Business Ideas:ಕೇಂದ್ರ ಸರ್ಕಾರದ ನೆರವಿನಿಂದ ಈ ಉದ್ಯಮ ಆರಂಭಿಸಿ, 6 ಲಕ್ಷ ರೂ.ಸಂಪಾದಿಸಿ
1. ಜಬರ್ದಸ್ತ್ ಉದ್ಯಮದ ಪರಿಕಲ್ಪನೆ (HOW TO START SOAP MANUFACTURING) - ಒಂದು ವೇಳೆ ನೀವೂ ಕೂಡ ಜಬರ್ದಸ್ತ್ ಬಿಸಿನೆಸ್ ಆರಂಭಿಸುವ ತಯಾರಿಯಲ್ಲಿದ್ದರೆ, ಇಂದು ನಾವು ನಿಮಗೆ ಒಂದು ಉತ್ತಮ ಉದ್ಯಮದ ಪರಿಕಲ್ಪನೆಯೊಂದನ್ನು ಹೇಳಿ ಕೊಡಲಿದ್ದೇವೆ. ನಾವೂ ಹೇಳುತ್ತಿರುವುದು ಸಾಬೂನಿನ ಫ್ಯಾಕ್ಟರಿ ಕುರಿತು. ಅಂದರೆ, ಸೋಪ್ ಮ್ಯಾನ್ಯುಫ್ಯಾಕ್ಷರಿಂಗ್ ಯುನಿಟ್ ಕುರಿತು. ಈ ಉದ್ಯಮ ಆರಂಭಿಸಲು ಸರ್ಕಾರ ಕೂಡ ನಿಮಗೆ ಸಹಾಯ ಮಾಡುತ್ತದೆ.
2. ಸೋಪ್ ಮ್ಯಾನುಫ್ಯಾಕ್ಚರಿಂಗ್ (SOAP MANUFACTURING BUSINESS IDEA) ಯುನಿಟ್ ಒಂದು ಉತ್ತಮ ಉದ್ಯಮ - ಈ ವ್ಯವಹಾರದಲ್ಲಿ, ಯಂತ್ರದ ಸಹಾಯದಿಂದ ಸೋಪ್ ತಯಾರಿಸಲಾಗುತ್ತದೆ. ಸಾಬೂನು ತಯಾರಿಸಿದ ನಂತರ ಅದನ್ನು ಮಾರುಕಟ್ಟೆಗೆ ತಂದು ಮಾರಾಟ ಮಾಡಲಾಗುತ್ತದೆ. ಆದರೂ ಅನೇಕರು ಕೈಯಿಂದ ಸಾಬೂನು ತಯಾರಿಸಿ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಾರೆ. ಒಳ್ಳೆಯ ವಿಷಯವೆಂದರೆ ಈ ವ್ಯವಹಾರವನ್ನು ನೀವು ಸಣ್ಣ ಪ್ರಮಾಣದಲ್ಲಿಯೂ ಪ್ರಾರಂಭಿಸಬಹುದು. ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಾಗಿರುವ ಕಾರಣ, ಈ ವ್ಯವಹಾರವು ಯಾವುದೇ ಪರಿಸ್ಥಿತಿಯಲ್ಲಿಯೂ ಯಶಸ್ವಿಯಾಗುತ್ತದೆ.
3. ಭಾರತೀಯ ಮಾರುಕಟ್ಟೆಯಲ್ಲಿ ಸಾಬೂನಿನ ವಿಧಗಳು - ಭಾರತದಲ್ಲಿ ಸಾಬೂನು ಮಾರುಕಟ್ಟೆಯಲ್ಲಿ ಹಲವು ವರ್ಗಗಳಿವೆ. ಸೋಪ್ ಮಾರುಕಟ್ಟೆಯನ್ನು ಅದರ ಬಳಕೆಯ ಆಧಾರದ ಮೇಲೆ ವಿವಿಧ ವರ್ಗಗಳಾಗಿ ವಿಂಗಡಿಲಾಗಿದೆ. ಅಂದರೆ, ಲಾಂಡ್ರಿ ಸೋಪ್, ಬ್ಯೂಟಿ ಸೋಪ್, ಮೆಡಿಕೇಟೆಡ್ ಸೋಪ್, ಕಿಚನ್ ಸೋಪ್, ಪರ್ಫ್ಯೂಮ್ಡ್ ಸೋಪ್ ಇತ್ಯಾದಿ. ಬೇಡಿಕೆ ಮತ್ತು ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ನೀವು ಈ ವರ್ಗಗಳಲ್ಲಿ ಯಾವುದನ್ನಾದರೂ ಆಯ್ಕೆ ಮಾಡಬಹುದು.
