ಉತ್ತಮ ಕ್ಯಾಮೆರಾ & ಅದ್ಭುತ ವೈಶಿಷ್ಟ್ಯಗಳು: 15 ಸಾವಿರದೊಳಗೆ ಖರೀದಿಸಿ ಈ 5 ಸ್ಮಾರ್ಟ್‌ಫೋನ್‌

Sun, 02 Jan 2022-1:52 pm,

ಈ ಇನ್ಫಿನಿಕ್ಸ್ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ಮುಖ್ಯ ಸೆನ್ಸಾರ್ 50MP ಆಗಿದೆ. ಇದರಲ್ಲಿ ನೀವು 2MPಯ ಡೆಪ್ತ್ ಲೆನ್ಸ್ ಅನ್ನು ಪಡೆಯುತ್ತೀರಿ ಮತ್ತು 2MPಯ ಮ್ಯಾಕ್ರೋ ಲೆನ್ಸ್ ಸಹ ಲಭ್ಯವಿರುತ್ತದೆ. 5,000mAh ನ ಪ್ರಬಲ ಬ್ಯಾಟರಿಯೊಂದಿಗೆ ಈ ಫೋನ್ 6BG RAM ಮತ್ತು 64GB ಆಂತರಿಕ ಸ್ಟೋರೇಜ್ ಜೊತೆಗೆ ಬರುತ್ತದೆ. ನೀವು ಫ್ಲಿಪ್‌ಕಾರ್ಟ್‌ನಲ್ಲಿ ಇದನ್ನು 16,999 ಬದಲು 13,999 ರೂ.ಗೆ ಖರೀದಿಸಬಹುದು.

ಈ Motorola 5G ಸ್ಮಾರ್ಟ್‌ಫೋನ್ 13MP ಮುಂಭಾಗದ ಕ್ಯಾಮೆರಾ ಮತ್ತು 50MP ಮುಖ್ಯ ಸೆನ್ಸಾರ್ ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರಲಿದೆ. ಇದರಲ್ಲಿ 2ನೇ ಸೆನ್ಸಾರ್ 8MP ಮತ್ತು 3ನೇ ಸೆನ್ಸಾರ್ 2MP ಆಗಿರುತ್ತದೆ. 5,000mAh ಬ್ಯಾಟರಿಯೊಂದಿಗೆ ನೀವು ಇದರಲ್ಲಿ 64GB ಸ್ಟೋರೇಜ್ ಪಡೆಯುತ್ತೀರಿ. ಇದನ್ನು ಫ್ಲಿಪ್‌ಕಾರ್ಟ್‌ನಲ್ಲಿ 17,999 ರೂ. ಬದಲಿಗೆ 14,999 ರೂ.ಗಳಿಗೆ ಖರೀದಿಸಬಹುದು.

64GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್ 6,000mAh ಬ್ಯಾಟರಿಯೊಂದಿಗೆ ಬರುತ್ತದೆ. ಕ್ಯಾಮೆರಾದ ಬಗ್ಗೆ ಹೇಳುವುದಾದರೆ ಇದರ ಮುಖ್ಯ ಸೆನ್ಸಾರ್ 50MP ಆಗಿದೆ. 2ನೇ ಸೆನ್ಸಾರ್ 8MP ಮತ್ತು 3ನೇ ಮತ್ತು 4ನೇ ಸೆನ್ಸಾರ್ 2MP ಆಗಿದೆ. ಅಂದರೆ ಈ ಫೋನ್ ಕ್ವಾಡ್ ರಿಯರ್ ಕ್ಯಾಮೆರಾ ಸೆಟಪ್‌ನೊಂದಿಗೆ ಬರುತ್ತದೆ. ಇದರಲ್ಲಿ ನೀವು 8MP ಮುಂಭಾಗದ ಕ್ಯಾಮೆರಾವನ್ನು ಸಹ ಪಡೆಯುತ್ತೀರಿ. ನೀವು ಈ Redmi ಫೋನ್ ಅನ್ನು ಫ್ಲಿಪ್‌ಕಾರ್ಟ್ ನಲ್ಲಿ13,179 ರೂ.ಗೆ ಖರೀದಿಸಬಹುದು. 

ರಿಯಲ್ ಮಿಯ ಈ ಸ್ಮಾರ್ಟ್‌ಫೋನ್‌ 2MP 2ನೇ ಮತ್ತು 3ನೇ ಸೆನ್ಸಾರ್ ನೊಂದಿಗೆ 50MP ಪ್ರಾಥಮಿಕ ಸೆನ್ಸಾರ್ ನಲ್ಲಿ ಬರುತ್ತದೆ. 6,000mAh ಬ್ಯಾಟರಿ ಮತ್ತು 6.5 ಇಂಚಿನ HD+ LCD ಇನ್-ಸೆಲ್ ಡಿಸ್ಪ್ಲೇ ಜೊತೆಗೆ ನೀವು 8MP ಫ್ರಂಟ್ ಕ್ಯಾಮೆರಾವನ್ನು ಸಹ ಪಡೆಯುತ್ತೀರಿ. ಈ 4G ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 13,999 ರೂ. ಬದಲಿಗೆ 12,499 ರೂ.ಗಳಿಗೆ ಖರೀದಿಸಬಹುದು.

ಮೊಟೊರೊಲಾದ ಈ 4G ಸ್ಮಾರ್ಟ್‌ಫೋನ್ 6.47-ಇಂಚಿನ ಪೂರ್ಣ HD + AMOLED ಡಿಸ್ಪ್ಲೇ, 13MP ಸೆಲ್ಫಿ ಕ್ಯಾಮೆರಾ ಮತ್ತು 5,000mAh ಬ್ಯಾಟರಿಯಂತಹ ವೈಶಿಷ್ಟ್ಯಗಳನ್ನು ಹೊಂದಿದೆ. ಇದರಲ್ಲಿ ನೀವು 50MP ಮುಖ್ಯ ಸೆನ್ಸಾರ್, 8MP 2ನೇ ಮತ್ತು 2MP 3ನೇ ಸೆನ್ಸಾರ್ ಪಡೆಯುತ್ತೀರಿ. 4GB RAM ಮತ್ತು 64GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಸ್ಮಾರ್ಟ್‌ಫೋನ್ ಅನ್ನು ಫ್ಲಿಪ್‌ಕಾರ್ಟ್‌ನಲ್ಲಿ 13,999 ರೂ. ಬದಲಿಗೆ 12,999 ರೂ.ಗೆ ಖರೀದಿಸಬಹುದು.

ZEENEWS TRENDING STORIES

By continuing to use the site, you agree to the use of cookies. You can find out more by Tapping this link