Business Ideas: ಕೇವಲ 2 ಸಾವಿರ ಖರ್ಚು ಮಾಡಿ ಈ ಗಿಡ ನೆಡಿ, 4 ಲಕ್ಷದವರೆಗೆ ಗಳಿಸಿ!
ಇದು ಬೋನ್ಸಾಯ್ ಸಸ್ಯಗಳ ಬ್ಯುಸಿನೆಸ್. ನೀವು 1 ಹೆಕ್ಟೇರ್ನಲ್ಲಿ 1500 ರಿಂದ 2500 ಸಸ್ಯಗಳನ್ನು ನೆಡಬಹುದು. ನೀವು 3 x 2.5 ಮೀಟರ್ನಲ್ಲಿ ಸಸಿ ನೆಟ್ಟರೆ, 1 ಹೆಕ್ಟೇರ್ನಲ್ಲಿ ಸುಮಾರು 1500 ಗಿಡ ನೆಡಲು ಸಾಧ್ಯವಾಗುತ್ತದೆ. ಇಷ್ಟು ಮಾತ್ರವಲ್ಲದೆ 2 ಗಿಡಗಳ ಮಧ್ಯೆ ಉಳಿದಿರುವ ಜಾಗದಲ್ಲಿ ಬೇರೊಂದು ಬೆಳೆ ಬೆಳೆಯಬಹುದು. ಇದರೊಂದಿಗೆ ನೀವು 4 ವರ್ಷಗಳ ನಂತರ 3 ರಿಂದ 3.5 ಲಕ್ಷ ರೂ. ಗಳಿಸಲು ಸಾಧ್ಯವಾಗುತ್ತದೆ. ವಿಶೇಷವೆಂದರೆ ಬಿದಿರಿನ ಸಸ್ಯವು ಸುಮಾರು 40 ವರ್ಷಗಳವರೆಗೆ ಬಾಳಿಕೆ ಬರುವ ಕಾರಣ ನೀವು ಪ್ರತಿ ವರ್ಷ ಕಸಿ ಮಾಡುವ ಅಗತ್ಯವಿಲ್ಲ.
ಬೋನ್ಸಾಯ್ ಗಿಡದ ಬೇಸಾಯಕ್ಕೆ 3 ವರ್ಷಗಳಲ್ಲಿ ಸರಾಸರಿ 240 ರೂ. ವೆಚ್ಚವಾಗಲಿದ್ದು, ಈ ಪೈಕಿ ಪ್ರತಿ ಗಿಡಕ್ಕೆ 120 ರೂ.ಗೆ ಸರ್ಕಾರದ ನೆರವು ದೊರೆಯಲಿದೆ. ಈಶಾನ್ಯವನ್ನು ಹೊರತುಪಡಿಸಿ ಇತರ ಪ್ರದೇಶಗಳಲ್ಲಿ ಇದರ ಕೃಷಿಗೆ ಸರ್ಕಾರದಿಂದ ಶೇ.50ರಷ್ಟು ಸಹಾಯವಿದೆ. ಈ ಪಾಲಿನಲ್ಲಿ ಶೇ.60ರಷ್ಟು ಕೇಂದ್ರ ಮತ್ತು ಶೇ.40ರಷ್ಟು ರಾಜ್ಯವು ಒದಗಿಸಲಿದೆ. ಅದೇ ರೀತಿ ಈಶಾನ್ಯದಲ್ಲಿ ಸರ್ಕಾರವು ಶೇ.60ರಷ್ಟು ಸಹಾಯ ಮಾಡುತ್ತದೆ. ಇಲ್ಲಿಯೂ ಸರ್ಕಾರದ ಶೇ.90ರಷ್ಟು ಹಣವನ್ನು ಕೇಂದ್ರ ಸರ್ಕಾರ ಹಾಗೂ ಶೇ.10ರಷ್ಟು ರಾಜ್ಯ ಸರ್ಕಾರ ಹಂಚಿಕೆ ಮಾಡಲಿದೆ. ಜಿಲ್ಲೆಯ ನೋಡಲ್ ಅಧಿಕಾರಿ ಈ ಬಗ್ಗೆ ನಿಮಗೆ ಸಂಪೂರ್ಣ ಮಾಹಿತಿ ನೀಡಲಿದ್ದಾರೆ.