4. ಉತ್ತಮ ಹಣಗಳಿಕೆಗೆ ಅವಕಾಶ - ಕೇಂದ್ರ ಸರ್ಕಾರದ ಮುದ್ರಾ ಸ್ಕೀಮ್ ಪ್ರಾಜೆಕ್ಟ್ ವಿವರದ ಪ್ರಕಾರ, ನೀವು 1 ವರ್ಷದಲ್ಲಿ ಒಟ್ಟು 4 ಲಕ್ಷ ಕೆಜಿ ಉತ್ಪಾದನೆ ಮಾಡಲು ಸಾಧ್ಯವಾಗುತ್ತದೆ. ಇದರ ಒಟ್ಟು ಮೌಲ್ಯ 47 ಲಕ್ಷ ರೂ. ಈ ಯೋಜನೆಯಡಿಯಲ್ಲಿ, ಎಲ್ಲಾ ವೆಚ್ಚಗಳು ಮತ್ತು ಇತರ ಹೊಣೆಗಾರಿಕೆಗಳ ನಂತರ ನೀವು ರೂ 6 ಲಕ್ಷ ಅಂದರೆ ತಿಂಗಳಿಗೆ ರೂ 50,000 ನಿವ್ವಳ ಲಾಭವನ್ನು ಪಡೆಯಬಹುದು.
5. ಯಂತ್ರೋಪಕರಣಗಳ ವೆಚ್ಚ ಎಷ್ಟು? - ಸೋಪ್ ತಯಾರಿಕೆ ಘಟಕವನ್ನು ಸ್ಥಾಪಿಸಲು, ನಿಮಗೆ ಒಟ್ಟು 750 ಚದರ ಅಡಿ ಜಾಗ ಬೇಕಾಗುತ್ತದೆ. ಇದಕ್ಕೆ 500 ಚದರ ಅಡಿ ವಿಸ್ತೀರ್ಣ ಮತ್ತು ಉಳಿದ ತೆರೆದ ಜಾಗದ ಅಗತ್ಯವಿದೆ. ಇದು ಎಲ್ಲಾ ರೀತಿಯ ಯಂತ್ರಗಳ ಜೊತೆಗೆ 8 ರೀತಿಯ ಉಪಕರಣಗಳನ್ನು ತೆಗೆದುಕೊಳ್ಳುತ್ತದೆ. ಯೋಜನಾ ವರದಿ ಪ್ರಕಾರ ಈ ಯಂತ್ರಗಳನ್ನು ಅಳವಡಿಸಲು ಒಟ್ಟು 1 ಲಕ್ಷ ರೂ. ಖರ್ಚು ತಗಲುತ್ತದೆ.
6. ಬಿಸ್ನೆಸ್ ಆರಂಭಿಸಲು ಎಷ್ಟು ಬಂಡವಾಳ ಬೇಕಾಗುತ್ತದೆ? - ಸಾಬೂನು ವ್ಯಾಪಾರದ ಯಸಸ್ಸಿನ ದೊಡ್ಡ ಗುಟ್ಟು ಎಂದರೆ ಹಳ್ಳಿಯಿಂದ ದಿಲ್ಲಿಯವರೆಗೆ ಅದರ ಬೇಡಿಕೆ. ಇಂತಹ ಪರಿಸ್ಥಿತಿಯಲ್ಲಿ, ಸಾಬೂನು ತಯಾರಿಸುವ ವ್ಯವಹಾರವು ನಿಮಗೆ ಲಾಭದಾಯಕವಾಗಿರುತ್ತದೆ. ದೊಡ್ಡ ವಿಷಯವೆಂದರೆ ನೀವು ಕಡಿಮೆ ಹಣದಲ್ಲಿ ಸೋಪ್ ಕಾರ್ಖಾನೆಯನ್ನು ತೆರೆಯಬಹುದು. ಈ ವ್ಯವಹಾರವನ್ನು ಪ್ರಾರಂಭಿಸಲು, ನೀವು ಮೋದಿ ಸರ್ಕಾರದ ಮುದ್ರಾ ಯೋಜನೆಯಡಿಯಲ್ಲಿ 80 ಪ್ರತಿಶತದಷ್ಟು ಸಾಲವನ್ನು ತೆಗೆದುಕೊಳ್ಳಬಹುದು.
7. ಅತ್ಯಂತ ಸುಲಭವಾಗಿ ಸಾಲ ಸಿಗುತ್ತದೆ - ಸೋಪ್ ತಯಾರಿಕೆಯ ಉತ್ಪಾದನಾ ಘಟಕವನ್ನು ಸ್ಥಾಪಿಸಲು ನಿಮಗೆ ಒಟ್ಟು 15,30,000 ರೂ. ಬೇಕು. ಆದರೆ ಈ ವ್ಯವಹಾರವು ಸುಲಭವಾಗಿದೆ ಏಕೆಂದರೆ ಇದು ಘಟಕ ಸ್ಥಳ, ಯಂತ್ರೋಪಕರಣಗಳು, ಮೂರು ತಿಂಗಳ ಕೆಲಸದ ಬಂಡವಾಳವನ್ನು ಒಳಗೊಂಡಿರುತ್ತದೆ. ಈ 15.30 ಲಕ್ಷ ರೂ.ಗಳಲ್ಲಿ ನೀವು ಕೇವಲ 3.82 ಲಕ್ಷ ರೂ. ಮಾತ್ರ ವಿನಿಯೋಗಿಸಬೇಕು. ಉಳಿದ ಮೊತ್ತವನ್ನು ಮುದ್ರಾ ಯೋಜನೆಯಡಿ ಸಾಲವಾಗಿ ತೆಗೆದುಕೊಳ್ಳಬಹುದು.