ಭಾರತದಲ್ಲಿ ಲಾಂಚ್ ಆಗಿದೆ C5 Aircross, ಏನಿರಲಿದೆ ವೈಶಿಷ್ಟ್ಯ ತಿಳಿಯಿರಿ
ಭಾರತೀಯರ ಆಯ್ಕೆಯನ್ನು ಗಮನದಲ್ಲಿಟ್ಟುಕೊಂಡು ಕಂಪನಿಯು ಈ ಕಾರನ್ನು 3 ವೆರಿಯೇಂಟ್ ಗಳಲ್ಲಿ ಬಿಡುಗಡೆ ಮಾಡಿದೆ. ಒಂದು Feel (Mono-Tone), ಇದರ ಬೆಲೆ 29.90 ಲಕ್ಷ ರೂ. ಎರಡನೇಯದ್ದು Feel (Bi-Tone). ಇದರ ಬೆಲೆ 30.40 ಲಕ್ಷ. ಇನ್ನು ಮೂರನೇ ವೇರಿಯಂಟ್ ನ ಹೆಸರು Shine. ಇದರ ಬೆಲೆ 31.90 ಲಕ್ಷ ರೂ.
. ವೈಶಿಷ್ಟ್ಯಗಳ ಬಗ್ಗೆ ಮಾತನಾಡುವುದಾದರೆ, ಈ SUVಯಲ್ಲಿ 8 ಇಂಚಿನ ಟಚ್ ಸ್ಕ್ರೀನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ ಅನ್ನು ಹೊಂದಿದೆ. ಅದು ಆಪಲ್ ಕಾರ್ ಪ್ಲೇ ಮತ್ತು ಆಂಡ್ರಾಯ್ಡ್ ಆಟೋವನ್ನು ಸಪೋರ್ಟ್ ಮಾಡುತ್ತದೆ. ಅಲ್ಲದೆ, ಡ್ಯುಯಲ್ ಟೋನ್ ಡ್ಯಾಶ್‌ಬೋರ್ಡ್ ಫಿನಿಶ್, ಪನೋರಮಿಕ್ ಸನ್‌ರೂಫ್, 12.3 ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್, ಗ್ರಿಪ್ ಕಂಟ್ರೋಲ್ ಸಿಸ್ಟಮ್, ಬ್ಲೈಂಡ್ ಸ್ಪಾಟ್ ಮಾನಿಟರಿಂಗ್ ಮತ್ತು ಡ್ಯುಯಲ್ ಟೋನ್ 18-ಇಂಚಿನ ಡೈಮಂಡ್ ಕಟ್ ಅಲಾಯ್ ವೀಲ್‌ಗಳಂತಹ ಹಲವು ಇತ್ತೀಚಿನ ವೈಶಿಷ್ಟ್ಯಗಳನ್ನು ಈ ಕಾರು ಹೊಂದಿದೆ.
ಕಂಪನಿಯು ಈ ಕಾರನ್ನು ಭಾರತದಲ್ಲಿ ಮಾತ್ರ ಉತ್ಪಾದಿಸುತ್ತಿದೆ. ಆದರೆ ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ, ಈ ಎಸ್ಯುವಿಯ ಡೀಸೆಲ್ ಎಂಜಿನ್ ಮಾತ್ರ ಮಾರಾಟವಾಗಲಿದೆ. ಇದರ 2-ಲೀಟರ್ ಡೀಸೆಲ್ ಎಂಜಿನ್ ಗರಿಷ್ಠ 177bhp ಮತ್ತು 400Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ. ಈ ಎಂಜಿನ್ 8-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಹೊಂದಿದೆ. 1 ಲೀಟರ್ ಇಂಧನದಲ್ಲಿ 18.6 ಕಿ.ಮೀ ವ್ಯಾಪ್ತಿಯನ್ನು ಕ್ರಮಿಸುತ್ತದೆ ಎಂದು ಕಂಪನಿ ಹೇಳಿದೆ.
ಸಿಟ್ರಾನ್‌ನ ಸಿ 5 ಏರ್‌ಕ್ರಾಸ್ ಭಾರತೀಯ ಮಾರುಕಟ್ಟೆಯಲ್ಲಿ ಹ್ಯುಂಡೈ ಟಕ್ಸನ್ (Hyundai Tucson), ಕಿಯಾ ಸೆಲ್ಟೋಸ್ (Kia Seltos), ಎಂಜಿ ಹೆಕ್ಟರ್ (MG Hector), ಜೀಪ್ ಕಂಪಾಸ್ (Jeep Compass), ಮತ್ತು ವೋಕ್ಸ್‌ವ್ಯಾಗನ್ ಟಿಗುವಾನ್ ಆಲ್‌ಸ್ಪೇಸ್ (Volkswagen Tiguan AllSpace) ಕಾರುಗಳಿಗೆ ಟಕ್ಕರ್ ನೀಡಲಿದೆ.
ನೀವು ಈ 5 ಆಸನಗಳ ಪ್ರೀಮಿಯಂ ಎಸ್ಯುವಿಯನ್ನು ಖರೀದಿಸುವ ಯೋಚನೆಯಲ್ಲಿದ್ದರೆ ಅದರ ಬುಕಿಂಗ್ ಪ್ರಾರಂಭವಾಗಿದೆ. 50,000 ರೂ ಪಾವತಿಸಿ ಈ ಕಾರನ್ನು ಬುಕ್ ಮಾಡಬಹುದಾಗಿದೆ.