ಮಜ್ಜಿಗೆಗೆ ಇದನ್ನು ಬೆರೆಸಿ ಬಿಳಿ ಕೂದಲಿಗೆ ಹಚ್ಚಿದರೆ ಕಡು ಕಪ್ಪಾಗಿ ಮಾರುದ್ದ ಬೆಳೆಯುವುದು!
ಬೂದು ಕೂದಲಿಗೆ ಮುಖ್ಯ ಕಾರಣ ಪೋಷಕಾಂಶಗಳ ಕೊರತೆ. ಪೋಷಕಾಂಶಗಳನ್ನು ಹೇರಳವಾಗಿ ಸೇವಿಸಬೇಕು. ಇದರೊಂದಿಗೆ ಈ ಮನೆಮದ್ದು ಮೂಲಕ ಬಿಳಿ ಕೂದಲನ್ನು ಸುಲಭವಾಗಿ ಕಪ್ಪಾಗಿಸಬಹುದು.
ಅರ್ಧ ಹಿಡಿ ಕರಿಬೇವಿನ ಎಲೆಗಳು, ಮಜ್ಜಿಗೆ ಬಳಸಿ ಈ ಹೇರ್ ಮಾಸ್ಕ್ ತಯಾರಿಸಬಹುದು. ಇದು ಬಿಳಿ ಕೂದಲನ್ನು ಕಪ್ಪಾಗಿಸುವುದಲ್ಲದೇ, ಒಣ ಕೂದಲಿನ ಸಮಸ್ಯೆಗೂ ಪರಿಹಾರ ನೀಡುತ್ತದೆ.
ಮೊದಲು ಕರಿಬೇವಿನ ಎಲೆಗಳನ್ನು ತೆಗೆದುಕೊಂಡು ಚೆನ್ನಾಗಿ ತೊಳೆಯಿರಿ. ಬಳಿಕ ಗ್ರೈಂಡರ್‌ನಲ್ಲಿ ಹಾಕಿ ಮಜ್ಜಿಗೆ ಬೆರೆಸುತ್ತ ಚೆನ್ನಾಗಿ ರುಬ್ಬಿಕೊಳ್ಳಿ. ದಪ್ಪ ಪೇಸ್ಟ್ ಸಿದ್ಧವಾಗಬೇಕು.
ಈಗ ಈ ಪೇಸ್ಟ್ ಗೆ ಸ್ವಲ್ಪ ಬೀಟ್ ರೂಟ್ ರಸ ಬೆರೆಸಿ. ನೀವು ಬಯಸಿದರೆ ಕಾಫಿ ಪುಡಿಯನ್ನು ಸಹ ಹಾಕಬಹುದು.
ಕೂದಲಿನ ಬುಡಕ್ಕೆ ಈ ಪೇಸ್ಟ್ ಹಚ್ಚಿ ಮತ್ತು ಕನಿಷ್ಠ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಬಳಿಕ 20 ನಿಮಿಷಗಳ ಕಾಲ ಬಿಡಿ. ನಂತರ ಶುದ್ಧ ನೀರಿನಿಂದ ತೊಳೆಯಿರಿ.
ತಿಂಗಳಿಗೆ ಕನಿಷ್ಠ ಎರಡು ಬಾರಿ ಈ ಹೇರ್ ಮಾಸ್ಕ್ ಬಳಸಿ. ಇದು ಬಿಳಿ ಕೂದಲನ್ನು ಬುಡದಿಂದಲೇ ಕಪ್ಪಾಗಿಸುವುದು ಜೊತೆಗೆ ಕೂದಲ ಉದ್ದ ದಪ್ಪವಾಗಿ ಬೆಳೆಯುವುದು.
ಸೂಚನೆ: ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.