ಭೋಜನದ ಬಳಿಕ ಮಜ್ಜಿಗೆ: ಈ ರೀತಿ ತಯಾರಿಸಿ ಕುಡಿದರಷ್ಟೇ ಸಿಗುತ್ತೆ ಸಂಪೂರ್ಣ ಆರೋಗ್ಯ ಪ್ರಯೋಜನ
ಕ್ಯಾಲ್ಸಿಯಂ, ವಿಟಮಿನ್ ಗಳಿಂದ ಕೂಡಿರುವ ಮಜ್ಜಿಗೆಯನ್ನು ನಿತ್ಯ ಮಧ್ಯಾಹ್ನದ ಊಟದ ಬಳಿಕ ಸೇವಿಸುವುದು ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ.
ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಎಂಬ ವಿಶೇಷ ಆಸಿಡ್ ಕಂಡು ಬರುತ್ತದೆ. ಇದು ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ತುಂಬಾ ಸಹಾಯಕವಾಗಿದೆ.
ಮಜ್ಜಿಗೆಯಲ್ಲಿ ಪ್ರೋಬಯಾಟಿಕ್ ಸಮೃದ್ಧವಾಗಿರುವುದರಿಂದ ಇದು ಜೀರ್ಣಾಂಗ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ನೆರವಾಗುತ್ತದೆ.
ಮಜ್ಜಿಗೆಯಲ್ಲಿ ವಿಟಮಿನ್ ಡಿ ಕೂಡ ಕಂಡುಬರುತ್ತದೆ. ಇದು ಎಲ್ಲಾ ವಯೋಮಾನದವರಲ್ಲೂ ಮೂಳೆಗಳನ್ನು ಬಳಪಡಿಸಲು ಸಹಾಯಕವಾಗಿದೆ.
ಮುಟ್ಟಿನ ಸೆಳೆತ ಹೆಚ್ಚಿರುವ ಮಹಿಳೆಯರು ಈ ಸಮಯದಲ್ಲಿ ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಮಜ್ಜಿಗೆ ಕುಡಿಯುವುದರಿಂದ ಬಹಳ ಶೀಘ್ರವಾಗಿ ಪರಿಹಾರ ಪಡೆಯುತ್ತಾರೆ.
ನಿತ್ಯ ಮಜ್ಜಿಗೆ ಕುಡಿಯುವುದರಿಂದ ಆರೋಗ್ಯಕರವಾಗಿ ತೂಕವನ್ನು ಕೂಡ ಇಳಿಸಬಹುದು. ಆದರೆ, ಮಜ್ಜಿಗೆಯನ್ನು ಸರಿಯಾದ ವಿಧಾನದಲ್ಲಿ ತಯಾರಿಸಿ ಕುಡಿದಾಗ ಮಾತ್ರ ಈ ಎಲ್ಲಾ ಆರೋಗ್ಯ ಪ್ರಯೋಜನಗಳು ಲಭಿಸುತ್ತದೆ.
ಹೆಪ್ಪು ಹಾಕಿದ ಮೊಸರನ್ನು ಚೆನ್ನಾಗಿ ಕಡೆದು ಬೆಣ್ಣೆ ತೆಗೆದು ಬಳಿಕ ಮಜ್ಜಿಗೆಯಲ್ಲಿ ಸ್ವಲ್ಪ ಹಿಂಗ್, ಹುರಿದು ಪುಡಿ ಮಾಡಿದ ಜೀರಿಗೆ, ಕೊತ್ತಂಬರಿ ಸೊಪ್ಪು ಹಾಕಿ ತಯಾರಿಸಿದ ಮಜ್ಜಿಗೆ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿರುತ್ತದೆ.
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು ಜೀ ಕನ್ನಡ ನ್ಯೂಸ್ ಹೇಳಿಕೊಳ್ಳುವುದಿಲ್ಲ.