ಮಜ್ಜಿಗೆ ಜೊತೆ ಇದನ್ನು ಬೆರೆಸಿ ಕುಡಿದರೆ ಯುರಿಕ್ ಆಸಿಡ್ ಕರಗಿ ನೀರಾಗುತ್ತದೆ.. ಜೊತೆಗೆ ಕಿಡ್ನಿ ಸ್ಟೋನ್ ಇದ್ದರೂ ಪುಡಿಯಾಗಿ ಹೊರ ಹೋಗುತ್ತದೆ!
ಯುರಿಕ್ ಆಸಿಡ್ ದೇಹದಲ್ಲಿ ಹೆಚ್ಚಾದಾಗ ಕೈ ಮತ್ತು ಕಾಲುಗಳ ಗಂಟುಗಳಲ್ಲಿ ನೋವನ್ನು ಉಂಟುಮಾಡುತ್ತದೆ.
ಎದ್ದೇಳಲು ಮತ್ತು ಕುಳಿತುಕೊಳ್ಳಲು ಸಹ ಕಷ್ಟವಾಗುತ್ತದೆ. ಯುರಿಕ್ ಆಸಿಡ್ ಹೆಚ್ಚಾಗುವುದರಿಂದ ರಕ್ತದೊತ್ತಡ, ಥೈರಾಯ್ಡ್ ಮತ್ತು ಮಧುಮೇಹದಂತಹ ಕಾಯಿಲೆಗಳು ಸಹ ಬರಬಹುದು.
ಯುರಿಕ್ ಆಸಿಡ್ ಅತಿಯಾದಾಗ ಮೊಸರಿನ ಬದಲು ಮಜ್ಜಿಗೆ ಸೇವಿಸುವುದು ದೇಹಕ್ಕೆ ಒಳ್ಳೆಯದು. ಮಜ್ಜಿಗೆಯಿಂದ ದೇಹವು ಹೈಡ್ರೇಟ್ ಆಗಿರುತ್ತದೆ. ಆದರೆ ಮಜ್ಜಿಗೆಗೆ ಇದನ್ನು ಬೆರೆಸಿಯೇ ಕುಡಿಯಬೇಕು.
ಒಂದು ಲೋಟ ಮಜ್ಜಿಗೆಯಲ್ಲಿ 10 ರಿಂದ 15 ಕರಿಬೇವಿನ ಎಲೆಗಳನ್ನು ಸೇರಿಸಿ ಮುಚ್ಚಿಡಿ. ಸುಮಾರು 1 ಗಂಟೆಗಳ ಕಾಲ ಬಿಡಿ. ನಂತರ ಈ ಮಜ್ಜಿಗೆ ಕುಡಿಯಿರಿ.
ಕರಿಬೇವಿನ ಎಲೆಗಳು ನಿಮ್ಮ ರಕ್ತದಲ್ಲಿನ ಯುರಿಕ್ ಆಸಿಡ್ ಪ್ರಮಾಣವನ್ನು ಕಡಿಮೆ ಮಾಡಬಹುದು. ಕರಿಬೇವು ಕಿಡ್ನಿ ಸ್ಟೋನ್ ನಿವಾರಣೆಗೂ ಉತ್ತಮ ಮನೆಮದ್ದಾಗಿದೆ.
ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.