ಮಜ್ಜಿಗೆಗೆ ಈ ಎಲೆಯನ್ನು ಬೆರೆಸಿ ಕುಡಿದರೆ ನಾರ್ಮಲ್ ಆಗುವುದು ಬ್ಲಡ್ ಶುಗರ್! ಮತ್ತೆಂದೂ ಏರುವುದಿಲ್ಲ ರಕ್ತದಲ್ಲಿನ ಸಕ್ಕರೆ
ಮಜ್ಜಿಗೆ ಮಧುಮೇಹ ರೋಗಿಗಳಿಗೆ ಸಂಪೂರ್ಣವಾಗಿ ಸುರಕ್ಷಿತ ಪಾನೀಯವಾಗಿದೆ. ಮಜ್ಜಿಗೆಯನ್ನು ಯಾವ ಯೋಚನೆಯೂ ಇಲ್ಲದೆ ಮಧುಮೇಹ ರೋಗಿಗಳು ಸೇವಿಸಬಹುದು.
ಮಜ್ಜಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿದೆ.ಇದು ಮಧುಮೇಹ ರೋಗಿಗಳಿಗೆ ಒಳ್ಳೆಯದು.ಮಜ್ಜಿಗೆಯಲ್ಲಿ ಉರಿಯೂತ ನಿವಾರಕ ಗುಣವಿರುವುದರಿಂದ ಮಧುಮೇಹ ರೋಗಿಗಳಿಗೆ ಇದು ಬಹಳ ಮುಖ್ಯವಾಗಿದೆ.
ಮಜ್ಜಿಗೆಯನ್ನು ಹಾಗೆಯೇ ಕುಡಿಯುವ ಬದಲು ಇದ್ದಕ್ಕೆ ಕರಿಬೇವಿನ ಎಲೆಗಳನ್ನು ಬೆರೆಸಿ ಸೇರಿಸಬೇಕು. ಇದು ಬ್ಲಡ್ ಶುಗರ್ ಅನ್ನು ಬಹಳ ಬೇಗನೆ ನಿಯಂತ್ರಣಕ್ಕೆ ತರುತ್ತದೆ.
ಕರಿಬೇವು ರಕ್ತದಲ್ಲಿನ ಗ್ಲುಕೋಸ್ ಮಟ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ನಿರಂತರವಾಗಿ ಇದನ್ನು ಸೇವಿಸಿದರೆ ಹತ್ತೇ ದಿನಗಳಲ್ಲಿ ಶುಗರ್ ಸಂಪೂರ್ಣ ನಿಯಂತ್ರಣಕ್ಕೆ ಬರುತ್ತದೆ.
ಕರಿಬೇವಿನ ಎಲೆಗಳು ಅನೇಕ ಉತ್ಕರ್ಷಣ ನಿರೋಧಕಗಳಲ್ಲಿ ಅದರಲ್ಲಿಯೂ ಫ್ಲೇವನಾಯ್ಡ್ ಗಳಲ್ಲಿ ಸಮೃದ್ಧವಾಗಿವೆ.ಈ ಫ್ಲೇವನಾಯ್ಡ್‌ಗಳು ಪಿಷ್ಟದ ಚಯಾಪಚಯವನ್ನು ತಡೆಯುತ್ತದೆ.ಹಾಗಾಗಿ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೇ.
ಒಂದು ಲೋಟ ಮಜ್ಜಿಗೆ ತೆಗೆದುಕೊಳ್ಳಿ.ಕರಿಬೇವಿನ ಸೊಪ್ಪನ್ನು ಸಣ್ಣ ಸಣ್ಣ ತುಂಡುಗಳಾಗಿ ಕತ್ತರಿಸಿ ಮಜ್ಜಿಗೆಗೆ ಸೇರಿಸಿ. ನಂತರ 15 ರಿಂದ 20 ನಿಮಿಷಗಳವರೆಗೆ ಈ ಮಜ್ಜಿಗೆಯನ್ನು ಮುಚ್ಚಿಡಿ. ನಂತರ ಸೇವಿಸಿ.
ಇನ್ನೊಂದು ವಿಧಾನದಲ್ಲಿ ಮಜ್ಜಿಗೆಗೆ ಕರಿಬೇವಿನ ರಸ ತೆಗೆದು ಸೇವಿಸಿ ಹಾಗೆಯೇ ಸೇವಿಸಬಹುದು. ರುಚಿಗೆ ಬೇಕಿದ್ದರೆ ಸ್ವಲ್ಪ ಬ್ಲಾಕ್ ಸಾಲ್ಟ್ ಸೇರಿಸಬಹುದು.
ಸೂಚನೆ :ಈ ಲೇಖನವು ಸಾಮಾನ್ಯ ಮಾಹಿತಿಗಾಗಿ, ದಯವಿಟ್ಟು ಯಾವುದೇ ಪರಿಹಾರವನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿರಿ. ಜೀ ಕನ್ನಡ ನ್ಯೂಸ್ ಇದನ್ನು ಅನುಮೋದಿಸುವುದಿಲ್ಲ.