Shani-Shukra In Navpancham Yog: ಶೀಘ್ರದಲ್ಲಿಯೇ ನವಪಂಚಮ ರಾಜಯೋಗ ನಿರ್ಮಾಣ, ಧನದಾತ ಶುಕ್ರ- ಕರ್ಮಫಲದಾತ ಶನಿ ಕೃಪೆಯಿಂದ ಅಪಾರ ಧನಲಾಭ!
ತುಲಾ ರಾಶಿ: ತುಲಾ ರಾಶಿಗೆ ಶುಕ್ರ ಅಧಿಪತಿ. ಹೀಗಾಗಿ ನವಪಂಚಮ ರಾಜಯೋಗ ನಿಮ್ಮ ಪಾಲಿಗೆ ಅತ್ಯಂತ ಶುಭ ಸಾಬೀತಾಗಲಿದೆ. ಏಕೆಂದರೆ ನಿಮ್ಮ ಜಾತಕದ ಪಂಚಮ ಭಾವದಲ್ಲಿ ಶನಿ ವಿರಾಜಮಾನನಾಗಿದ್ದರೆ, ನವಮಭಾವದಲ್ಲಿ ಶುಕ್ರ ಇರಲಿದ್ದಾನೆ. ಇದರಿಂದಾಗಿ ನಿಮ್ಮ ಅದೃಷ್ಟದಲ್ಲಿ ಉನ್ನತಿ ಇರಲಿದೆ. ಧಾರ್ಮಿಕ ಯಾತ್ರೆ ಕೈಗೊಳ್ಳುವಿರಿ, ಕಾರ್ಯಸಿದ್ಧಿ ಪ್ರಾಪ್ತಿಯಾಗಲಿದೆ. ಇನ್ನೊಂದೆಡೆ ಶನಿ ಮೂಲತ್ರಿಕೋಣ ರಾಜಯೋಗ ಕೂಡ ನಿರ್ಮಿಸುತ್ತಿದ್ದಾನೆ. ಹೀಗಾಗಿ ಈ ಅವಧಿಯಲ್ಲಿ ನೌಕರವರ್ಗದ ಜಾನರಿಗಾಗಿ ಪದೋನ್ನತಿಯ ಯೋಗ ನಿರ್ಮಾಣಗೊಳ್ಳುತ್ತಿದೆ. ಹೀಗಾಗಿ ಈ ಅವಧಿಯಲ್ಲಿ ನೀವು ಧನಾರ್ಜನೆ ಹಾಗೂ ಹೂಡಿಕೆ ಮಾಡುವಲ್ಲಿ ಯಶಸ್ವಿಯಾಗುವಿರಿ. ಸಂತಾನ ಪಕ್ಷದ ವತಿಯಿಂದ ನಿಮಗೆ ಶುಭ ಸಮಾಚಾರ ಪ್ರಾಪ್ತಿಯಾಗಲಿದೆ.
ಧನು ರಾಶಿ: ಧನು ರಾಶಿಯ ಜಾತಕದವರ ವೈವಾಹಿಕ ಜೀವನ, ಬಂಧುಮಿತ್ರರು ಹಾಗೂ ಸಹಕರ್ಮಿಗಳ ದೃಷ್ಟಿಯಿಂದ ಈ ನವಪಂಚಮ ರಾಜಯೋಗ ಅತ್ಯಂತ ಉತ್ತಮ ಸಾಬೀತಾಗಲಿದೆ. ಈ ಅವಧಿಯಲ್ಲಿ ವಾಹನ ಹಾಗೂ ಆಸ್ತಿಪಾಸ್ತಿ ಖರೀದಿಸಲು ನೀವು ಮುಂದಾಗಬಹುದು. ಯಾರ ಕೆಲಸ ವಿದೇಶ ವ್ಯಾಪಾರಕ್ಕೆ ಸಂಬಂಧಿಸಿದೆಯೋ ಅವರಿಗೆ ಉತ್ತಮ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಇನ್ನೊಂದೆಡೆ ಉದ್ಯಮಿಗಳಿಗೆ ಈ ಅವಧಿಯಲ್ಲಿ ಅಪಾರ ಧನ ಲಾಭ ಉಂಟಾಗುವ ಸಾಧ್ಯತೆ ಇದೆ.
ಕುಂಭ ರಾಶಿ: ಕುಂಭ ರಾಶಿಯ ಜಾತಕದವರ ಪಾಲಿಗೆ ನವಪಂಚಮ ರಾಜಯೋಗ ಅತ್ಯಂತ ಲಾಭದಾಯಕ ಸಿದ್ಧ ಸಾಬೀತಾಗಲಿದೆ. ಏಕೆಂದರೆ ಬುದ್ಧಿ ಹಾಗೂ ಉನ್ನತಿ ಭಾವದಲ್ಲಿ ನಿರ್ಮಾಣಗೊಳ್ಳುತ್ತಿದೆ. ಇದರಿಂದ ಈ ಅವಧಿಯಲ್ಲಿ ನಿಮಗೆ ಆಕಸ್ಮಿಕ ಧನಲಾಭ ಉಂಟಾಗುವ ಸಾಧ್ಯತೆ ಇದೆ. ಹಳೆ ಹೂಡಿಕೆಯಿಂದಲೂ ಕೂಡ ಸಾಕಷ್ಟು ಲಾಭವಾಗಲಿದೆ. ಷೇರು ಮಾರುಕಟ್ಟೆ, ಲಾಟರಿಗಳಲ್ಲಿ ಹಣ ಹೂಡಿಕೆ ಮಾಡುವವರಿಗೆ ಸಮಯ ಉತ್ತಮವಾಗಿದೆ. ಧನಲಾಭದ ಯೋಗವಿದೆ. ಈ ಅವಧಿಯಲ್ಲಿ ನೀವು ಸಾಕಷ್ಟು ಊರ್ಜೆಯಿಂದ ತುಂಬಿರುವಿರಿ. ಇದರಿಂದ ಕಾರ್ಯಕ್ಷೇತ್ರದಲ್ಲಿ ಸ್ಥಾನಮಾನದ ಲಾಭವನ್ನು ನೀವು ಪಡೆದುಕೊಳ್ಳಬಹುದು. ಈ ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಕೂಡ ಹೆಚ್ಚಾಗಲಿದೆ ಮತ್ತು ನಿಮ್ಮ ವ್ಯಕ್ತಿತ್ವದಲ್ಲಿ ಅಪಾರ ಚೈತನ್ಯ ಇರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)