Car Sales In August 2023: ಆಗಸ್ಟ್ ತಿಂಗಳಿನಲ್ಲಿ ಅತಿಹೆಚ್ಚು ಮಾರಾಟವಾದ ಟಾಪ್ 5 ಕಾರುಗಳು
ಮಾರುತಿ ಸುಜುಕಿ ಆಗಸ್ಟ್‌ನಲ್ಲಿ 1,89,082 ವಾಹನಗಳನ್ನು ಮಾರಾಟ ಮಾಡಿದೆ. ಇದರೊಂದಿಗೆ ಕಂಪನಿಯು ತನ್ನ ಅತ್ಯಧಿಕ ಮಾಸಿಕ ಮಾರಾಟವನ್ನು ದಾಖಲಿಸಿದೆ. ಮಾರುತಿಯ ಸಗಟು ಮಾರಾಟವು ಕಳೆದ ತಿಂಗಳು ಶೇ.14ರಷ್ಟು ಹೆಚ್ಚಾಗಿದೆ. ಆದರೆ ಆಗಸ್ಟ್ 2022ರಲ್ಲಿ ಕಂಪನಿಯು 1,65,173 ವಾಹನಗಳನ್ನು ಮಾರಾಟ ಮಾಡಿತ್ತು.
ಹ್ಯುಂಡೈ ಮೋಟಾರ್ ಇಂಡಿಯಾದ ಆಗಸ್ಟ್ ಸಗಟು ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.15ರಷ್ಟು ಹೆಚ್ಚಾಗಿದ್ದು, 71,435 ಯುನಿಟ್‌ಗಳನ್ನು ಮಾರಾಟ ಮಾಡಿದೆ. ಆಗಸ್ಟ್ 2022ರಲ್ಲಿ ಕಂಪನಿಯು 62,210 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ಕಂಪನಿಯ ದೇಶೀಯ ಮಾರಾಟವು ಕಳೆದ ತಿಂಗಳು 53,830 ಯುನಿಟ್‌ಗಳಿಗೆ ಅಂದರೆ ಶೇ.9ರಷ್ಟು ಹೆಚ್ಚಾಗಿದೆ.
ಟಾಟಾ ಮೋಟಾರ್ಸ್ ಆಗಸ್ಟ್‌ನಲ್ಲಿ ಸಗಟು ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ.3.5ರಷ್ಟು ಕುಸಿತ ದಾಖಲಿಸಿದೆ. 2022ರ ಆಗಸ್ಟ್ ತಿಂಗಳಿನಲ್ಲಿ 47,166 ಯುನಿಟ್‌ಗಳನ್ನು ಮಾರಾಟ ಮಾಡಿದ್ದ ಟಾಟಾ ಕಂಪನಿಯು ಕಳೆದ ತಿಂಗಳು 45,513 ಯುನಿಟ್ ಮಾರಾಟ ಮಾಡಿದೆ. ಇದು ಎಲೆಕ್ಟ್ರಿಕ್ ವಾಹನಗಳ ಮಾರಾಟದ ಅಂಕಿ-ಅಂಶಗಳನ್ನು ಸಹ ಒಳಗೊಂಡಿದೆ.
ಮಹೀಂದ್ರಾದ ವಾಹನಗಳ ಮಾರಾಟವು ವರ್ಷದಿಂದ ವರ್ಷಕ್ಕೆ ಶೇ.19ರಷ್ಟು ಹೆಚ್ಚಿದೆ. ಕಳೆದ ಆಗಸ್ಟ್‍ನಲ್ಲಿ ಮಹೀಂದ್ರಾ 70,350 ಯುನಿಟ್‌ಗಳನ್ನು ಮಾರಾಟ ಮಾಡಿದೆ. 1 ವರ್ಷದ ಹಿಂದೆ ಇದೇ ತಿಂಗಳಿನಲ್ಲಿ 59,049 ಯುನಿಟ್‌ಗಳನ್ನು ಮಾರಾಟ ಮಾಡಿತ್ತು. ದೇಶೀಯ ಮಾರುಕಟ್ಟೆಯಲ್ಲಿ ಕಂಪನಿಯ ಪ್ರಯಾಣಿಕ ವಾಹನಗಳ ಮಾರಾಟವು ಶೇ.25ರಷ್ಟು ಏರಿಕೆಯಾಗಿ 37,270 ಯುನಿಟ್‌ಗಳಿಗೆ ತಲುಪಿದೆ.
ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಕಳೆದ ತಿಂಗಳು 22,910 ಯುನಿಟ್‌ಗಳೊಂದಿಗೆ ತನ್ನ ಅತ್ಯಧಿಕ ಮಾರಾಟವನ್ನು ಸಾಧಿಸಿದೆ. ಇದು ಕಳೆದ ವರ್ಷಕ್ಕಿಂತ ಶೇ.53ರಷ್ಟು ಹೆಚ್ಚು. ಇದು ದೇಶೀಯ ಮಾರುಕಟ್ಟೆಯಲ್ಲಿ 20,970 ಯುನಿಟ್‌ಗಳನ್ನು ಮಾರಾಟ ಮಾಡಿದೆ.