ಸರ್ಕಾರದ ನೆರವಿನೊಂದಿಗೆ ಆರಂಭಿಸಿ ಹೊಸ ಬ್ಯುಸಿನೆಸ್ , ಪ್ರತಿ ತಿಂಗಳು ಲಕ್ಷಕ್ಕಿಂತ ಹೆಚ್ಚು ಆದಾಯ ಗಳಿಸಿ

Sat, 27 Nov 2021-4:23 pm,

ಲಾಭದಾಯಕ ವ್ಯವಹಾರಕ್ಕಾಗಿ ಜನೌಷಧಿ ಕೇಂದ್ರವು ನಿಮಗೆ ಉತ್ತಮ ಅವಕಾಶವನ್ನು ನೀಡುತ್ತಿದೆ. ಇದರಲ್ಲಿ ನೀವು ಕಡಿಮೆ ವೆಚ್ಚದಲ್ಲಿ ಹೆಚ್ಚು ಆದಾಯ ಗಳಿಸಬಹುದು. ಇದಕ್ಕಾಗಿ ಮೊದಲು ಜನೌಷಧಿ ಕೇಂದ್ರದ ಹೆಸರಿನಲ್ಲಿ ರೀಟೇಲ್ ಡ್ರಗ್ ಸೇಲ್ಸ್ ಪರವಾನಗಿ ಪಡೆಯಬೇಕು. ಇದಕ್ಕಾಗಿ ನೀವು ಅಧಿಕೃತ ವೆಬ್‌ಸೈಟ್ https://janaushadhi.gov.in/ ನಿಂದ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದು. ಫಾರ್ಮ್ ಅನ್ನು ಡೌನ್‌ಲೋಡ್ ಮಾಡಿದ ನಂತರ, ಬ್ಯೂರೋ ಆಫ್ ಫಾರ್ಮಾ ಪಬ್ಲಿಕ್ ಸೆಕ್ಟರ್ ಅಂಡರ್‌ಟೇಕಿಂಗ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ (ಎ & ಎಫ್) ಹೆಸರಿನಲ್ಲಿ ಅರ್ಜಿಯನ್ನು ಕಳುಹಿಸಬೇಕು.

ಜನೌಷಧಿ ಕೇಂದ್ರ ತೆರೆಯಲು ಸರ್ಕಾರ ಮೂರು ವಿಭಾಗಗಳನ್ನು ರಚಿಸಿದೆ. ಮೊದಲ ವರ್ಗದಲ್ಲಿ, ಯಾವುದೇ ವ್ಯಕ್ತಿ, ನಿರುದ್ಯೋಗಿ ಫಾರ್ಮಸಿಸ್ಟ್, ವೈದ್ಯರು ಅಥವಾ ನೋಂದಾಯಿತ ಮೆಡಿಕಲ್ ಪ್ರಾಕ್ಟಿಶ್ನರ್  ಜನೌಷಧಿ ಕೇಂದ್ರವನ್ನು ತೆರೆಯಲು ಅರ್ಹರಾಗಿರುತ್ತಾರೆ. ಮತ್ತೊಂದೆಡೆ, ಟ್ರಸ್ಟ್‌ಗಳು, ಎನ್‌ಜಿಒಗಳು, ಖಾಸಗಿ ಆಸ್ಪತ್ರೆಗಳು, ಸ್ವಸಹಾಯ ಗುಂಪುಗಳು ಎರಡನೇ ವರ್ಗದಲ್ಲಿ ಬರುತ್ತವೆ. ಮತ್ತು ಮೂರನೇ ವರ್ಗದಲ್ಲಿ, ರಾಜ್ಯ ಸರ್ಕಾರಗಳಿಂದ ನಾಮನಿರ್ದೇಶನಗೊಂಡ ಏಜೆನ್ಸಿಗಳಿಗೆ ಅವಕಾಶ ಸಿಗುತ್ತದೆ. 

