Business Idea: ಈ ವಿಶೇಷ ವ್ಯಾಪಾರ ಇಂದೇ ಪ್ರಾರಂಭಿಸಿ, ಪ್ರತಿ ತಿಂಗಳು 10 ಲಕ್ಷದವರೆಗೆ ಗಳಿಸಿ!
ನಿಮ್ಮ ಕೆಲಸದಿಂದ ನೀವು ಆಯಾಸಗೊಂಡಿದ್ದರೆ ಮತ್ತು ಸ್ವಂತ ವ್ಯವಹಾರ ಪ್ರಾರಂಭಿಸಲು ಯೋಚಿಸುತ್ತಿದ್ದರೆ ನಿಮಗೆ ಒಳ್ಳೆಯ ಸುದ್ದಿ ಇದೆ. ಇಂದು ನಾವು ನಿಮಗಾಗಿ ಒಂದು ಅದ್ಭುತ ಬ್ಯುಸಿನೆಸ್ ಪ್ಲಾನ್ ಬಗ್ಗೆ ತಿಳಿಸಿಕೊಡಲಿದ್ದೇವೆ. ಈ ವ್ಯಾಪಾರದಲ್ಲಿ ನೀವು ಬಂಪರ್ ಲಾಭ ಗಳಿಸಬಹುದು. ನೀವು ಈ ಬ್ಯುಸಿನೆಸ್ ಎಲ್ಲಿ ಬೇಕಾದರೂ ಪ್ರಾರಂಭಿಸಬಹುದು ಮತ್ತು ಕೈತುಂಬಾ ಹಣ ಗಳಿಸಬಹುದು. ಇದು ರಟ್ಟಿನ ಪೆಟ್ಟಿಗೆ ಮಾಡುವ ವ್ಯಾಪಾರ(Cardboard Box Business Plan).
ಇತ್ತೀಚಿನ ದಿನಗಳಲ್ಲಿ ರಟ್ಟಿನ ಪೆಟ್ಟಿಗೆಗಳಿಗೆ ಬೇಡಿಕೆ ಬಹಳಷ್ಟು ಹೆಚ್ಚಾಗಿದೆ. ಅಂಗಡಿಯಿಂದ ಮನೆಗೆ ಹೀಗೆ ಎಲ್ಲದ್ದಕ್ಕೂ ಬೇಕಾಗುವ ವಸ್ತುಗಳನ್ನು ಸಾಗಿಸಲು ಇದು ಅಗತ್ಯವಾಗಿರುತ್ತದೆ. ಪ್ರತಿಯೊಂದು ಸಣ್ಣ ಮತ್ತು ದೊಡ್ಡ ವಸ್ತುಗಳನ್ನು ಪ್ಯಾಕ್ ಮಾಡಲು ಕಾರ್ಡ್ಬೋರ್ಡ್ ಬಾಕ್ಸ್ ಅಗತ್ಯವಿದೆ. ಮುಖ್ಯ ವಿಷಯವೆಂದರೆ ಈ ವ್ಯಾಪಾರವನ್ನು ನೀವು ಯಾವುದೇ ಋತುವಿನಲ್ಲಿ ಪ್ರಾರಂಭಿಸಬಹುದು. ಪ್ರತಿ ತಿಂಗಳು, ಪ್ರತಿ ಋತುವಿನಲ್ಲಿಯೂ ಇದರ ಬೇಡಿಕೆ ಇರುತ್ತದೆ. ಈ ವ್ಯವಹಾರದಲ್ಲಿ ನಷ್ಟದ ಸಾಧ್ಯತೆಗಳು ಅತ್ಯಲ್ಪ. ಆನ್‌ಲೈನ್ ವ್ಯವಹಾರ ಅಂದರೆ ಇ-ಕಾರ್ಮಸ್ ಕಂಪನಿಗಳ ಆರ್ಡರ್ ಗಳನ್ನು ವಿತರಿಸಲು ಇದು ಹೆಚ್ಚು ಅಗತ್ಯವಿದೆ. ಹೀಗಾಗಿ ಸುಲಭವಾಗಿರುವ ಈ ಬ್ಯುಸಿನೆಸ್ ಪ್ರಾರಂಭಿಸಿ ನೀವು ಕೈತುಂಬಾ ಹಣ ಗಳಿಸಬಹುದು.
