ಇದೇನಿದು...? ಮೈದಾನದಲ್ಲೇ ವಾಷಿಂಗ್ಟನ್ ಸುಂದರ್ʼಗೆ ಹೊಡೆಯಲು ಮುಂದಾದ ಕ್ಯಾಪ್ಟನ್ ರೋಹಿತ್ ಶರ್ಮಾ! ಕಾರಣ ಇಲ್ಲಿದೆ
ಶ್ರೀಲಂಕಾ ಮತ್ತು ಭಾರತ ನಡುವಿನ 3 ಪಂದ್ಯಗಳ ಏಕದಿನ ಸರಣಿಯ ಎರಡನೇ ಪಂದ್ಯ ಕೊಲಂಬೊದ ಆರ್ ಪ್ರೇಮದಾಸ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ಈ ಪಂದ್ಯದಲ್ಲಿ ಶ್ರೀಲಂಕಾ ನಾಯಕ ಚರಿತ್ ಅಸಲಂಕಾ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ.
ಏಕದಿನ ಮತ್ತು ಟೆಸ್ಟ್ ತಂಡದ ನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ತಮ್ಮ ತಮಾಷೆಯ ವರ್ತನೆಯನ್ನು ಆಗಾಗ ತೋರಿಸೋದು ಉಂಟು. ಇದೇ ರೀತಿ ಎರಡನೇ ಏಕದಿನ ಪಂದ್ಯದಲ್ಲೂ ಸ್ಪಿನ್ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಬೌಲಿಂಗ್ ಮಾಡುವಾಗ ರೋಹಿತ್ ಫನ್ನಿ ಸ್ಟೈಲ್ʼನಲ್ಲಿ ಹೊಡೆಯಲು ಬಂದಂತೆ ವರ್ತಿಸಿದ್ದಾರೆ.
ಕ್ಯಾಪ್ಟನ್ ವರ್ತನೆ ಕಂಡು ಎಲ್ಲರೂ ಒಂದು ಬಾರಿ ನಕ್ಕಿದ್ದಾರೆ. ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಅನುಭವಿ ಆಲ್ ರೌಂಡರ್ ವಾಷಿಂಗ್ಟನ್ ಸುಂದರ್ ಅದ್ಭುತ ಬೌಲಿಂಗ್ ಮಾಡಿದ್ದಾರೆ.
10 ಓವರ್ʼಗಳ ಸ್ಪೆಲ್ʼನಲ್ಲಿ, 30 ರನ್ ನೀಡಿ 3 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲದೆ, 1 ಮೇಡನ್ ಓವರ್ ಬೌಲ್ ಮಾಡಿದ್ದಾರೆ.
ಭಾರತ ವಿರುದ್ಧದ ಎರಡನೇ ಏಕದಿನ ಪಂದ್ಯದಲ್ಲಿ ಶ್ರೀಲಂಕಾ 241 ರನ್ʼಗಳ ಗುರಿ ನೀಡಿದೆ. ಶ್ರೀಲಂಕಾ 50 ಓವರ್ʼಗಳಲ್ಲಿ 9 ವಿಕೆಟ್ ಕಳೆದುಕೊಂಡು 240 ರನ್ ಗಳಿಸಿದೆ.