ಈ ಹಣ್ಣನ್ನು ಸೇವಿಸಿದರೆ ಒಂದೇ ವಾರದಲ್ಲಿ ತೂಕ ಕಡಿಮೆಯಾಗುತ್ತದೆ !ಖಂಡಿತಾ ಟ್ರೈ ಮಾಡಿ
ಅಧಿಕ ತೂಕದಿಂದ ಬಳಲುತ್ತಿರುವವರು ಪಪ್ಪಾಯ ಸೇವಿಸಬಹುದು. ಇದರಲ್ಲಿ ನಾರಿನಂಶ ಅಧಿಕವಾಗಿದ್ದು ನಿಮ್ಮ ಆಹಾರವನ್ನು ಸುಲಭವಾಗಿ ಜೀರ್ಣವಾಗುವಂತೆ ಮಾಡುತ್ತದೆ. ಪಪ್ಪಾಯಿಯದಲ್ಲಿ ವಿಟಮಿನ್ ಎ ಮತ್ತು ವಿಟಮಿನ್ ಸಿ ಅಧಿಕವಾಗಿರುತ್ತದೆ. ಇದು ತೂಕವನ್ನು ಕಳೆದುಕೊಳ್ಳಲು ಸಹಾಯ ಮಾಡುತ್ತದೆ.
ಪಪ್ಪಾಯಿಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ತೂಕ ನಷ್ಟಕ್ಕೆ ಪಪ್ಪಾಯ ಹಣ್ಣನ್ನು ಹೇಗೆ ಸೇವಿಸಬಹುದು ಎಂಬುದು ಇಲ್ಲಿದೆ
ಮೊಸರಿನೊಂದಿಗೆ ಪಪ್ಪಾಯವನ್ನು ತಿನ್ನಬಹುದು. ಇದನ್ನು ಬೆಳಗಿನ ಉಪಾಹಾರಕ್ಕೆ ತಿನ್ನಬಹುದು. ಇದರೊಂದಿಗೆ ಇತರ ಹಣ್ಣುಗಳನ್ನು ಸೇರಿಸಬಹುದು. ಇದಕ್ಕೆ ನೆನೆಸಿದ ಡ್ರೈ ಫ್ರೂಟ್ಸ್ ಕೂಡಾ ಸೇರಿಸಬಹುದು, ಹೀಗೆ ತಿನ್ನುವುದರಿಂದ ಹೊಟ್ಟೆ ತುಂಬಾ ಹೊತ್ತು ತುಂಬಿರುತ್ತದೆ.
ಬೆಳಗಿನ ಉಪಾಹಾರಕ್ಕಾಗಿ ಒಂದು ಲೋಟ ಕೆನೆ ಹಾಲು ಮತ್ತು ಪಪ್ಪಾಯ ಸೇವಿಸಿ. ಇದು ದೇಹಕೆ ಪ್ರೋಟೀನ್ ಅನ್ನು ನೀಡುತ್ತದೆ. ತೂಕ ಇಳಿಸಿಕೊಳ್ಳಲು ತುಂಬಾ ಸಹಾಯ ಮಾಡುತ್ತದೆ.
ನೀವು ಸಾದಾ ಪಪ್ಪಾಯ ತಿನ್ನಲು ಇಷ್ಟಪಡದಿದ್ದರೆ, ಪಪ್ಪಾಯ ಚಾಟ್ ಅನ್ನು ಸೇವಿಸಬಹುದು. ಇದಕ್ಕಾಗಿ ಪಪ್ಪಾಯವನ್ನು ತುಂಡುಗಳಾಗಿ ಕತ್ತರಿಸಿ ಅದರ ಮೇಲೆ ಬ್ಲಾಕ್ ಸಾಲ್ಟ್ ಮತ್ತು ಕರಿಮೆಣಸಿನ ಪುಡಿಯನ್ನು ಸಿಂಪಡಿಸಿ ತಿನ್ನಿರಿ
( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಸ್ವೀಕರಿಸುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಅನುಮೋದಿಸುವುದಿಲ್ಲ.)