ಕೈಕಾಲುಗಳೆಲ್ಲಾ ಸಣ್ಣಗಿದ್ದು ಹೊಟ್ಟೆ ಮಾತ್ರ ದಪ್ಪಗಿದೆಯೇ? ನೀರು ಮಜ್ಜಿಗೆಗೆ ಇದನ್ನು ಬೆರೆಸಿ ಕುಡಿಯಿರಿ ! ಹೊಟ್ಟೆ ಕರಗುವುದು ಪಕ್ಕಾ !
ನಮ್ಮಲ್ಲಿ ಅನೇಕರು ಬಹುಶಃ ಪ್ರತಿದಿನ ನಮ್ಮ ಆಹಾರದಲ್ಲಿ ಮಜ್ಜಿಗೆಯನ್ನು ಸೇರಿಸುತ್ತಾರೆ.ಆದರೆ ನಿಮ್ಮ ಈ ಅಭ್ಯಾಸವು ತೂಕವನ್ನು ಕಳೆದುಕೊಳ್ಳುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಮಜ್ಜಿಗೆಯನ್ನು ಇಂಗ್ಲಿಷ್‌ನಲ್ಲಿ ಬಟರ್ ಮಿಲ್ಕ್ ಎಂದೂ ಕರೆಯುತ್ತಾರೆ. ಬಟರ್ ಮಿಲ್ಕ್ ಅಂದ ಕೂಡಲೇ ಇದರಲ್ಲಿ ಬೆಣ್ಣೆ ಮತ್ತು ಕೆನೆಯಿಂದ ತುಂಬಿರುತ್ತದೆ ಅನ್ನಿಸುತ್ತದೆ. ಆದರೆ ಹಾಗಲ್ಲ,ಮಜ್ಜಿಗೆ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಇದು ತೂಕ ಇಳಿಸುವಲ್ಲಿ ಬಹಳಷ್ಟು ಸಹಾಯ ಮಾಡುತ್ತದೆ.
ಹಾಲಿನ ಕೆನೆಯನ್ನು ಬೆಣ್ಣೆಯಾಗಿ ಪರಿವರ್ತಿಸಿದ ನಂತರ ಉಳಿದಿರುವ ನೀರೇ ಈ ಮಜ್ಜಿಗೆ. ಮೊಸರಿನಲ್ಲಿ ನೀರು ಬೆರೆಸಿ ಕರಗಿಸಿ ಕೂಡ ಮಜ್ಜಿಗೆ ತಯಾರಿಸಬಹುದು.
100 ಮಿಲಿ ಮಜ್ಜಿಗೆ ಸರಿಸುಮಾರು 40 ಕ್ಯಾಲೋರಿ ಶಕ್ತಿಯನ್ನು ಒದಗಿಸುತ್ತದೆ. ಬೆಣ್ಣೆಯನ್ನು ತೆಗೆದುಹಾಕುವುದರಿಂದ,ಇದು ಹಾಲಿಗಿಂತ ಕಡಿಮೆ ಕೊಬ್ಬು ಮತ್ತು ಕ್ಯಾಲೊರಿಗಳನ್ನು ಹೊಂದಿರುತ್ತದೆ. ಇದು ಪ್ರೋಟೀನ್ ಮತ್ತು ಕ್ಯಾಲ್ಸಿಯಂನ ಉತ್ತಮ ಮೂಲವಾಗಿದೆ.
ಜೊತೆಗೆ, ಮಜ್ಜಿಗೆಯಲ್ಲಿರುವ ಪ್ರೋಬಯಾಟಿಕ್‌ಗಳು ಆರೋಗ್ಯಕರ ಕರುಳಿನ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆ, ನಿರ್ವಿಶೀಕರಣದಲ್ಲಿಯೂ ಸಹಾಯ ಮಾಡುತ್ತದೆ. ಹೊಟ್ಟೆಯ ಕೊಬ್ಬು ಕರಗಲು ಇದು ಕೂಡಾ ಮುಖ್ಯ ಕಾರಣ.
ಇನ್ನು ಈ ಮಜ್ಜಿಗೆಗೆ ಮೆಂತ್ಯೆ ಬೀಜವನ್ನು ಪುಡಿ ಮಾಡಿ ಬೆರಸಿ ಕುಡಿಯಬೇಕು. ಮೆಂತ್ಯೆ ಕೂಡಾ ತೂಕ ಕಡಿಮೆ ಮಾಡುವಲ್ಲಿ, ಬೊಜ್ಜು ಕರಗಿಸುವಲ್ಲಿ ಬಹಳ ಮುಖ್ಯ ಪಾತ್ರ ವಹಿಸುತ್ತದೆ.
ಮಜ್ಜಿಗೆ ಮತ್ತು ಮೆಂತ್ಯೆ ಎರಡನ್ನೂ ಜೊತೆಯಾಗಿ ಸೇವಿಸಿದರೆ ಅದು ಹೊಟ್ಟೆ ಮತ್ತು ಸೊಂಟದ ಭಾಗದ ಕೊಬ್ಬು ಕರಗಿಸಲು ಹೆಚ್ಚು ಸಹಾಯ ಮಾಡುತ್ತದೆ. (ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು, ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE KANNADA NEWS ಇದನ್ನು ಖಚಿತಪಡಿಸುವುದಿಲ್ಲ.)