ಈ ವ್ಯವಹಾರ ಪ್ರಾರಂಭಿಸಲು ನಿಮಗೆ ಶುದ್ಧ ನೀರು, ಮರಳು ಮಣ್ಣು ಅಥವಾ ಮರಳು, ಮಡಕೆಗಳು ಮತ್ತು ಗಾಜಿನ ಮಡಕೆಗಳು, ನೆಲ ಅಥವಾ ಮೇಲ್ಛಾವಣಿ, 100 ರಿಂದ 150 ಚದರ ಅಡಿ ಜಾಗ, ಕ್ಲೀನ್ ಪೆಬಲ್ಸ್ ಅಥವಾ ಗಾಜಿನ ಪಾತ್ರೆಗಳು, ತೆಳುವಾದ ತಂತಿ, ಗಿಡಗಳ ಮೇಲೆ ನೀರನ್ನು ಚಿಮುಕಿಸಲು ಸ್ಪ್ರೇ ಬಾಟಲ್ ಅಗತ್ಯವಿರುತ್ತದೆ. ನೀವು ಈ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಿದರೆ ಸುಮಾರು 5 ಸಾವಿರ ರೂ.ಗಳ ಹೂಡಿಕೆ ಅಗತ್ಯವಿರುತ್ತದೆ. ಅದೇ ರೀತಿ ನೀವು ಸ್ವಲ್ಪ ದೊಡ್ಡ ಪ್ರಮಾಣದಲ್ಲಿ ಮಾಡಿದರೆ 20 ಸಾವಿರ ರೂ.ವರೆಗೆ ವೆಚ್ಚವಾಗುತ್ತದೆ.
ನೀವು ಕಡಿಮೆ ಬಂಡವಾಳದೊಂದಿಗೆ ಈ ವ್ಯವಹಾರ ಪ್ರಾರಂಭಿಸಬಹುದು. ಆದರೆ ಇದರಲ್ಲಿ ಲಾಭ ಗಳಿಸಲು ನಿಮಗೆ ಸ್ವಲ್ಪ ಸಮಯ ಬೇಕಾಗುತ್ತದೆ. ಏಕೆಂದರೆ ಬೋನ್ಸಾಯ್ ಗಿಡ ಸಿದ್ಧವಾಗಲು ಕನಿಷ್ಠ ಎರಡರಿಂದ ಐದು ವರ್ಷ ಬೇಕು. ಇದಲ್ಲದೇ ನರ್ಸರಿಯಿಂದ ಸಿದ್ಧವಾದ ಗಿಡಗಳನ್ನು ತಂದು ಶೇ.30ರಿಂದ ಶೇ.50ರಷ್ಟು ಹೆಚ್ಚಿನ ಬೆಲೆಗೆ ಮಾರಾಟ ಮಾಡಬಹುದು.
ಇಂದು ಬೋನ್ಸಾಯ್ ಅನ್ನು ಅದೃಷ್ಟದ ಸಸ್ಯವೆಂದು ಪರಿಗಣಿಸಲಾಗಿದೆ. ಇದನ್ನು ಮನೆ ಮತ್ತು ಕಚೇರಿಯಲ್ಲಿ ಅಲಂಕಾರಕ್ಕಾಗಿಯೂ ಬಳಸಲಾಗುತ್ತದೆ. ಇದರಿಂದಾಗಿ ಇಂದಿನ ದಿನಗಳಲ್ಲಿ ಇದರ ಬೇಡಿಕೆ ತುಂಬಾ ಹೆಚ್ಚಾಗಿದೆ. ಇಂದಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ ಈ ಗಿಡಗಳ ಬೆಲೆ 200 ರಿಂದ ಸುಮಾರು 2500 ರೂ.ಇದೆ. ಇದಲ್ಲದೆ ಬೋನ್ಸಾಯ್ ಸಸ್ಯ ಇಷ್ಟಪಡುವ ಜನರು ಎಷ್ಟು ಹಣ ತೆತ್ತಾದರೂ ಅದನ್ನು ಖರೀದಿಸುತ್ತಾರೆ.
ಬೋನ್ಸಾಯ್ ಸಸ್ಯವು ಇಂದು ಅದೃಷ್ಟವೆಂದು ಪರಿಗಣಿಸಲ್ಪಟ್ಟಿರುವ ಸಸ್ಯವಾಗಿದೆ. ಈ ಸಸ್ಯದ ಮೂಲಕ ನೀವು ಉತ್ತಮ ಹಣವನ್ನು ಗಳಿಸಬಹುದು. ಈ ಕೃಷಿಗೆ ಕೇಂದ್ರ ಸರ್ಕಾರವೂ ಆರ್ಥಿಕ ನೆರವು ನೀಡುತ್ತದೆ. ಹೀಗಾಗಿ ನೀವು ಕಡಿಮೆ ಖರ್ಚಿನಲ್ಲಿ ಈ ವ್ಯವಹಾರ ಪ್ರಾರಂಭಿಸಿ ಹಂತ ಹಂತವಾಗಿ ಉದ್ಯಮವನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರೆ ಮುಂದೊಂದು ದಿನ ಕೈತುಂಬಾ ಹಣ ಗಳಿಸಬಹುದು.