ಜನೌಷಧಿ ಕೇಂದ್ರ ತೆರೆಯಲು ಅಂಗಡಿಯಲ್ಲಿನ ಪೀಠೋಪಕರಣಗಳಿಗೆ 1.5 ಲಕ್ಷ ರೂ.ವರೆಗೆ ಖರ್ಚು ಮಾಡಲಾಗುತ್ತದೆ.  ಕಂಪ್ಯೂಟರ್ ಮತ್ತು ಫ್ರಿಜ್ ಗಾಗಿ  50 ಸಾವಿರ ರೂ. ಬೇಕಾಗುತ್ತದೆ. 2 ಲಕ್ಷ ಮೊತ್ತವು ಪೂರ್ಣಗೊಳ್ಳುವವರೆಗೆ ಈ ಮೊತ್ತವನ್ನು ಮಾಸಿಕ ಆಧಾರದ ಮೇಲೆ ಗರಿಷ್ಠ 15,000 ರೂ.ವರೆಗೆ ಮರುಪಾವತಿಸಲಾಗುತ್ತದೆ. ಈ ಪ್ರೋತ್ಸಾಹಧನವನ್ನು ಮಾಸಿಕ ಖರೀದಿಯ 15% ಅಥವಾ 15,000 ಯಾವುದು ಹೆಚ್ಚಿದೆಯೋ ಅದರ ಆಧಾರದ ಮೇಲೆ ನೀಡಲಾಗುತ್ತದೆ.  

ಜನೌಷಧಿ ಕೇಂದ್ರದ ವ್ಯವಹಾರದಲ್ಲಿ ಉತ್ತಮ ಗಳಿಕೆ ಸಾಧ್ಯ. ಅದನ್ನು ತೆರೆದಾಗ, ಔಷಧಿ ಮಾರಾಟದ ಮೇಲೆ 20 ಪ್ರತಿಶತ ಮಾರ್ಜಿನ್ ಅನ್ನು ಅಂಗಡಿಯವರಿಗೆ ನೀಡಲಾಗುತ್ತದೆ. ಅಷ್ಟೇ ಅಲ್ಲ, ಇದರಲ್ಲಿ ಸಾಮಾನ್ಯ ಮತ್ತು ಸ್ಪೆಷಲ್ ಇನ್ಸೆಂಟಿವ್ ಅವಕಾಶವೂ ಇದೆ. ಸಾಮಾನ್ಯ ಪ್ರೋತ್ಸಾಹದ ರೂಪದಲ್ಲಿ, ಔಷಧಿ ಅಂಗಡಿಯನ್ನು ತೆರೆಯುವ ವೆಚ್ಚವನ್ನು ಸರ್ಕಾರವು ಮರುಪಾವತಿ ಮಾಡುತ್ತದೆ. 

ಜನೌಷಧಿ ಕೇಂದ್ರವು ಸಾಮಾನ್ಯ ಜನರಿಗೆ ಕಡಿಮೆ ದರದಲ್ಲಿ ಔಷಧಗಳನ್ನು ಒದಗಿಸುವ ಯೋಜನೆಯಾಗಿದೆ. ಈ ಮೂಲಕ ಕೇಂದ್ರ ಸರ್ಕಾರ ಜನರಿಗೆ ಕೈಗೆಟಕುವ ದರದಲ್ಲಿ ಔಷಧಗಳನ್ನು ನೀಡುತ್ತದೆ. ಈ ಯೋಜನೆಯ ಮೂಲಕ ಕೇಂದ್ರ ಸರ್ಕಾರವು ದೇಶದ ವಿವಿಧ ಭಾಗಗಳಲ್ಲಿ 'ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ' ತೆರೆಯಲು ಜನರನ್ನು ಪ್ರೋತ್ಸಾಹಿಸುತ್ತಿದೆ. ಮಾರ್ಚ್ 2024 ರ ವೇಳೆಗೆ 10,000 ಜನೌಷಧಿ ಕೇಂದ್ರಗಳನ್ನು ತೆರೆಯುವ ಗುರಿಯನ್ನು ಸರ್ಕಾರ ಹೊಂದಿದೆ.

ZEENEWS TRENDING STORIES

By continuing to use the site, you agree to the use of cookies. You can find out more by Tapping this link