ಡಯಾಬಿಟಿಸ್ ರೋಗಿಗಳು ಹಸಿರು ಚಹಾ ಸೇವಿಸಬಹುದೇ?
ಹಸಿರು ಚಹಾವನ್ನು ಕ್ಯಾಮೆಲಿಯಾ ಸಿನೆನ್ಸಿಸ್ ಎಲೆಗಳಿಂದ ತಯಾರಿಸಲಾಗುತ್ತದೆ, ಇದನ್ನು ಮುಖ್ಯವಾಗಿ ಏಷ್ಯಾದ ದೇಶಗಳಲ್ಲಿ ಪ್ರಧಾನ ಆಹಾರ ಮತ್ತು ಔಷಧೀಯ ಆಹಾರವೆಂದು ಪರಿಗಣಿಸಲಾಗುತ್ತದೆ.
ಗ್ರೀನ್ ಟೀ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ತೂಕ ಇಳಿಕೆಗೆ ಸಹಕಾರಿ ಆಗಿರುವ ಈ ಚಹಾವನ್ನು ಮಧುಮೇಹಿಗಳಿಗೂ ಕೂಡ ಉತ್ತಮ ಎಂದು ಹೇಳಲಾಗುತ್ತದೆ.
ಗ್ರೀನ್ ಟೀ ಸೇವನೆಯು ರಕ್ತದಲ್ಲಿನ ಸಕ್ಕರೆಯ ಅಂಶವನ್ನು ನಿಯಂತ್ರಿಸುವುದರಿಂದ ಇದನ್ನು ಮಧುಮೇಹಿಗಳಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ.
ಹಸಿರು ಚಹಾದ ದೈನಂದಿನ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟಗಳ ಮೇಲೆ ಗಮನಾರ್ಹ ಧನಾತ್ಮಕ ಪರಿಣಾಮಗಳನ್ನು ಹೊಂದಿದೆ. ಹಸಿರು ಚಹಾ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಅನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ ಎಂದು ಸಂಶೋಧನಾ ಫಲಿತಾಂಶಗಳು ತೋರಿಸುತ್ತವೆ.