ಮಜ್ಜಿಗೆಗೆ ಈ ಪುಡಿಯನ್ನು ಬೆರೆಸಿ ರಾತ್ರಿ ಊಟದ ನಂತರ ಸೇವಿಸಿ, ಪಥ್ಯವಿಲ್ಲದೆಯೇ ಬ್ಲಡ್ ಶುಗರ್ ನಾರ್ಮಲ್ ಆಗುವುದು

Wed, 20 Nov 2024-12:40 pm,

ಮಧುಮೇಹ ಇರುವವರು ಕಡಿಮೆ ಗ್ಲೈಸೆಮಿಕ್ ಸೂಚಿ ಇರುವ ಆಹಾರವನ್ನಷ್ಟೇ ಸೇವಿಸಬೇಕು. ಈ ಆಧಾರದ ಪ್ರಕಾರ ಮಜ್ಜಿಗೆಯನ್ನು ಯಾವುದೇ ಆಳುಕಿಲ್ಲದೆ ಮಧುಮೇಹಿಗಳು ಸೇವಿಸಬಹುದು. 

 ಬೆಣ್ಣೆಯನ್ನು ಹೊರತೆಗೆದ ನಂತರ ಸಿಗುವ ಪಾನೀಯವೆ ಮಜ್ಜಿಗೆ. ಆದ್ದರಿಂದ ಇದು ಕೊಬ್ಬು ಮುಕ್ತವಾಗಿದ್ದು, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಹೊಂದಿದೆ.ಮಜ್ಜಿಗೆಯ ಗ್ಲೈಸೆಮಿಕ್ ಸೂಚ್ಯಂಕವು ಸರಿಸುಮಾರು 35 ಆಗಿದೆ. 

ಮಜ್ಜಿಗೆ ಪ್ರೋಬಯಾಟಿಕ್‌ ಸಮೃದ್ದವಾಗಿದ್ದು ಜೀರ್ಣಕ್ರಿಯೆಗೆ ವಿಶೇಷವಾಗಿ ಪ್ರಯೋಜನಕಾರಿಯಾಗಿದೆ.ಜೀರ್ಣಕ್ರಿಯೆ ಉತ್ತಮವಾಗಿ ಆದಾಗ ಬ್ಲಡ್ ಶುಗರ್ ನಿಯಂತ್ರಣದಲ್ಲಿ ಇರುತ್ತದೆ. 

ಇದು ಕೊಬ್ಬು ಮತ್ತು ಕ್ಯಾಲೋರಿಗಳಲ್ಲಿ ಕಡಿಮೆ ಮತ್ತು ಮಧ್ಯಮ ಪ್ರೋಟೀನ್ ಅನ್ನು ಹೊಂದಿದ್ದು, ಟೈಪ್ 1, 2,ಅಥವಾ ಗರ್ಭಾವಸ್ಥೆಯ ಮಧುಮೇಹ ಹೊಂದಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.

ಇನ್ನು ಮಜಿಗೆಗೆ ಒಂದು ಚಿಟಕಿ ಇಂಗು ಬೆರೆಸಿ ಸೇವಿಸಿದರೆ ಇದು ಬ್ಲಡ್ ಶುಗರ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.

ರಾತ್ರಿ ಊಟವಾದ ನಂತರ ಇಂಗು ಬೆರೆಸಿದ ಮಜ್ಜಿಗೆ ಕುಡಿಯುವುದರಿಂದ ಅದರ ಕ್ಯಾಲ್ಸಿಯಂ ಅಂಶ ಮತ್ತು ಮೆಲಟೋನಿನ್ ಉತ್ಪಾದಿಸಲು ಸಹಾಯ ಮಾಡುವ ಅಮೈನೊ ಆಸಿಡ್ ಟ್ರಿಪ್ಟೊಫಾನ್‌ನಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತದ ಸಕ್ಕರೆ ಅಂಶವನ್ನು ಕೂಡಾ ನಿಯಂತ್ರಣದಲ್ಲಿ ಇಡುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ

ZEENEWS TRENDING STORIES

By continuing to use the site, you agree to the use of cookies. You can find out more by Tapping this link