ಊಟಕ್ಕೂ 10 ನಿಮಿಷ ಮುನ್ನ ಮಜ್ಜಿಗೆಗೆ ಒಂದು ಚಿಟಕಿ ಈ ಪುಡಿ ಹಾಕಿ ಸೇವಿಸಿ !ಹೈ ಬ್ಲಡ್ ಶುಗರ್ ನಾರ್ಮಲ್ ಆಗುವುದು !
ಮಧುಮೇಹ ಇರುವವರು ಕಡಿಮೆ ಗ್ಲೈಸೆಮಿಕ್ ಸೂಚಿ ಇರುವ ಆಹಾರವನ್ನೇ ಆಯ್ಕೆ ಮಾಡಿಕೊಳ್ಳಬೇಕು. ಹಾಗಾಗಿ ಶುಗರ್ ಇರುವವರಿಗೆ ಮಜ್ಜಿಗೆ ಬೆಸ್ಟ್ ಆಯ್ಕೆ.
ಮಜ್ಜಿಗೆ ಬೆಣ್ಣೆಯನ್ನು ಹೊರತೆಗೆದ ನಂತರ ಸಿಗುವ ಪಾನೀಯವಾಗಿದೆ.ಇದರ ಗ್ಲೈಸೆಮಿಕ್ ಸೂಚ್ಯಂಕ ಸರಿಸುಮಾರು 35 ಆಗಿದೆ. ಇದು ಕೊಬ್ಬು ಮುಕ್ತವಾಗಿದ್ದು, ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ (GI) ಹೊಂದಿದೆ.
ಮಜ್ಜಿಗೆ ನೈಸರ್ಗಿಕ ಪ್ರೋಬಯಾಟಿಕ್ ಆಗಿದ್ದು, ಜೀರ್ಣಕ್ರಿಯೆಗೆ ಪ್ರಯೋಜನಕಾರಿಯಾಗಿದೆ.ಜೀರ್ಣಕ್ರಿಯೆ ಉತ್ತಮವಾಗಿದ್ದಾಗ ಬ್ಲಡ್ ಶುಗರ್ ನಿಯಂತ್ರಣದಲ್ಲಿಯೇ ಇರುತ್ತದೆ.
ಇದು ಕೊಬ್ಬು ಮತ್ತು ಕ್ಯಾಲೋರಿಗಳಲ್ಲಿ ಕಡಿಮೆ ಮತ್ತು ಮಧ್ಯಮ ಪ್ರೋಟೀನ್ ಅನ್ನು ಹೊಂದಿದ್ದು, ಟೈಪ್ 1, 2,ಅಥವಾ ಗರ್ಭಾವಸ್ಥೆಯ ಮಧುಮೇಹ ಹೊಂದಿರುವವರಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಇನ್ನು ಮಜಿಗೆಗೆ ಒಂದು ಚಿಟಕಿ ಇಂಗು ಬೆರೆಸಿ ಸೇವಿಸಿದರೆ ಬ್ಲಡ್ ಶುಗರ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ರಾತ್ರಿ ಊಟವಾದ ನಂತರ ಇಂಗು ಬೆರೆಸಿದ ಮಜ್ಜಿಗೆ ಕುಡಿಯುವುದರಿಂದ ಅದರ ಕ್ಯಾಲ್ಸಿಯಂ ಅಂಶ ಮತ್ತು ಮೆಲಟೋನಿನ್ ಉತ್ಪಾದಿಸಲು ಸಹಾಯ ಮಾಡುವ ಅಮೈನೊ ಆಸಿಡ್ ಟ್ರಿಪ್ಟೊಫಾನ್‌ನಿಂದ ನಿದ್ರೆಯ ಗುಣಮಟ್ಟವನ್ನು ಹೆಚ್ಚಿಸುತ್ತದೆ. ಜೊತೆಗೆ ರಕ್ತದ ಸಕ್ಕರೆ ಅಂಶವನ್ನು ಕೂಡಾ ನಿಯಂತ್ರಣದಲ್ಲಿ ಇಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ.Zee ಮಾಧ್ಯಮವು ಈ ಮಾಹಿತಿಯನ್ನು ಅನುಮೋದಿಸುವುದಿಲ್ಲ