ಈ ಒಂದು ಹಣ್ಣು ಸಾಕು ಕ್ಯಾನ್ಸರ್ ನಿವಾರಣೆಗೆ!ಸ್ತನ ಕ್ಯಾನ್ಸರ್ ಗೆ ಈ ಹಣ್ಣಿನ ಎಲೆಯೇ ಪರಿಹಾರ !
ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ಕೂಡಾ ದಿನೇ ದಿನೇ ಹೆಚ್ಚಾಗುತ್ತಿದೆ. ಕ್ಯಾನ್ಸರ್ ಚಿಕಿತ್ಸೆ ಅತ್ಯಂತ ನೋವುದಾಯಕ ಅನ್ನುವುದು ಎಲ್ಲರಿಗೂ ಗೊತ್ತಿರುವ ವಿಚಾರ.
ಆದರೆ ಈ ಒಂದು ಹಣ್ಣನ್ನು ಸೇವಿಸುವ ಮೂಲಕ ಕ್ಯಾನ್ಸರ್ ಕಣಗಳನ್ನು ನಿಯಂತ್ರಣಕ್ಕೆ ತರಬಹುದು. ಈ ಹಣ್ಣು ಕ್ಯಾನ್ಸರ್‌ನಿಂದ ದೇಹದಲ್ಲಿರುವ ಕಣಗಳಿಗೆ ತೊಂದರೆ ಆಗುವುದನ್ನು ತಡೆಯುತ್ತವೆ.
ನಾವಿಲ್ಲಿ ಹೇಳುತ್ತಿರುವುದು ಲಕ್ಷ್ಮಣ ಫಲದ ಬಗ್ಗೆ. ಈ ಫಲದಲ್ಲಿ ಆ್ಯಂಟಿ ಆಕ್ಸಿಡೆಂಟ್ ಅಂಶಗಳು ಹೇರಳವಾಗಿ ಕಂಡು ಬರುತ್ತವೆ. ಈ ಅಂಶ ಕ್ಯಾನ್ಸರ್‌ನಿಂದ ದೇಹದಲ್ಲಿರುವ ಕಣಗಳಿಗೆ ತೊಂದರೆ ಆಗುವುದನ್ನು ತಡೆಯುತ್ತವೆ.
ಲಕ್ಷ್ಮಣ ಫಲ ಎಲ್ಲಾ ರೀತಿಯ ಕ್ಯಾನ್ಸರ್ ವಿರುದ್ದವೂ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಸ್ತನ ಕ್ಯಾನ್ಸರ್‌ಗೆ ಲಕ್ಷ್ಮಣ ಫಲದ ಎಲೆಗಳು ರಾಮಬಾಣ ಪರಿಹಾರ.
ಲಕ್ಷ್ಮಣ ಫಲ ಅತ್ಯಂತ ಅಪರೂಪದ ಹಣ್ಣಾಗಿದ್ದು ಕ್ಯಾನ್ಸರ್ ಸೇರಿದಂತೆ ಅನೇಕ ಕಾಯಿಲೆಗಳಿಗೆ ಔಷಧಿಯಾಗಿ ಕಾರ್ಯನಿರ್ವಹಿಸುತ್ತದೆ. ಇದರ ಹಣ್ಣು ಮಾತ್ರವಲ್ಲ ಈ ಹಣ್ಣಿನ ಸಿಪ್ಪೆ, ಬೀಜ ಮತ್ತು ಎಲೆಗಳು ಕೂಡಾ ಔಷಧೀಯ ಗುಣಗಳನ್ನು ಹೊಂದಿವೆ.
ಕ್ಯಾನ್ಸರ್ ನಿರೋಧಕ ಶಕ್ತಿಯನ್ನು ಹೊಂದಿರುವುದರಿಂದ ಮಾರುಕಟ್ಟೆಯಲ್ಲಿಯೂ ರಾಮ, ಲಕ್ಷ್ಮಣ ಹಾಗೂ ಹನುಮಂತ ಫಲಗಳಿಗೆ ದೊಡ್ಡ ಮಟ್ಟದ ಬೇಡಿಕೆ ಇದೆ.
ಸೂಚನೆ :ಇಲ್ಲಿ ನೀಡಲಾದ ಮಾಹಿತಿ ಮತ್ತು ಮನೆಮದ್ದುಗಳು ಸಾಮಾನ್ಯ ಮಾಹಿತಿಯನ್ನು ಆಧರಿಸಿವೆ. Zee Kannada News ಅದನ್ನು ಅನುಮೋದಿಸುವುದಿಲ್ಲ.