ಡಯಾಬಿಟಿಸ್ ರೋಗಿಗಳು ಮಾವು ತಿನ್ನಬಹುದೇ..? ತಿಳಿಯಿರಿ

Wed, 23 Jun 2021-4:16 pm,

ಮಾವಿನ ಹಣ್ಣಿನಲ್ಲಿ ಎಲ್ಲಾ ಅಗತ್ಯ ಮಿನರಲ್ ಮತ್ತು ವಿಟಮಿನ್ ಇರುತ್ತದೆ. ಇದು ಬ್ಲಡ್ ಶುಗರ್ ನಿಯಂತ್ರಣದಲ್ಲಿಡುತ್ತದೆ. ಒಂದು ಕಪ್ ಕಟ್ ಮಾಡಿದ ಮಾವಿನ ಹಣ್ಣಿನಲ್ಲಿ 99 ಕ್ಯಾಲೋರಿ, 1.4 ಗ್ರಾಂ ಪ್ರೋಟೀನ್, 25 ಗ್ರಾಂ ಕಾರ್ಬ್, 22.5 ಗ್ರಾಂ ಶುಗರ್, 2.6 ಗ್ರಾಂ ಫೈಬರ್, 67 % ವಿಟಮಿನ್ ಸಿ, 18% ಫೋಲೆಟ್, 10% ವಿಟಮಿನ್ ಇ ಇರುತ್ತದೆ. ಕ್ಯಾಲ್ಸಿಯಂ, ಝಿಂಕ್, ಕಬ್ಬಿಣದಾಂಶ ಮತ್ತು ಮೆಗ್ನೇಶಿಯಂ ಕೂಡಾ ಇರುತ್ತದೆ. 

ಮಾವಿನ ಹಣ್ಣಿನಲ್ಲಿ ಶೇ. 90 ರಷ್ಟು ಕ್ಯಾಲರಿ ಅದರ ಸಿಹಿಯಲ್ಲಿ ಬರುತ್ತದೆ. ಈ ಕಾರಣದಿಂದಲೇ ಇದು ಬ್ಲಡ್ ಶುಗರ್ ಹೆಚ್ಚಿಸುತ್ತದೆ. ಆದರೆ, ಇದೇ ಮಾವಿನ ಹಣ್ಣಿನಲ್ಲಿ ಸಾಕಷ್ಟು ಫೈಬರ್, ಆಂಟಿ ಆಕ್ಸಿಡೆಂಟ್ ಕೂಡಾ ಇರುತ್ತದೆ. ಇದು ಬ್ಲಡ್ ಶುಗರ್ ಪರಿಣಾಮ ಕಡಿಮೆ ಮಾಡುತ್ತದೆ. 

ಮಾವಿನಲ್ಲಿ ಸಿಗುವ ಫೈಬರ್ ರಕ್ತವು ಹೀರಿಕೊಳ್ಳುವ ಶುಗರ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ.  ಇದೇ ರೀತಿಯಲ್ಲಿ ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಬ್ಲಡ್ ಶುಗರ್ ಜೊತೆ ಇರುವ  ಒತ್ತಡವನ್ನು ಕಡಿಮೆ ಮಾಡುತ್ತದೆ. ಇದು ರಕ್ತದಲ್ಲಿ ಬ್ಲಡ್ ಶುಗರ್ ಲೆವೆಲ್ ಸ್ಥಿರವಾಗಿಡಲು ನೆರವಾಗುತ್ತದೆ. 

ಯಾವುದೇ ಆಹಾರದ ಬ್ಲಡ್ ಶುಗರ್ ಲೆವೆಲ್ ಪರಿಣಾಮವನ್ನು ಗ್ಲೈಸೆಮಿಕ್ ಇಂಡೆಕ್ಸ್ ರಾಂಕ್ ಮೂಲಕ ತಿಳಿಯಲಾಗುತ್ತದೆ.  ಅದನ್ನು 0-100 ಸ್ಕೇಲ್ ಮೂಲಕ ಅಳೆಯಲಾಗುತ್ತದೆ. 55ಕ್ಕಿಂತ ಕಡಿಮೆ ಇಂಡೆಕ್ಸ್ ತೋರಿಸುವ ಯಾವುದೇ  ಆಹಾರವನ್ನು ಕಡಿಮೆ ಶುಗರ್ ಇರುವ ಆಹಾರ ಎನ್ನಲಾಗುತ್ತದೆ.  ಇದು ಡಯಾಬಿಟಿಕ್ ರೋಗಿಗಳಿಗೆ ಉಪಯುಕ್ತ ಎಂದು ಹೇಳಲಾಗುತ್ತದೆ. ಮಾವಿನ ಹಣ್ಣಿನ ಜಿಐ 51 ಆಗಿದೆ. ಅಂದರೆ, ಮಾವಿನ ಹಣ್ಣನ್ನು ಡಯಾಬಿಟಿಕ್ ರೋಗಿಗಳು ತಿನ್ನಬಹುದು.   

ಆದರೆ ಗೊತ್ತಿರಲಿ, ಕೆಲವೊಬ್ಬರ ದೇಹಗಳು ಕೆಲವೊಂದು ಆಹಾರದ ಮೇಲೆ ಬೇರೆ ಬೇರೆ ರೀತಿಯ ಪ್ರತಿಕ್ರಿಯೆ ನೀಡಬಹುದು. ಮಾವಿನಲ್ಲಿ ಹೆಲ್ತಿ ಕಾರ್ಬ್ ಇವೆ. ಆದರೆ, ನೀವು ಅದನ್ನು ಎಷ್ಟು ತಿನ್ನುತ್ತೀರಿ ಎನ್ನುವುದು ಕೂಡಾ ತೀರಾ ಮುಖ್ಯ. ನಿಮಗೆ ಡಯಾಬಿಟಿಸ್ ಇದ್ದು, ಮಾವು ತಿನ್ನಬೇಕಾದರೆ ತುಂಬಾ ಎಚ್ಚರಿಕೆ ವಹಿಸಬೇಕು. 

ಬ್ಲಡ್ ಶುಗರ್ ಏರಿಕೆ ಯಾಗಬಾರದು ಎಂದಿದ್ದರೆ ಒಂದೇ ಸಲ ಸಾಕಷ್ಟು ಮಾವಿನ ಹಣ್ಣು ತಿನ್ನಬಾರದು.  ಶುಗರ್ ಇದ್ದರೆ ಅರ್ಧ ಕಪ್  ಮಾವು ತಿಂದು ನೋಡಿ. ಬ್ಲಡ್ ಶುಗರ್ ಏರುತ್ತದೆಯೋ ಇಲ್ಲವೋ ಚೆಕ್ ಮಾಡಿ. ಏರುತ್ತದೆಯಾದರೆ ಎಷ್ಟು ಏರುತ್ತದೆ ಎಂಬುದನ್ನು ನೋಡಿ.  ಇದೇ ಲೆಕ್ಕಾಚಾರದಲ್ಲಿ ಮಾವಿನ ಹಣ್ಣು ತಿನ್ನಬೇಕಾಗುತ್ತದೆ. 

ZEENEWS TRENDING STORIES

By continuing to use the site, you agree to the use of cookies. You can find out more by Tapping this link