ಏಕರೂಪದ ಪ್ಯಾಕಿಂಗ್ ಮತ್ತು ಅದರ ಸುರಕ್ಷತೆಗಾಗಿ ಕಾರ್ಡ್ಬೋರ್ಡ್ ಅನ್ನು ಬಳಸಲಾಗುತ್ತದೆ. ಈ ದಪ್ಪ ಕವರ್ (ಕಾರ್ಡ್ಬೋರ್ಡ್) ಅನ್ನು ಇಂದು ವಸ್ತುಗಳನ್ನು ಪ್ಯಾಕ್ ಮಾಡಲು ಹೆಚ್ಚಾಗಿ ಬಳಸಲಾಗುತ್ತದೆ. ಎಲ್ಲ ರೀತಿಯ ಉತ್ಪನ್ನಗಳನ್ನು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗಿಸಲು ಇದು ಅತ್ಯಗತ್ಯ. ಇದಕ್ಕೆ ಕ್ರಾಫ್ಟ್ ಪೇಪರ್ ಕಚ್ಚಾ ವಸ್ತುವಾಗಿ ಅತ್ಯಂತ ಮುಖ್ಯ. ಇದರ ಮಾರುಕಟ್ಟೆ ಬೆಲೆ ಕೆಜಿಗೆ 40 ರೂ. ಇದೆ. ಬಳಸಿದ ಉತ್ತಮ ಗುಣಮಟ್ಟದ ಕ್ರಾಫ್ಟ್ ಪೇಪರ್, ಉತ್ತಮ ಗುಣಮಟ್ಟದ ಬಾಕ್ಸ್ ಗಳನ್ನು ತಯಾರಿಸಲಾಗುತ್ತದೆ.
ಈ ವ್ಯವಹಾರ ಪ್ರಾರಂಭಿಸಲು ನೀವು ಸುಮಾರು 5000 ಚದರ ಅಡಿ ಜಾಗವನ್ನು ಹೊಂದಿರಬೇಕು. ಇದಲ್ಲದೇ ಇದಕ್ಕಾಗಿ ಸಣ್ಣ ಸ್ಥಾವರವನ್ನೂ ಸ್ಥಾಪಿಸಬೇಕು. ನಂತರ ಸರಕುಗಳನ್ನು ಇಡಲು ಗೋದಾಮಿನ ಅಗತ್ಯವಿರುತ್ತದೆ. ಇದಕ್ಕಾಗಿ ನಿಮಗೆ 2 ರೀತಿಯ ಯಂತ್ರಗಳು ಬೇಕಾಗುತ್ತವೆ. ಒಂದು ಅರೆ ಸ್ವಯಂಚಾಲಿತ ಯಂತ್ರ ಮತ್ತು ಇನ್ನೊಂದು ಸಂಪೂರ್ಣ ಸ್ವಯಂಚಾಲಿತ ಯಂತ್ರ.
ಈ ವ್ಯವಹಾರ ಪ್ರಾರಂಭಿಸಲು ನೀವು ಸಣ್ಣ ಮೊತ್ತದ ಹೂಡಿಕೆಯನ್ನು ಮಾಡಬಹುದು. ಪ್ರಾರಂಭದಲ್ಲಿ ನೀವು ಇದನ್ನು ಸಣ್ಣ ವ್ಯಾಪಾರವಾಗಿ ಪ್ರಾರಂಭಿಸಬಹುದು. ಬಳಿಕ ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಬಹುದು. ನೀವು ಈ ಉದ್ಯಮವನ್ನು ದೊಡ್ಡ ಮಟ್ಟದಲ್ಲಿ ಪ್ರಾರಂಭಿಸಲು ಬಯಸಿದರೆ ಕನಿಷ್ಠ 20 ಲಕ್ಷ ರೂ.ಗಳನ್ನು ಹೂಡಿಕೆ ಮಾಡಬೇಕು. ವಾಸ್ತವವಾಗಿ ಇದಕ್ಕಾಗಿ ಅರೆ-ಸ್ವಯಂಚಾಲಿತ ಯಂತ್ರದ ಅಗತ್ಯವಿದೆ. ಇದೇ ಸಮಯದಲ್ಲಿ ಸಂಪೂರ್ಣ ಸ್ವಯಂಚಾಲಿತ ಯಂತ್ರಗಳ ಮೂಲಕ ಪ್ರಾರಂಭಿಸಲು 50 ಲಕ್ಷ ರೂ.ವರೆಗೆ ಖರ್ಚು ಮಾಡಬಹುದು.
ಈ ವ್ಯವಹಾರದಲ್ಲಿ ನಿಮ್ಮ ಲಾಭವೂ ಅದ್ಭುತವಾಗಿರುತ್ತದೆ. ವಾಸ್ತವವಾಗಿ ಈ ವ್ಯವಹಾರದ ಬೇಡಿಕೆ ಮಾರುಕಟ್ಟೆಯಲ್ಲಿ ಬಹಳಷ್ಟು ಹೆಚ್ಚಾಗಿದೆ. ಆದ್ದರಿಂದ ಲಾಭದ ಪ್ರಮಾಣವು ಇದರಲ್ಲಿ ಹೆಚ್ಚು. ನೀವು ಇದನ್ನು ಉತ್ತಮ ರೀತಿಯಲ್ಲಿ ಮಾಡಿದರೆ ಮತ್ತು ಉತ್ತಮ ಗ್ರಾಹಕರನ್ನು ಗಳಿಸಿದರೆ ಭರ್ಜರಿ ಲಾಭ ಗಳಿಸಬಹುದು. ಒಂದು ಅಂದಾಜಿನ ಪ್ರಕಾರ ಈ ವ್ಯವಹಾರ ಪ್ರಾರಂಭಿಸಿದರೆ ಪ್ರತಿ ತಿಂಗಳು ನೀವು 10 ಲಕ್ಷ ರೂ.ವರೆಗೆ ಸುಲಭವಾಗಿ ಗಳಿಸಬಹುದು.