ಚಿನ್ನವೇ ಆಗಬೇಕೆಂದಿಲ್ಲ ! ರಾಶಿಗನುಗುಣವಾಗಿ ಅಕ್ಷಯ ತೃತೀಯದ ದಿನ ಈ ಲೋಹ ಖರೀದಿಸಿದರೂ ಉಕ್ಕಿ ಬರುವುದು ಧನ ರಾಶಿ
ಅಕ್ಷಯ ತೃತೀಯ ದಿನದಂದು ಚಿನ್ನವನ್ನು ಖರೀದಿಸುವುದು ಮಂಗಳಕರವೆಂದು ಹೇಳಲಾಗುತ್ತದೆ. ಅಕ್ಷಯ ತೃತೀಯದಂದು ನೀವು ಚಿನ್ನವನ್ನು ಖರೀದಿಸಲು ಸಾಧ್ಯವಾಗದಿದ್ದರೆ, ನಿಮ್ಮ ರಾಶಿಗನುಗುಣವಾಗಿ ಇತರ ಲೋಹಗಳನ್ನು ಖರೀದಿಸಬಹುದು. ಅಕ್ಷಯ ತೃತೀಯದಂದು ಯಾವ ರಾಶಿಯವರು ಯಾವ ಲೋಹವನ್ನು ಖರೀದಿಸಬಹುದು ಎಂಬುದನ್ನು ತಿಳಿಯೋಣ.
ಮಿಥುನ ಮತ್ತು ಕನ್ಯಾ ರಾಶಿ : ಈ ರಾಶಿಯವರು ಅಕ್ಷಯ ತೃತೀಯ ದಂದು ಕಂಚಿನ ಆಭರಣಗಳನ್ನು ಖರೀದಿಸಬೇಕು. ತಟ್ಟೆ, ಲೋಟ ಅಥವಾ ಯಾವುದೇ ಪಾತ್ರೆಯಾಗಿರಬಹುದು. ಅಕ್ಷಯ ತೃತೀಯದ ದಿನ ಕಂಚಿನ ವಸ್ತುಗಳನ್ನು ಖರೀದಿಸಿದರೆ ಮಾಡುವ ಎಲ್ಲಾ ಕಾರ್ಯಗಳಲ್ಲಿಯೂ ಯಶಸ್ಸು ಸಿಗಲಿದೆ.
ಮಕರ ರಾಶಿ : ಮಕರ ರಾಶಿಯವರು ಅಕ್ಷಯ ತೃತೀಯ ದಿನದಂದು ಸ್ಟೀಲ್ ಪಾತ್ರೆಗಳನ್ನು ಅಥವಾ ಕಬ್ಬಿಣದಿಂದ ಮಾಡಿದ ವಸ್ತುಗಳನ್ನು ಖರೀದಿಸಬೇಕು. ಹೀಗೆ ಮಾಡುವುದರಿಂದ ದೇವರ ಆಶೀರ್ವಾದ ಸಿಕ್ಕಿ ನೆಮ್ಮದಿಯ ಜೀವನ ನಿಮ್ಮದಾಗುತ್ತದೆ.
ವೃಷಭ ಮತ್ತು ಕರ್ಕಾಟಕ: ಈ ಎರಡು ರಾಶಿಗಳ ಜನರು ಅಕ್ಷಯ ತೃತೀಯ 2023 ರಂದು ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಖರೀದಿಸುವುದು ಶುಭಕರ. ಹೀಗೆ ಮಾಡುವುದರಿಂದ ಅವರಿಗೆ ಕೆಲಸದ ಸ್ಥಳದಲ್ಲಿ ಬಡ್ತಿ ಸಿಗುವ ಸಾಧ್ಯತೆ ಹೆಚ್ಚುತ್ತದೆ.
ಧನು ರಾಶಿ ಮತ್ತು ಮೀನ: ಈ ರಾಶಿಚಕ್ರದ ಜನರು ಅಕ್ಷಯ ತೃತೀಯ ದಿನದಂದು ಚಿನ್ನ ಮತ್ತು ಹಿತ್ತಾಳೆಯಿಂದ ಮಾಡಿದ ವಸ್ತುಗಳನ್ನು ಖರೀದಿಸಬಹುದು. ಹೀಗೆ ಮಾಡುವುದರಿಂದ ಅರ್ಧಕ್ಕೆ ನಿಂತಿರುವ ಕೆಲಸ ಕಾರ್ಯಗಳು ಪೂರ್ಣಗೊಳ್ಳುತ್ತವೆ.
ವೃಶ್ಚಿಕ: ಈ ರಾಶಿಯವರು ಅಕ್ಷಯ ತೃತೀಯ ದಿನದಂದು ಚಿನ್ನದ ಬದಲು ತಾಮ್ರದಿಂದ ತಯಾರಿಸಿದ ವಸ್ತುಗಳನ್ನು ಖರೀದಿಸುವುದು ಉತ್ತಮ. ಇದರಿಂದ ಕುಟುಂಬದಲ್ಲಿ ಸುಖ, ಶಾಂತಿ, ಸಮೃದ್ಧಿ ನೆಲೆಸುತ್ತದೆ.
ಮೇಷ ಮತ್ತು ಸಿಂಹ: ಅಕ್ಷಯ ತೃತೀಯ 2023 ರಂದು, ಈ ಎರಡು ರಾಶಿಯವರು ಚಿನ್ನ ಮತ್ತು ತಾಮ್ರವನ್ನು ಖರೀದಿಸಬೇಕು. ಇದರಿಂದ ಹ ಲಕ್ಷ್ಮೀ ದೇವಿಯು ಪ್ರಸನ್ನಳಾಗುತ್ತಾಳೆ. ಎಲ್ಲಾ ಇಷ್ಟಾರ್ಥಗಳು ಈಡೇರುತ್ತವೆ.
( ಸೂಚನೆ : ಇಲ್ಲಿ ನೀಡಲಾದ ಲೇಖನವು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)