ಸಿಎ ದಯಾನಂದ್ ಬೊಂಗಾಳೆಯವರ ಸಾಧನೆಗೆ ಜೀ ನ್ಯೂಸ್ ʼಯುವರತ್ನ ಪ್ರಶಸ್ತಿʼ ಗೌರವ..!
ತಳಮಟ್ಟದಿಂದ ಬೆಳೆದು ಸಾಮಾಜಿಕ, ರಾಜಕೀಯ, ಶಿಕ್ಷಣ, ವೈದ್ಯಕೀಯ, ಕ್ರೀಕಾ, ಕೈಗಾರಿಕಾ, ಖಾಸಗೀ, ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದು, ಎಲೆಮರೆ ಕಾಯಿಯಂತೆ ಇರುವ ಉದ್ಯಮಿಗಳನ್ನು ಗುರ್ತಿಸುವ ಕಾರ್ಯಕ್ರಮವೇ ʼಯುವರತ್ನʼ.
ಈ ಪೈಕಿ ಹೆಡ್ಜಿಂಗ್ ಸ್ಟಾರ್ ಸಿಎ ದಯಾನಂದ್ ಬೊಂಗಾಳೆ ಹೂಡಿಕೆದಾರರು, ವರ್ತಕರು, ತರಬೇತುದಾರರಾಗಿದ್ದಾರೆ. ಶೇರು ಮಾರುಕಟ್ಟೆಯ ಟ್ರೈನರ್ ಹಾಗೂ ರಿಸೋರ್ಸ್ ಪರ್ಸನ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರ ಅದ್ಭುತ ಸಾಧನೆಯನ್ನು ಗುರುತಿಸಿ ಜೀ ಕನ್ನಡ ನ್ಯೂಸ್ ಇವರಿಗೆ ಯುವರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿತು.
ಮೂಲತಃ ದಾವಣಗೆರೆ ಜಿಲ್ಲೆಯವರಾದ ಸಿಎ ದಯಾನಂದ್ ಬೊಂಗಾಳೆಯವರು 13 ವರ್ಷ ಯಶಸ್ವಿ ಚಾರ್ಟ್ರಡ್ ಅಕೌಂಟಂಟ್ ಆಗಿ ಸೇವೆ ಸಲ್ಲಿಸಿ ಇದೀಗ ಶೇರು ಮಾರುಕ್ಕಟ್ಟೆಯಲ್ಲಿ ತೊಡಗಿಸಿಕೊಂಡು ಯಶಸ್ವಿಯಾಗಿದ್ದಾರೆ. ಶೇರು ಮಾರುಕಟ್ಟೆಯ ಅರಿವು ಮೂಡಿಸಿವ ನಿಟ್ಟಿನಲ್ಲಿ ಯುವ ಜನತೆಗೆ ಟ್ರೈನರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅಷ್ಟೇ ಅಲ್ಲದೇ ಕಾಲೇಜು ವಿದ್ಯಾರ್ಥಿಗಳಿಗೆ ಶೇರು ಮಾರುಕಟ್ಟೆಯ ಬಗ್ಗೆ ತಿಳಿವಳಿಕೆ ಮೂಡಿಸವಲ್ಲಿ ರಿಸೋರ್ಸ್ ಪರ್ಸನ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. ಇವರ ಮಾರ್ಗದರ್ಶನಲ್ಲಿ ಇನ್ವೆಸ್ಟ್ ಮಾಡಿದವರು ಶೇರು ಮಾರುಕಟ್ಟೆಯಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಸ್ತುತ ಶೇರು ಮಾರುಕಟ್ಟೆಯ ಟ್ರೈನರ್ ಹಾಗೂ ರಿಸೋರ್ಸ್ ಪರ್ಸನ್ ಆಗಿಯೂ ಸೇವೆ ಸಲ್ಲಿಸುತ್ತಿರುವ ಸಿಎ ದಯಾನಂದ್ ಬೊಂಗಾಳೆ ಶೇರುಮರುಕಟ್ಟೆಯ ದಾರಿದೀಪವಾಗಿದ್ದಾರೆ.. ಸಿಎ ದಯಾನಂದ್ ಬೊಂಗಾಳೆಯವರಿಗೆ ಯುವರತ್ನ ಪ್ರಶಸ್ತಿ ನೀಡಲು ಝೀ ಕನ್ನಡ ನ್ಯೂಸ್ ಹೆಮ್ಮೆ ಪಡುತ್ತದೆ.