Business Idea : ಕೇವಲ 50 ಸಾವಿರ ಹೂಡಿಕೆಯಲ್ಲಿ ಈ ವ್ಯವಹಾರ ಆರಂಭಿಸಿ ಬಂಪರ್ ಹಣಗಳಿಕೆ ಮಾಡಿ
1. ಕೇವಲ 50 ಸಾವಿರ ಹೂಡಿಕೆಯಲ್ಲಿ ಈ ಬಿಸ್ನೆಸ್ ಆರಂಭಿಸಿ - ಈ ಬಿಸ್ನೆಸ್ ಮೂಲಕ ನೀವು ಬಂಪರ್ ಗಳಿಕೆ ಮಾಡಬಹುದು. ನಿಮಗೆ ನಾವು ಮಾಹಿತಿಯನ್ನು ನೀಡಲು ಹೊರಟಿರುವ ಉದ್ಯಮ ಎಂದರೆ ಅದುವೇ LED ಬಲ್ಬ್ ತಯಾರಿಕಾ ಬಿಸ್ನೆಸ್. ಇದಕ್ಕಾಗಿ ಒಂದು ವೇಳೆ ನಿಮ್ಮ ಬಳಿ ಜಾಗದ ಕೊರತೆ ಇದ್ದರೆ, ಮನೆಯಿಂದಲೇ ನೀವು ಈ ಉದ್ಯಮವನ್ನು ಆರಂಭಿಸಬಹುದು. ಈ ಬಿಸ್ನೆಸ್ ಅನ್ನು ಕೇವಲ 50 ಸಾವಿರ ಹೂಡಿಕೆಯ ಮೂಲಕ ಆರಂಭಿಸಬಹುದು.
2. ಸರ್ಕಾರ ಸಬ್ಸಿಡಿ ಕೂಡ ನೀಡುತ್ತದೆ - ಸರ್ಕಾರ ಈ ಉದ್ಯಮವನ್ನು ಆರಂಭಿಸಲು ಪ್ರೋತ್ಸಾಹ ಧನವನ್ನು ನೀಡುತ್ತದೆ. ಅಂದರೆ, ಸರ್ಕಾರ ಈ ಬಿಸ್ನೆಸ್ ಆರಂಭಿಸಲು ಸಬ್ಸಿಡಿ ನೀಡುತ್ತದೆ. ಹೀಗಿರುವಾಗ ನಿಮ್ಮ ಗರಿಷ್ಟ ಹೂಡಿಕೆ ರೂ.50,000 ಮಾತ್ರ ಇರಲಿದೆ.
3. ನಿತ್ಯ ಎಷ್ಟು ಆದಾಯ ಗಳಿಸಬಹುದು? - ಒಂದು LED ಬಲ್ಬ್ ತಯಾರಿಸಲು ಸಾಮಾನ್ಯವಾಗಿ 40 ರಿಂದ 50 ರೂ. ಹೂಡಿಕೆ ಮಾಡಬೇಕು. ಇಂತಹ ಒಂದು ಬಲ್ಬ್ ಬೆಲೆ ಮಾರುಕಟ್ಟೆಯಲ್ಲಿ ರೂ.80 ರಿಂದ ರೂ.100 ಗಳಿಗೆ ಮಾರಾಟ ಮಾಡಬಹುದು.
4. ಕಂಪನಿಗಳು ತರಬೇತಿ ನೀಡುತ್ತವೆ - LED ಬಲ್ಬ್ ಅನ್ನು ಹೇಗೆ ತಯಾರಿಸಬೇಕು? ಎಂಬ ಪ್ರಶ್ನೆ ಒಂದು ವೇಳೆ ನಿಮ್ಮ ಮನದಲ್ಲಿಯೂ ಕೂಡ ಮೂಡಿದ್ದರೆ, ಇದಕ್ಕಾಗಿ ಸರ್ಕಾರದಿಂದ ಮಾನ್ಯತೆ ಪಡೆದ ತರಬೇತಿ ಕೇಂದ್ರಗಳು ತರಬೇತಿಯನ್ನು ನೀಡುತ್ತವೆ. LED ಬಲ್ಬ್ ತಯಾರಕ ಕಂಪನಿಗಳೂ ಕೂಡ ತರಬೇತಿಯನ್ನು ನೀಡುತ್ತವೆ. ತರಬೇತಿ ಪ್ರಾಕ್ಟಿಕಲ್ ಹಾಗೂ ಥಿಯರಿ ಎರಡನ್ನೂ ಒಳಗೊಂಡಿರುತ್ತದೆ.
5. ಸತತ ಬೇಡಿಕೆ ಹೆಚ್ಚಾಗುತ್ತಿದೆ - ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ LED ಬಲ್ಬ್ ಗಳ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಇವು ವಿದ್ಯುತ್ ಬಳಕೆಯನ್ನು ಕಡಿಮೆ ಮಾಡುವುದರ ಜೊತೆಗೆ ಉತ್ತಮ ಬೆಳಕನ್ನು ಕೂಡ ನೀಡುತ್ತವೆ. ಇದರ ತಯಾರಿಕೆಯಲ್ಲಿ ಪ್ಲಾಸ್ಟಿಕ್ ಹೆಚ್ಚಾಗಿ ಬಳಕೆಯಾಗುವ ಕಾರಣ ಇವು ದೀರ್ಘಕಾಲ ಬಾಳಿಕೆ ಕೂಡ ಬರುತ್ತವೆ