ಧಂತೇರಸ್‌ನಲ್ಲಿ ಈ ವಸ್ತುಗಳ ಖರೀದಿ ಬಡತನಕ್ಕೆ ಕಾರಣವಾಗಬಹುದು, ಎಚ್ಚರ!
ಕಾರ್ತಿಕ ಮಾಸದ ಕೃಷ್ಣ ಪಕ್ಷದ ತ್ರಯೋದಶಿ ದಿನವನ್ನು ಧಂತೇರಸ್ ಎಂದು ಹೇಳಲಾಗುತ್ತದೆ. ಈ ದಿನದಿಂದಲೇ ದೀಪಾವಳಿ ಹಬ್ಬ ಆರಂಭವಾಗುತ್ತದೆ.
ಈ ವರ್ಷ ನವೆಂಬರ್ 10ರಂದು ಧಂತೇರಸ್ ಹಬ್ಬವನ್ನು ಆಚರಿಸಲಾಗುತ್ತದೆ.
ಧಂತೇರಸ್ ದಿನದಂದು ಚಿನ್ನ, ಬೆಳ್ಳಿ, ಪೊರಕೆ ಸೇರಿದಂತೆ ಕೆಲವು ಪದಾರ್ಥಗಳನ್ನು ತರುವುದು ಶುಭ ಎಂದು ಹೇಳಲಾಗುತ್ತದೆ. ಇದರಿಂದ ಮನೆಗೆ ಲಕ್ಷ್ಮಿಯ ಆಗಮನವಾಗುತ್ತದೆ ಎಂಬ ನಂಬಿಕೆ ಇದೆ.
ಅಂತೆಯೇ ಧಂತೇರಸ್‌ನಲ್ಲಿ ಕೆಲವು ವಸ್ತುಗಳನ್ನು ಖರೀದಿಸದಂತೆಯೂ ಮತ್ತು ಈ ವಸ್ತುಗಳ ಖರೀದಿಯಿಂದ ಬಡತನ ಬರುತ್ತದೆ ಎಂತಲೂ ಹೇಳಲಾಗುತ್ತದೆ. ಹಾಗಿದ್ದರೆ, ಈ ದಿನ ಯಾವ ವಸ್ತುಗಳನ್ನು ಖರೀದಿಸುವುದನ್ನು ತಪ್ಪಿಸಬೇಕು ಎಂದು ನೋಡುವುದಾದರೆ...
ಧಂತೇರಸ್‌ನಲ್ಲಿ ಚಾಕುಗಳು, ಕತ್ತರಿಗಳು, ಪಿನ್ಗಳು, ಸೂಜಿಗಳು ಅಥವಾ ಯಾವುದೇ ಚೂಪಾದ ವಸ್ತುಗಳನ್ನು ಅಪ್ಪಿತಪ್ಪಿಯೂ ಖರೀದಿಸಬಾರದು.
ಧಂತೇರಸ್ ದಿನದಂದು ಪ್ಲಾಸ್ಟಿಕ್ ವಸ್ತುಗಳನ್ನು ಖರೀದಿಸಬಾರದು. ಇದರಿಂದ ಮನೆಯಲ್ಲಿ ಬಡತನ ಬರುತ್ತದೆ ಎಂದು ಹೇಳಲಾಗುತ್ತದೆ.
ಜ್ಯೋತಿಷ್ಯದಲ್ಲಿ ಶನಿದೇವನ ಅಂಶವೆಂದು ಪರಿಗಣಿಸಲಾಗುತ್ತದೆ. . ಹಾಗಾಗಿ, ಧಂತೇರಸ್‌ನಲ್ಲಿ ಯಾವುದೇ ರೀತಿಯ ಕಬ್ಬಿಣದ ವಕಬ್ಬಿಣವನ್ನುಸ್ತುಗಳನ್ನು ಖರೀದಿಸಬಾರದು ಎಂದು ಹೇಳಲಾಗುತ್ತದೆ.
ಧಂತೇರಸ್ ದಿನದಂದು ಗಾಜಿನ ವಸ್ತುಗಳನ್ನು ಮನೆಗೆ ತರುವುದರಿಂದ ದುರಾದೃಷ್ಟ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ಈ ದಿನ ಮನೆಗೆ ಗಾಜಿನ ವಸ್ತುಗಳನ್ನು ತರುವುದನ್ನು ತಪ್ಪಿಸಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.