Business ideas: ಕೇವಲ 10 ಸಾವಿರ ರೂ. ಹೂಡಿಕೆ ಮಾಡಿ ಈ ಬ್ಯುಸಿನೆಸ್ ಪ್ರಾರಂಭಿಸಿ
ಇಂದಿನ ದಿನಗಳಲ್ಲಿ ಪ್ರತಿಯೊಬ್ಬರ ಕೈಯಲ್ಲೂ ಮೊಬೈಲ್ ಇರುತ್ತದೆ. ಆದ್ದರಿಂದ ಮೊಬೈಲ್ ರೀಚಾರ್ಜ್ ಶಾಪ್ ಕೂಡ ಉತ್ತಮ ವ್ಯಾಪಾರವಾಗಬಹುದು. ಈ ವ್ಯಾಪಾರವು ವಿಶೇಷವಾಗಿ ಸಣ್ಣ ಹಳ್ಳಿಗಳು ಮತ್ತು ಪಟ್ಟಣಗಳಲ್ಲಿ ಹೆಚ್ಚು ನಡೆಯುತ್ತದೆ. ಮೊಬೈಲ್ ರೀಚಾರ್ಜ್ ಹೊರತುಪಡಿಸಿ ಟಿವಿ ರೀಚಾರ್ಜ್, ವಿದ್ಯುತ್ ಬಿಲ್ ಠೇವಣಿ, ರೈಲ್ವೆ ಟಿಕೆಟ್ ಬುಕಿಂಗ್ ಮತ್ತು ಗ್ಯಾಸ್ ಸಿಲಿಂಡರ್ ಬುಕಿಂಗ್ ಮುಂತಾದ ಕೆಲಸಗಳನ್ನು ಮಾಡುವ ಮೂಲಕ ನೀವು ಹೆಚ್ಚುವರಿ ಆದಾಯವನ್ನು ಗಳಿಸಬಹುದು. ನೀವು ಕಂಪ್ಯೂಟರ್ ಅಥವಾ ಲ್ಯಾಪ್‌ಟಾಪ್ ಹೊಂದಿದ್ದರೆ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅಪ್ಲಿಕೇಷನ್ ಹಾಕುವ ಕೆಲಸ ಸಹ ಮಾಡಬಹುದು. ಈ ವ್ಯವಹಾರಕ್ಕಾಗಿ ನೀವು ಬಾಡಿಗೆಗೆ ಸಣ್ಣ ಅಂಗಡಿ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿಂದ ನೀವು ಸಾಮಾನ್ಯ ಜನರಿಗೆ ಸೇವೆಗಳನ್ನು ಒದಗಿಸಲು ಸಾಧ್ಯವಾಗುತ್ತದೆ.
ನೀವು ವಿದ್ಯಾವಂತ ಯುವಕರಾಗಿದ್ದರೆ & ಉತ್ತಮ ವ್ಯವಹಾರ ಪ್ರಾರಂಭಿಸಲು ಬಯಸಿದರೆ ಟ್ಯೂಷನ್ ಅಥವಾ ಕೋಚಿಂಗ್ ಸೆಂಟರ್ ಬ್ಯುಸಿನೆಸ್ ಪ್ರಾರಂಭಿಸಬಹುದು. ಮಕ್ಕಳಿಗೆ ಟ್ಯೂಷನ್ ಹೇಳಿದರೆ ನಿಮ್ಮ ಜ್ಞಾನವು ಹೆಚ್ಚಾಗುತ್ತದೆ, ಕೈತುಂಬಾ ಹಣ ಗಳಿಸುವ ಅವಕಾಶವೂ ನಿಮ್ಮದಾಗುತ್ತದೆ. ನೀವು ಈ ವ್ಯವಹಾರವನ್ನು ಸಣ್ಣ ಪ್ರಮಾಣದಲ್ಲಿ ಪ್ರಾರಂಭಿಸಬಹುದು. ಕೊರೊನಾ ನಂತರ ಟ್ಯೂಷನ್ ಮತ್ತು ಕೋಚಿಂಗ್ ಸೆಂಟರ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ.
