Viral Photo: ಈ ವ್ಯಕ್ತಿಯ ವಯಸ್ಸು ಗೆಸ್ ಮಾಡಿ ನೋಡೋಣ? ಬಹುತೇಕರು ಫೇಲ್ ಆಗಿದ್ದಾರೆ
1. ಇನ್ಸ್ಟಾಗ್ರಾಮ್ ನಲ್ಲಿ 12 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ -ಚುಆಂದೋ ತನ್ನ ಬಗ್ಗೆ ತಾನೇ ಪ್ರಚಾರ ಮಾಡಿಕೊಳ್ಳಲು 2015 ರಲ್ಲಿ ತನ್ನ ಇನ್ಸ್ಟಾಗ್ರಾಮ್ ಖಾತೆಯನ್ನು ಆರಂಭಿಸಿದ್ದಾರೆ. ಪ್ರಸ್ತುತ ಅವರು ತನ್ನ ಖಾತೆಯಲ್ಲಿ 12 ಲಕ್ಷಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ. 2017ರಲ್ಲಿ ಅವರ ಇನ್ಸ್ಟಾಗ್ರಾಮ್ ಪುಟವನ್ನು ಚೀನಾ ವೆಬ್ಸೈಟ್ ವೊಂದು ಪ್ರಚಾರ ಮಾಡಿದ ಬಳಿಕ ಚುಆಂದೋ ಪ್ರಸ್ದಿದ್ಧಿಯ ಉತ್ತುಂಗಕ್ಕೇರಿದ್ದಾರೆ.
2. ಜಿಮ್ ನಲ್ಲಿ ಗಂಟೆಗಳ ಕಾಲ ಬೆವರು ಸುರಿಸುತ್ತಾರೆ: ಚುಆಂದೋ ಪ್ರತಿ ದಿನ ಸುಮಾರು ಒಂದೂವರೆ ಗಂಟೆಗಳ ಕಾಲ ಬೆವರು ಸುರಿಸುತ್ತಾರೆ. ಇದು ಅವರಿಗೆ ಫಿಟ್ ಮಾತ್ತು ಆರೋಗ್ಯದಿಂದಿರಲು ಸಹಾಯ ಮಾಡುತ್ತದೆ. ಯಾವುದೇ ರೀತಿಯ ಪಾನೀಯ ಹಾಗೂ ಸಿಗರೆಟ್ ನಿಂದ ಇವರು ದೂರ ಇರುತ್ತಾರಂತೆ.
3. ಫಿಟ್ ಆಗಿರಲು ವಿಶೇಷ ಆಹಾರ ಸೇವನೆ: ಫಿಟ್ ಆಗಿರಲು ಚುಆಂದೋ ತಮ್ಮ ಊಟದಲ್ಲಿ ಸಾಕಷ್ಟು ಹಸಿರು ತರಕಾರಿಗಳು, ಪ್ರೋಟೀನ್, ನೀರು ಹಾಗೂ ಮೊಟ್ಟೆಯನ್ನು ಸೇವಿಸುತ್ತಾರೆ. ಇದಲ್ಲದೆ ಅವರು ಚಿಕನ್ ಕೂಡ ಸೇವಿಸುತ್ತಾರಂತೆ.
4. ಸಿಂಗಿಂಗ್ ಹವ್ಯಾಸ: ಚುಆಂದೋ ಟ್ಯಾನ್ ಫೋಟೋಗ್ರಾಫಿ, ಮಾಡಲಿಂಗ್ ಜೊತೆಗೆ ಹಾಡುವ ಹವ್ಯಾಸ ಕೂಡ ಹೊಂದಿದ್ದಾರೆ. ಹಾಡುಗಾರಿಕೆಯಲ್ಲಿಯೂ ಕೂಡ ಟ್ಯಾನ್ ಸಾಕಷ್ಟು ಹೆಸರು ಮಾಡಿದ್ದಾರಂತೆ. ಇದೇ ಕಾರಣದಿಂದ ಟ್ಯಾನ್ ಸ್ನೇಹಿತರು ಅವರನ್ನು ಪ್ರೀತಿಯಿಂದ CD ಎಂದೂ ಕೂಡ ಕರೆಯುತ್ತಾರಂತೆ
5. ಯಾವುದೇ ಸ್ಕಿನ್ ಕೆಯರ್ ಉತ್ಪನ್ನಗಳನ್ನು ಟ್ಯಾನ್ ಬಳಸುವುದಿಲ್ಲವಂತೆ: ಶರೀರವನ್ನು ಸದೃಢವಾಗಿಡಲು ಮತ್ತು ಚರ್ಮವನ್ನು ಸುಕ್ಕಿನಿಂದ ರಕ್ಷಿಸಲು ಟ್ಯಾನ್ ಬೆಳ್ಳಂ ಬೆಳಗ್ಗೆ ಮತ್ತು ತಡರಾತ್ರಿ ಸ್ನಾನ ಮಾಡುವುದರಿಂದ ದೂರವಿರುತ್ತಾರಂತೆ. ಅವರು ಯಾವುದೇ ರೀತಿಯ ಸ್ಕಿನ್ ಕೆಯರ್ ಉತ್ಪನ್ನಗಳ ಬಳಕೆ ಮಾಡುವುದಿಲ್ಲವಂತೆ. ಕೇವಲ ಚುಆಂದೋ ಅವರ ಈ ಫೋಟೋಗಳನ್ನು ನೋಡಿದರೆ, ಯಾರಿಂದಲೂ ಅವರ ನಿಜವಾದ ವಯಸ್ಸಿನ ಅಂದಾಜು ಹಚ್ಚುವುದು ಸಾಧ್ಯವಿಲ್ಲ ಎಂಬಂತಿವೆ.
6. ನಿಮ್ಮ ಅಂದಾಜು ಎಷ್ಟು?: ಅಂದ ಹಾಗೆ ಚುಆಂದೋ ಟ್ಯಾನ್ ಅವರ ನಿಖರವಾದ ವಯಸ್ಸು 56. ಈ ವಯಸ್ಸಿನಲ್ಲಿಯೂ ಕೂಡ ಚುಆಂದೋ 20ರ ಹೊಸ್ತಿಲಲ್ಲಿ ನಿಂತಿರುವ ಓರ್ವ ಯಂಗ್ ಹಾಗೂ ಫಿಟ್ ಯುವಕನಂತೆ ಕಾಣಿಸುತ್ತಾರೆ. ಟ್ಯಾನ್ ತನ್ನ ಛಾಯಾಚಿತ್ರಗಳು ಹಾಗೂ ಮಾಡೆಲ್ ಲುಕ್ಸ್ ನಿಂದ ಹಲವರ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.