Vastu Tips: ಈ ದಿನ ಪೊರಕೆ ಖರೀದಿಸಿದರೆ ಆರ್ಥಿಕ ಬಿಕ್ಕಟ್ಟು ದೂರವಾಗಿ.. ಲಕ್ಷ್ಮೀ ದೇವಿಯ ಕೃಪೆಯಿಂದ ಕಡು ಬಡವನೂ ಶ್ರೀಮಂತನಾಗುವ !
ಮನೆಯನ್ನು ಸ್ವಚ್ಛಗೊಳಿಸುವ ಪೊರಕೆಗೂ ವಾಸ್ತು ನಿಯಮವಿದೆ. ಇಂದು ನಾವು ನಿಮಗೆ ಪೊರಕೆಗೆ ಸಂಬಂಧಿಸಿದ ಕೆಲವು ವಾಸ್ತು ನಿಯಮಗಳನ್ನು ಹೇಳಲಿದ್ದೇವೆ.
ವಾಸ್ತು ನಿಯಮಗಳನ್ನು ಅನುಸರಿಸದಿದ್ದರೆ ನಕಾರಾತ್ಮಕ ಪರಿಣಾಮಗಳನ್ನು ಸಹ ಕಾಣಬಹುದು. ಹಿಂದೂ ಧರ್ಮದಲ್ಲಿ ಸಂಪತ್ತು, ಸಮೃದ್ಧಿ ಮತ್ತು ಆರ್ಥಿಕ ಸ್ಥಿತಿಯ ದೇವತೆಯಾದ ಲಕ್ಷ್ಮಿ ದೇವಿ ಒಲಿಯಲು ವಾಸ್ತು ನಿಯಮ ಪಾಲಿಸುವುದು ಮುಖ್ಯ ಎಂದು ನಂಬಲಾಗಿದೆ.
ಶುಕ್ರವಾರ ಮತ್ತು ಮಂಗಳವಾರದಂದು ಪೊರಕೆಯನ್ನು ಖರೀದಿಸುವುದು ತುಂಬಾ ಮಂಗಳಕರವೆಂದು ಪರಿಗಣಿಸಲಾಗಿದೆ. ಇದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ಯಾವಾಗಲೂ ಆ ಮನೆಯವರ ಮೇಲಿರುತ್ತದೆ. ಅದೃಷ್ಟದ ಬೆಂಬಲ ಸಿಗುವುದು ಎಂದು ನಂಬಲಾಗಿದೆ.
ಪಂಚಕದಲ್ಲಿ ಪೊರಕೆಯನ್ನು ಖರೀದಿಸುವುದು ಅಶುಭವೆಂದು ಪರಿಗಣಿಸಲಾಗಿದೆ. ಹಿಂದೂ ಧರ್ಮದಲ್ಲಿ, ಪಂಚಕದ ಸಮಯವನ್ನು ಅತ್ಯಂತ ಅಶುಭವೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯಗಳನ್ನು ಮಾಡುವುದಿಲ್ಲ. ಇದು ಶುಭ ಫಲವನ್ನೂ ನೀಡುವುದಿಲ್ಲ.
ಶನಿವಾರದಂದು ಪೊರಕೆ ಖರೀದಿಸಬಾರದು. ಈ ದಿನ ಪೊರಕೆ ಖರೀದಿಯನ್ನು ಅಶುಭವೆಂದು ಪರಿಗಣಿಸಲಾಗುತ್ತದೆ. ಇದು ಲಕ್ಷ್ಮಿ ದೇವಿಯ ಕೋಪಕ್ಕೆ ಕಾರಣವಾಗಬಹುದು. ಆರ್ಥಿಕ ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು ಎಂದು ಹೇಳಲಾಗುತ್ತದೆ.
ವಾರದ ಮೊದಲ ದಿನ ಅಂದರೆ ಸೋಮವಾರ ಕೂಡ ಪೊರಕೆ ಖರೀದಿಸುವುದನ್ನು ತಪ್ಪಿಸಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಈ ದಿನ ಪೊರಕೆ ಖರೀದಿಸುವುದರಿಂದ ಆರ್ಥಿಕ ನಷ್ಟ ಉಂಟಾಗಬಹುದು. ಸಾಲದ ಹೊರೆಯನ್ನು ಸಹ ಹೊರಬೇಕಾಗಬಹುದು.
ವಾಸ್ತು ಶಾಸ್ತ್ರದ ಪ್ರಕಾರ ಪೊರಕೆಯನ್ನು ಮನೆಯ ವಾಯುವ್ಯ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡಬೇಕು. ಇದರಿಂದ ಆರ್ಥಿಕ ತೊಂದರೆಗಳು ದೂರವಾಗಿ ಶ್ರೀಮಂತಿಕೆ ಬರುವುದು. (ಗಮನಿಸಿ:ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದಕ್ಕೆ ಹೊಣೆಯಲ್ಲ.)