ರಾತ್ರಿ ಮಲಗುವಾಗ ಒಂದು ಲೋಟ ಮಜ್ಜಿಗೆಗೆ ಈ ಸೊಪ್ಪು ಬೆರೆಸಿ ಕುಡಿದರೆ ಬೆಳಗಾಗುವಷ್ಟರಲ್ಲಿ ಬ್ಲಡ್ ಶುಗರ್ ನಾರ್ಮಲ್ ಆಗುತ್ತೆ! ಮುಂದಿನ 30 ದಿನಗಳವರೆಗೆ ಹೆಚ್ಚಾಗೋದೇ ಇಲ್ಲ
ಭಾರತದಲ್ಲಿ ಮಜ್ಜಿಗೆ ಎಂಬುದು ಸಾಮಾನ್ಯವಾಗಿ ಎಲ್ಲರಿಗೂ ಇಷ್ಟವಾಗುವ ಪಾನೀಯ ಎಂದೇ ಹೇಳಬಹುದು. ಈ ಮಜ್ಜಿಗೆಯಲ್ಲಿ ಅಪಾರ ಪ್ರಮಾಣದ ಆರೋಗ್ಯಕರ ಅಂಶಗಳು ಅಡಗಿವೆ.
ಮಜ್ಜಿಗೆ ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ರಂಜಕವು ಮಜ್ಜಿಗೆಯಲ್ಲಿ ಕಂಡುಬರುತ್ತದೆ. ಇದರಲ್ಲಿರುವ ಕ್ಯಾಲೋರಿಗಳ ಪ್ರಮಾಣವೂ ಕಡಿಮೆಯಿದ್ದು, ಹೊಟ್ಟೆ ತುಂಬಿದ ಅನುಭವ ನೀಡುವುದರಿಂದ ಪದೇ ಪದೇ ತಿನ್ನಬೇಕೆಂಬ ಬಯಕೆಗಳು ಬರುವುದಿಲ್ಲ.
ಇನ್ನು ಮಧುಮೇಹಿಗಳ ದೇಹದ ಮೇಲೆ ಮಜ್ಜಿಗೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ತಿಳಿಯೋಣ. sugarfit.com ಪ್ರಕಾರ, ಮಧುಮೇಹ ರೋಗಿಗಳು ಆಹಾರದ ಬಗ್ಗೆ ಅನೇಕ ನಿರ್ಬಂಧಗಳನ್ನು ಹೊಂದಿರುತ್ತಾರೆ. ಏನನ್ನೂ ತಿನ್ನುವ ಮೊದಲು ಅದು ಅವರಿಗೆ ಸುರಕ್ಷಿತವೇ ಅಥವಾ ಇಲ್ಲವೇ ಎಂದು ಯೋಚಿಸಬೇಕು.
ಆದರೆ ಮಜ್ಜಿಗೆಯನ್ನು ಮಧುಮೇಹಿಗಳು ಯೋಚಿಸದೆ ಕುಡಿಯಬಹುದು. ಇದು ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದ್ದು ಮಧುಮೇಹ ರೋಗಿಗಳಿಗೆ ಒಳ್ಳೆಯದು.
ಅಂದಹಾಗೆ ಗರ್ಭಿಣಿಯಾಗಿರುವ ಮಧುಮೇಹ ಹೊಂದಿರುವ ಮಹಿಳೆಯರು ಸಹ ಇದನ್ನು ತೆಗೆದುಕೊಳ್ಳಬಹುದು ಮತ್ತು ಇದು ಅವರಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ. ಮಜ್ಜಿಗೆಯಲ್ಲಿರುವ ಪೊಟ್ಯಾಸಿಯಮ್ ಅಂಶದಿಂದಾಗಿ, ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸುತ್ತದೆ. ಮಧುಮೇಹ ಮತ್ತು ರಕ್ತದೊತ್ತಡ ರೋಗಿಗಳಿಗೆ ಇದು ಸಹಾಯಕವಾಗಿದೆ.
ಮಜ್ಜಿಗೆಯಲ್ಲಿ ಕಡಿಮೆ ಕೊಬ್ಬಿನ ಅಂಶವಿದ್ದು ತೂಕ ಹೆಚ್ಚಾಗುವುದನ್ನು ಸಹ ತಡೆಯುತ್ತದೆ. ಮಜ್ಜಿಗೆಯಲ್ಲಿರುವ ಸತುವಿನ ಪ್ರಮಾಣದಿಂದಾಗಿ ಇದು ಗಾಯಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ. ಇದು ಮಧುಮೇಹ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಇನ್ನು ಮಜ್ಜಿಗೆ ಜೊತೆ ಕೊತ್ತಂಬರಿ ಸೊಪ್ಪನ್ನು ಸಹ ಬೆರೆಸಿ ಕುಡಿದರೆ ಬ್ಲಡ್ ಶುಗರ್ ಸುಲಭವಾಗಿ ಕಡಿಮೆ ಮಾಡಬಹುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆ ತೆಗೆದುಕೊಳ್ಳಿ. zee kannada news ಇದನ್ನು ಖಚಿತಪಡಿಸುವುದಿಲ್ಲ.