ನೀವು ಒಂದಕ್ಕಿಂತ ಹೆಚ್ಚು ಭಾಷೆಯ ಮೇಲೆ ಹಿಡಿತ ಹೊಂದಿದ್ದರೆ ಪ್ರವಾಸಿ ಮಾರ್ಗದರ್ಶಿ ಅಂದರೆ ಗೈಡ್ ಆಗಿ ಕಾರ್ಯನಿರ್ವಹಿಸಬಹುದು. ನೀವು ವಿದೇಶಿ ಪ್ರವಾಸಿಗರೊಂದಿಗೆ ವಿಶ್ವಾಸದಿಂದ ಮಾತನಾಡುವ ಕಲೆ ರೂಢಿಸಿಕೊಂಡಿರಬೇಕು. ಪ್ರವಾಸ ಮಾರ್ಗದರ್ಶಿಯಾಗಿ ಕೆಲಸ ಮಾಡಿದರೆ ಕೈತುಂಬಾ ಗಳಿಸಬಹುದು. ದೇಶದ ಪ್ರಮುಖ ಪ್ರವಾಸಿ ತಾಣಗಳ ಸಂಪೂರ್ಣ ಮಾಹಿತಿ ನಿಮ್ಮ ಬಳಿ ಇರಬೇಕು. ಪ್ರತಿಯೊಂದು ಪ್ರವಾಸಿ ತಾಣಗಳ ಬಗ್ಗೆ ನೀವು ದೇಶ-ವಿದೇಶದ ಪ್ರವಾಸಿಗಳಿಗೆ ಮನಮುಟ್ಟುವಂತೆ ವಿವರಿಸುವ ಸಾಮರ್ಥ್ಯವಿರಬೇಕು. ಭಾಷೆ ಮತ್ತು ಇತಿಹಾಸದ ಅರಿವು ಇದ್ದರೆ ನೀವು ಉತ್ತಮ ಗೈಡ್ ಆಗಿ ಕೆಲಸ ಮಾಡಬಹುದು.
ನೀವು ಅಡುಗೆ ಮಾಡುವ ಉತ್ಸಾಹ ಹೊಂದಿದ್ದರೆ ಮತ್ತು ಹೊಸ ಹೊಸ ಪಾಕವಿಧಾನಗಳನ್ನು ಪ್ರಯತ್ನಿಸಲು ಬಯಸಿದರೆ ಈ ಹವ್ಯಾಸವನ್ನು ವ್ಯಾಪಾರವಾಗಿ ಪರಿವರ್ತಿಸಬಹುದು. ಇದಕ್ಕಾಗಿ ನೀವು ಮನೆಯಲ್ಲಿಯೇ ಅಡುಗೆ ತರಗತಿಯನ್ನು ಪ್ರಾರಂಭಿಸಬಹುದು. ಇಲ್ಲಿ ನೀವು ಮಹಿಳೆಯರಿಂದ ಮಕ್ಕಳಿಗೆ ಅಡುಗೆ ಮಾಡಲು ಕಲಿಸಬಹುದು. ಕೊರೊನಾ ಅವಧಿಯಲ್ಲಿ ಜನರು ಆನ್‌ಲೈನ್ ನಲ್ಲಿಯೇ ಅಡುಗೆಯ ಅನೇಕ ಭಕ್ಷ್ಯಗಳನ್ನು ತಯಾರಿಸಲು ಕಲಿತರು. ನೀವು YouTube ನಲ್ಲಿ ನಿಮ್ಮ ಅಡುಗೆ ಚಾನಲ್ ಶುರು ಮಾಡಬಹುದು. ಇದರ ಮೂಲಕವೂ ನೀವು ಲಕ್ಷ ಲಕ್ಷ ಗಳಿಸಬಹುದು.
ದೊಡ್ಡ ನಗರಗಳಲ್ಲಿ ಅನೇಕ ಯುವಕರು ಸಾಮಾನ್ಯವಾಗಿ ಉದ್ಯೋಗ ಮತ್ತು ಅಧ್ಯಯನದ ಕಾರಣದಿಂದ ಹೊರಗಡೆ ಊಟವನ್ನು ಅವಲಂಬಿಸಿರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಮನೆಯಲ್ಲಿನ ರುಚಿಕರವಾದ ಮತ್ತು ಆರೋಗ್ಯಕರ ಆಹಾರದ ಕೊರತೆ ಇರುತ್ತದೆ. ನಿಮಗೆ ಅಡುಗೆ ಮಾಡಲು ಇಷ್ಟವಿದ್ದರೆ ನೀವು ಮನೆಯಿಂದಲೇ ಟಿಫಿನ್ ಸೇವೆಯನ್ನು ಪ್ರಾರಂಭಿಸಬಹುದು. ನಿಮ್ಮ ಆಹಾರವು ತುಂಬಾ ರುಚಿಯಾಗಿದ್ದರೆ ಖಂಡಿತವಾಗಿಯೂ ನೀವು ಸಕ್ಸಸ್ ಆಗಬಹುದು. ಸಣ್ಣದಾಗಿ ಹೂಡಿಕೆ ಮಾಡಿ ಈ ವ್ಯವಹಾರ ಪ್ರಾರಂಭಿಸಿದರೆ ನೀವು ಯಶಸ್ವಿಯಾಗಬಹುದು.