ಒಬ್ಬರು ತಿಂದು ಬಿಟ್ಟ ಊಟವನ್ನು ಇನ್ನೊಬ್ಬರು ತಿನ್ನಬಹುದೇ... ಇದರಿಂದ ಏನಾಗುತ್ತೆ ?
ಹಿಂದೂ ಧರ್ಮದ ಪ್ರಕಾರ ಆಹಾರ ಯಾವಾಗಲೂ ಶುದ್ಧವಾಗಿರಬೇಕು. ಹಿಂದೂ ಧರ್ಮದಲ್ಲಿ ಅಡುಗೆ ಮಾಡುವಾಗ ಕೈಗಳು ಕೊಳಕಾಗಬಾರದು ಎಂದು ಹೇಳಲಾಗುತ್ತದೆ.
ಊಟ ಮಾಡುವಾಗ ಮದ್ಯ ಸೇವಿಸಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ಹೀಗೆ ಮಾಡುವುದರಿಂದ ವ್ಯಕ್ತಿಗೆ ಗ್ರಹದೋಷಗಳು ಬರುತ್ತವೆ.
ಇನ್ನೊಬ್ಬರು ತಿಂದುಬಿಟ್ಟ ಆಹಾರವನ್ನು ತಿನ್ನುವುದು ಎಂದರೆ ಆ ವ್ಯಕ್ತಿಯ ದುಃಖ ಮತ್ತು ಎಲ್ಲಾ ದುರದೃಷ್ಟಕ್ಕೆ ಪಾಲುದಾರರಾಗುತ್ತೀರಿ ಎಂದರ್ಥ. ಬೇರೆಯವರು ಸೇವಿಸಿದ ಆಹಾರವನ್ನು ತಿನ್ನುವುದು ನಿಮ್ಮ ಸಂಪತ್ತಿನ ಮೇಲೆ ಪರಿಣಾಮ ಬೀರುತ್ತದೆ ಎಂದು ನಂಬಲಾಗಿದೆ.
ಕೆಲವು ಸಂದರ್ಭಗಳಲ್ಲಿ ಬೇರೆಯವರು ಬಿಟ್ಟ ಆಹಾರ ಸೇವಿಸಿದರೆ ಆರ್ಥಿಕ ಮುಗ್ಗಟ್ಟು ಎದುರಿಸಬೇಕಾಗುತ್ತದೆ.
ವೈಜ್ಞಾನಿಕವಾಗಿಯೂ ಒಬ್ಬರು ತಿಂದ ಆಹಾರವನ್ನು ಇನ್ನೊಬ್ಬರು ತಿನ್ನಬಾರದು. ಏಕೆಂದರೆ ಇದು ಅನೇಕ ರೋಗಗಳಿಗೆ ತುತ್ತಾಗುವಂತೆ ಮಾಡುತ್ತದೆ. ಒಬ್ಬಒಬ್ಬರಿಂದ ಸೋಂಕು ಇನ್ನೊಬ್ಬರಿಗೆ ಹರಡುತ್ತದೆ. (ಗಮನಿಸಿ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಧಾರ್ಮಿಕ ವಿಚಾರವನ್ನು ಆಧರಿಸಿದೆ. ZEE NEWS ಇದನ್ನು ಖಚಿತಪಡಿಸುವುದಿಲ್ಲ.)