Business Idea: ಕಡಿಮೆ ಬಜೆಟ್‌ನಲ್ಲಿಈ ಬ್ಯುಸಿನೆಸ್ ಪ್ರಾರಂಭಿಸಿ ಭರ್ಜರಿ ಲಾಭ ಗಳಿಸಿ
ಕರ್ನಾಟಕವೂ ಸೇರಿದಂತೆ ಇಡೀ ಭಾರತದಲ್ಲಿ ಹಣ್ಣು ಮತ್ತು ತರಕಾರಿ ವ್ಯಾಪಾರ ತುಂಬಾ ಲಾಭದಾಯಕ. ಹಣ್ಣು ಮತ್ತು ತರಕಾರಿ ರಫ್ತು ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಉದ್ಯಮ. ಹಣ್ಣು ಮತ್ತು ತರಕಾರಿ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಕೆಯಿದೆ. ನೀವು ಸಹ ತರಕಾರಿ, ಅಣಬೆ ಮತ್ತು ವಿವಿಧ ರೀತಿಯ ಹಣ್ಣುಗಳ ರಪ್ತು ಮಾಡುವ ವ್ಯವಹಾರ ಮಾಡಬಹುದು. ನೀವೇ ನಿಮ್ಮೂರಿನಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಬಹುದು.
ವರ್ಷದ 365 ದಿನವೂ ಕೃಷಿ ಚಟುವಟಿಕೆ ನಡೆಯುತ್ತಲೇ ಇರುತ್ತದೆ. ಹೀಗಾಗಿ ರೈತರಿಗೆ ರಸಗೊಬ್ಬರ, ಬೀಜಗಳು ಮತ್ತು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಉತ್ಪನ್ನಗಳಿಗೆ ಬೇಡಿಕೆ ಇರುತ್ತದೆ. ನೀವು ಕೃಷಿಗೆ ಕಡಿಮೆ ಹೂಡಿಕೆಯ ಮೂಲಕ ವ್ಯವಹಾರ ಶುರು ಮಾಡಬಹುದು. ರಸಗೊಬ್ಬರ ವಿತರಣೆಯ ಬ್ಯುಸಿನೆಸ್ ಅನ್ನು ಭಾರತದಲ್ಲಿ ಸರ್ಕಾರ ನಿಯಂತ್ರಿಸುವುದರಿಂದ ನಿಮಗೆ ಪರವಾನಗಿಯ ಅಗತ್ಯವಿರುತ್ತದೆ. ಹೀಗಾಗಿ ಈ ವ್ಯವಹಾರ ಪ್ರಾರಂಭಿಸಿ ಉತ್ತಮ ಲಾಭ ಗಳಿಸಬಹುದು.
ನೀವು ಉತ್ತಮ ವ್ಯವಹಾರ ಮಾಡಿ ಕೈತುಂಬಾ ಹಣ ಗಳಿಸಬೇಕು ಅಂದರೆ ಕೋಳಿ ಸಾಕಾಣಿಕೆ ಉತ್ತಮ ಆಯ್ಕೆ. ಈ ವ್ಯಾಪಾರದಲ್ಲಿ ನೀವು ಮೊಟ್ಟೆ ಮತ್ತು ಮಾಂಸದ ಮೂಲಕ ಲಾಭ ಮಾಡಬಹುದು. ಕೋಳಿ ಜೊತೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಮಾಡುವುದರಿಂದ ನಿಮಗೆ ಹೆಚ್ಚುವರಿ ಆದಾಯ ಸಿಗುತ್ತದೆ. ಇದರ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡು ಈ ಬ್ಯುಸಿನೆಸ್ ಪ್ರಾರಂಭಿಸಿದರೆ ಉತ್ತಮ ಲಾಭ ಮಾಡಬಹುದು.
ಹಿಟ್ಟಿನ ಗಿರಣಿ ಸ್ಥಾಪಿಸುವುದು ಕೂಡ ಲಾಭದಾಯಕ ವ್ಯವಹಾರವಾಗಿದೆ. ದೇಶದಲ್ಲಿ ರೊಟ್ಟಿ, ಬೇಕರಿ ವಸ್ತು ತಯಾರಿಸಲು ಹಿಟ್ಟು ಬೇಕೇ ಬೇಕು. ಹೀಗಾಗಿ ನೀವು ಕಡಿಮೆ ವೆಚ್ಚದಲ್ಲಿ ಈ ವ್ಯವಹಾರ ಪ್ರಾರಂಭಿಸಿದರೆ ಉತ್ತಮ ಲಾಭ ಮಾಡಬಹುದು.
ಇಂದು ಭಾರತದಲ್ಲಿ ಹೋಟೆಲ್ ಉದ್ಯಮಕ್ಕೆ ತುಂಬಾ ಬೇಡಿಕೆಯಿದೆ. ದೇಶದಲ್ಲಿ ಲಕ್ಷಾಂತರ ಹೋಟೆಲ್‍ಗಳಿವೆ. ನೀವು ಸಹ ಹೋಟೆಲ್ ಬ್ಯುಸಿನೆಸ್ ಮಾಡಬೇಕಾದರೆ ಪಕ್ಕಾ ಪ್ಲಾನ್ ಮಾಡಿ ಈ ವ್ಯವಹಾರ ಮಾಡಬಹುದು. ಉತ್ತಮ ಆದಾಯ ಗಳಿಸಲು ಹೋಟೆಲ್ ಬ್ಯುಸಿನೆಸ್ ಉತ್ತಮ ಆಯ್ಕೆಯಾಗಿದೆ.