ಹಸಿ ಈರುಳ್ಳಿ ತಿಂದರೆ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನ ಸಿಗುತ್ತೆ ಗೊತ್ತಾ?
ಹಸಿ ಈರುಳ್ಳಿ ಸೇವನೆಯು ಆರೋಗ್ಯಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ.
ಹಸಿ ಈರುಳ್ಳಿ ಬಳಕೆಯಿಂದ ಮಲಬದ್ಧತೆ ಸಮಸ್ಯೆಗೆ ಪರಿಹಾರ ಪಡೆಯಬಹುದು.
ಮೂಗಿನಿಂದ ರಕ್ತಸ್ರಾವದ ಸಂದರ್ಭದಲ್ಲಿ ಹಸಿ ಈರುಳ್ಳಿ ವಾಸನೆ ಸವಿದರೂ ಕೂಡ ತಕ್ಷಣ ರಕ್ತಸ್ರಾವ ನಿಲ್ಲುತ್ತದೆ.
ಶೀತ, ನೆಗಡಿ, ಕೆಮ್ಮಿನ ಸಂದರ್ಭದಲ್ಲಿ ಹಸಿ ಈರುಳ್ಳಿ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದು ಲಾಭದಾಯಕವಾಗಿದೆ.
ಬಿಳಿ ಹಸಿ ಈರುಳ್ಳಿಯನ್ನು ದೈನಂದಿನ ಆಹಾರದ ಜೊತೆಗೆ ತಿನ್ನುವುದರಿಂದ ಮೂಲವ್ಯಾಧಿ ಸಮಸ್ಯೆ ಹೇಳಹೆಸರಿಲ್ಲದಂತೆ ಮಾಯವಾಗುತ್ತದೆ.
ನಿತ್ಯ ಹಸಿ ಈರುಳ್ಳಿ ತಿನ್ನುವುದರಿಂದ ದೇಹದಲ್ಲಿ ಇನ್ಸುಲಿನ್ ಉತ್ಪತ್ತಿಯಾಗಿ ಮಧುಮೇಹ ಸಮಸ್ಯೆಯಿಂದ ಪರಿಹಾರ ಪಡೆಯಬಹುದು.
ಹಸಿ ಈರುಳ್ಳಿಯಲ್ಲಿ ಮೀಥೈಲ್ ಸಲ್ಫೈಡ್ ಮತ್ತು ಅಮೈನೋ ಆಮ್ಲಗಳಿದ್ದು ಇದರ ಸೇವನೆಯಿಂದ ರಕ್ತದೊತ್ತಡ ಸಮಸ್ಯೆ ನಿವಾರಿಸಬಹುದು.
ಹಸಿ ಈರುಳ್ಳಿ ರಸದೊಂದಿಗೆ ಜೇನುತುಪ್ಪವನ್ನು ಬೆರೆಸಿ ನಿಯಮಿತವಾಗಿ ಸೇವಿಸುತ್ತಾ ಬಂದರೆ ಮುಟ್ಟಿನ ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಈರುಳ್ಳಿ ರಸವನ್ನು ಮೊಸರಿನೊಂದಿಗೆ ಬೆರೆಸಿ ಕೂದಲಿಗೆ ಹಚ್ಚುವುದರಿಂದ ಕೂದಲುದುರುವಿಕೆ ಸೇರಿದಂತೆ ಕೂದಲಿನ ಹಲವು ಸಮಸ್ಯೆಗಳಿಂದ ಪರಿಹಾರ ಪಡೆಯಬಹುದು.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.