ್ನು ದೂರವಿಡಲು ಸಹಾಯ ಮಾಡುತ್ತದೆ.
ಹಿಂದೂ ನಂಬಿಕೆಗಳ ಪ್ರಕಾರ ಇದರ ಬಳಕೆಯು ದೇವಾನುದೇವತೆಗಳನ್ನು ಮೆಚ್ಚಿಸಲು ಒಂದು ಮಾರ್ಗವಾಗಿದೆ. ಆದ್ದರಿಂದ ಕರ್ಪೂರ ಹವನದಂತಹ ಅನೇಕ ಆಚರಣೆಗಳಲ್ಲಿ ಬಳಸಲಾಗುತ್ತದೆ. ವಾಸ್ತು ಪ್ರಕಾರ ಕರ್ಪೂರದಲ್ಲಿ ಕೆಲವು ವಿಶೇಷ ವಸ್ತುಗಳನ್ನು ಬೆರೆಸಿ ಸುಟ್ಟು ಅದರ ಹೊಗೆ ಮನೆಯೆಲ್ಲೆಡೆ ಹರಡಿದರೆ ತುಂಬಾ ಫಲ ಸಿಗುತ್ತದೆ.
ಕರ್ಪೂರವನ್ನು ಸುಟ್ಟಾಗ ಯಾವುದೇ ಶೇಷ ಉಳಿಯುವುದಿಲ್ಲ. ಅದು ಸಂಪೂರ್ಣವಾಗಿ ಗಾಳಿಯಲ್ಲಿ ಹೀರಲ್ಪಡುತ್ತದೆ. ಹಾಗೆಯೇ ಅದನ್ನು ಮನೆಯಲ್ಲಿ ಸುಡುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಅಹಂಕಾರವನ್ನು ತೆಗೆದುಹಾಕುತ್ತದೆ ಎಂದು ನಂಬಲಾಗಿದೆ. ಮನೆಯಲ್ಲಿ ಯಾವ್ಯಾವ ವಸ್ತುಗಳನ್ನು ಕರ್ಪೂರದೊಂದಿಗೆ ಬೆರೆಸಿ ಸುಡಬೇಕು. ಆ ಮೂಲಕ ಮನೆಯಲ್ಲಿ ಸಂತೋಷವನ್ನು ಹೇಗೆ ಕಾಪಾಡಿಕೊಳ್ಳಬಹುದು ಎಂಬುದನ್ನು ತಿಳಿಯೋಣ.
ರಾತ್ರಿ ಮನೆಯಲ್ಲಿ ಕರ್ಪೂರ ಮತ್ತು ಲವಂಗವನ್ನು ಒಟ್ಟಿಗೆ ಸುಟ್ಟರೆ ಮನೆಯ ಸುತ್ತಲಿನ ಗಾಳಿಯನ್ನು ಶುದ್ಧೀಕರಿಸಲು ಸಹಾಯ ಮಾಡುತ್ತದೆ. ಇದು ನಕಾರಾತ್ಮಕ ಶಕ್ತಿಯನ್ನು ತೆಗೆದುಹಾಕಲು ಸಹ ಸಹಾಯ ಮಾಡುತ್ತದೆ. ಕರ್ಪೂರದ ಪರಿಮಳವು ಮನಸ್ಸು ಮತ್ತು ದೇಹದ ಮೇಲೆ ಶಾಂತಗೊಳಿಸುವ ಪರಿಣಾಮವನ್ನು ಬೀರುತ್ತದೆ.
ಕರ್ಪೂರ ಮತ್ತು ಲವಂಗವನ್ನು ಒಟ್ಟಿಗೆ ಸುಡುವುದರಿಂದ ಮನೆಗೆ ಧನಾತ್ಮಕ ಶಕ್ತಿಯನ್ನು ತರುತ್ತದೆ. ಸಂಜೆ ಸಮಯದಲ್ಲಿ ಲವಂಗವನ್ನು ಕರ್ಪೂರದಿಂದ ಸುಟ್ಟು ಆರತಿ ಮಾಡಿ. ಇದು ನಿಮ್ಮ ಜೀವನದ ಸಮಸ್ಯೆಗಳನ್ನು ತೊಡೆದುಹಾಕುತ್ತದೆ. ಜೊತೆಗೆ ಆರ್ಥಿಕ ಮುಗ್ಗಟ್ಟಿಗೆ ಪರಿಹಾರ ನೀಡುತ್ತದೆ.
ಇನ್ನು ಮನೆಯಲ್ಲಿ ಯಾವುದೇ ರೀತಿಯ ವಾಸ್ತು ದೋಷಗಳಿದ್ದರೆ 11 ಲವಂಗವನ್ನು ಕರ್ಪೂರ ಮತ್ತು ಬೇ ಎಲೆ (ಬಿರಿಯಾನಿ ಎಲೆ) ದಿಂದ ಸುಟ್ಟರೆ ದೋಷಗಳು ನಿವಾರಣೆಯಾಗಿ ಮನೆಯಲ್ಲಿ ಸುಖ ಸಂತೋಷವಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.ಇವುಗಳನ್ನು ಅನುಸರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. Zee News Kannada ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ.