ಒಂದು ತುಂಡು ಕರ್ಪೂರವನ್ನು ಇದರ ಜೊತೆ ಸುಟ್ಟು ಮನೆಯ ಈ ದಿಕ್ಕಿನಲ್ಲಿಡಿ... ಮನೆಯಲ್ಲಿ ಶುಕ್ರದೆಸೆ ವೃದ್ಧಿಯಾಗಿ ಹಣದ ಮಳೆ ಸುರಿಯುವುದು
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿನ ಕೆಲವು ವಸ್ತುಗಳು ವಾಸ್ತುದೋಷವನ್ನು ಉಂಟುಮಾಡುತ್ತವೆ. ಇದರಿಂದಾಗಿ ನಕಾರಾತ್ಮಕ ಶಕ್ತಿಯು ಮನೆಯಲ್ಲಿ ಉಳಿದು ಕುಟುಂಬದ ಸದಸ್ಯರ ಕೆಲಸವು ಸ್ಥಗಿತಗೊಳ್ಳುವಂತೆ ಅಥವಾ ಕೆಲವೊಮ್ಮೆ ಹಾಳಾಗುವಂತೆ ಮಾಡುತ್ತದೆ.
ಮನೆಯಲ್ಲಿ ಇರುವ ನಕಾರಾತ್ಮಕ ಶಕ್ತಿಯು ವ್ಯಕ್ತಿಯ ಭವಿಷ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ಅಷ್ಟೇ ಅಲ್ಲದೆ, ಮನೆಯಲ್ಲಿರುವ ವಾಸ್ತು ದೋಷಗಳಿಂದಾಗಿ ಹಲವಾರು ರೀತಿಯ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ವಾಸ್ತು ಶಾಸ್ತ್ರದ ಪ್ರಕಾರ, ಕರ್ಪೂರ ಮನೆಯಲ್ಲಿ ಇರುವ ಯಾವುದೇ ರೀತಿಯ ವಾಸ್ತು ದೋಷವನ್ನು ತೆಗೆದುಹಾಕುವಲ್ಲಿ ಬಹಳ ಪರಿಣಾಮಕಾರಿಯಾಗಿದೆ. ವಾಸ್ತು ದೋಷಗಳನ್ನು ಹೋಗಲಾಡಿಸಲು ಸಹಾಯ ಮಾಡುವ ಕರ್ಪೂರದ ಕೆಲವು ಪರಿಹಾರಗಳನ್ನು ನಾವಿಂದು ತಿಳಿದುಕೊಳ್ಳೋಣ.
ಮನೆಯಿಂದ ನಕಾರಾತ್ಮಕ ಶಕ್ತಿಯನ್ನು ಹೋಗಲಾಡಿಸಲು ಮತ್ತು ಧನಾತ್ಮಕ ಶಕ್ತಿಯನ್ನು ತರಲು ಕರ್ಪೂರವನ್ನು ಬಳಸಬೇಕು. ಅದಕ್ಕಾಗಿಯೇ ಮನೆಯಲ್ಲಿ ಹವನ ಮತ್ತು ಪೂಜೆಯ ಸಮಯದಲ್ಲಿ ಕರ್ಪೂರವನ್ನು ಬಳಸಲಾಗುತ್ತದೆ. ಇದರಿಂದ ನಕಾರಾತ್ಮಕತೆಯನ್ನು ಮನೆಯಿಂದ ದೂರವಿಡಬಹುದು
ಮನೆಯಲ್ಲಿ ಧನಾತ್ಮಕ ಶಕ್ತಿ ನೆಲೆಸಬೇಕೆಂದರೆ ಬೆಳಗ್ಗೆ ಮತ್ತು ಸಂಜೆ ಕರ್ಪೂರವನ್ನು ದೇಸಿ ತುಪ್ಪದಲ್ಲಿ ಅದ್ದಿ ನಿಯಮಿತವಾಗಿ ಸುಡಬೇಕು. ಈ ಮೂಲಕ ಪರಿಣಾಮವು ಕಂಡುಬರುತ್ತದೆ.
ರಾತ್ರಿ ಎಲ್ಲಾ ಅಡುಗೆ ಕೆಲಸಗಳನ್ನು ಮುಗಿಸಿದ ನಂತರ ಒಂದು ಬಟ್ಟಲಿನಲ್ಲಿ ಲವಂಗ ಮತ್ತು ಕರ್ಪೂರವನ್ನು ಸುಟ್ಟು ಸ್ವಚ್ಛವಾದ ಸ್ಥಳದಲ್ಲಿ ಇರಿಸಿ. ಈ ರೀತಿ ಮಾಡುವುದರಿಂದ ಮನೆಗೆ ಐಶ್ವರ್ಯ ಬರುತ್ತದೆ ಎಂದು ಹೇಳಲಾಗುತ್ತದೆ.
ವೃತ್ತಿಜೀವನದಲ್ಲಿ ಯಾವುದೇ ರೀತಿಯ ಅಡಚಣೆಯನ್ನು ಎದುರಿಸುತ್ತಿದ್ದರೆ ಅಥವಾ ಏನನ್ನೂ ಮಾಡಲಾಗದಿದ್ದರೆ ಕರ್ಪೂರ ಮತ್ತು ಲವಂಗವನ್ನು ಒಟ್ಟಿಗೆ ಸುಟ್ಟು ಮನೆಯ ಸುತ್ತಲೂ ಹರಡಿಸಿ. ಇದರಿಂದ ಸಮಸ್ಯೆಗಳೆಲ್ಲಾ ಪರಿಹಾರವಾಗಿ ಮನೆಗೆ ಶುಕ್ರದೆಸೆಯೇ ಪ್ರವೇಶಿಸಿದಂತಾಗುತ್ತದೆ ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ಸ್ನಾನ ಮಾಡುವ ನೀರಿನಲ್ಲಿ ಕೆಲವು ಹನಿ ಕರ್ಪೂರದ ಎಣ್ಣೆಯನ್ನು ಸೇರಿಸುವುದರಿಂದ ದೇಹದಿಂದ ಎಲ್ಲಾ ನಕಾರಾತ್ಮಕ ಶಕ್ತಿಯು ದೂರವಾಗುತ್ತದೆ ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲ, ದೇಹವನ್ನು ಚುರುಕುಗೊಳಿಸುತ್ತದೆ ಮತ್ತು ಅದೃಷ್ಟವನ್ನು ಬಲಪಡಿಸುತ್ತದೆ.
ಪ್ರತಿದಿನ ಸಂಜೆ ಕರ್ಪೂರವನ್ನು ಮನೆಯ ಅಗ್ನಿ ಮೂಲೆಯಲ್ಲಿ ಅಂದರೆ ಆಗ್ನೇಯ ದಿಕ್ಕಿನಲ್ಲಿ ಹಚ್ಚಿದರೆ ಲಾಭದಾಯಕ. ಇದು ಸಂಪತ್ತನ್ನು ಹೆಚ್ಚಿಸುತ್ತದೆ ಮತ್ತು ಸಂತೋಷ- ಸಮೃದ್ಧಿಯನ್ನು ಸಹ ಕಾಪಾಡುತ್ತದೆ.
ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಇದನ್ನು ಖಚಿತಪಡಿಸುವುದಿಲ್ಲ.