ರಾತ್ರಿ ಮಲಗುವ ಮುನ್ನ ಒಂದೇ ಒಂದು ಚಮಚ ಈ ಜೀಜ ಸೇವಿಸಿ !ಯೂರಿಕ್ ಆಸಿಡ್ ಕರಗುವುದಲ್ಲದೆ ಕೀಲು ನೋವು ಊತ ಕೂಡಾ ಕಡಿಮೆಯಾಗುವುದು !

Mon, 13 May 2024-9:42 am,

ಪ್ಯೂರಿನ್ ಎಂಬ ಪ್ರೋಟೀನ್ ನಿಮ್ಮ ದೇಹದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸಿದಾಗ,ಯೂರಿಕ್ ಆಸಿಡ್ ರೂಪುಗೊಳ್ಳುತ್ತದೆ.  ಮೂತ್ರಪಿಂಡಗಳು ದೇಹದಲ್ಲಿ ಸಂಗ್ರಹವಾದ ಪ್ಯೂರಿನ್‌ಗಳನ್ನು ಫಿಲ್ಟರ್ ಮಾಡಿ ದೇಹದಿಂದ ತೆಗೆದುಹಾಕುತ್ತವೆ.ಆದರೆ ಪ್ಯೂರಿನ್ ಮಟ್ಟವು ಅಧಿಕವಾಗಿದ್ದರೆ ಈ ಪ್ರಕ್ರಿಯೆ ಸಾಧ್ಯವಾಗುವುದಿಲ್ಲ. ಆಗ ಇದು ಕೀಲುಗಳಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ. 

ಗೌಟ್ :ದೇಹದಲ್ಲಿ ಯೂರಿಕ್ ಆಸಿಡ್ ಅಧಿಕವಾಗಿದ್ದರೆ, ಅದು ಕೀಲುಗಳ ಸುತ್ತಲೂ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ.ಇದು ಕೀಲುಗಳಲ್ಲಿ ಊತ ಮತ್ತು ನೋವನ್ನು ಉಂಟುಮಾಡುತ್ತದೆ.ಮೊಣಕಾಲುಗಳು ಮತ್ತು ಕಾಲ್ಬೆರಳುಗಳಂತಹ ಕಾಲುಗಳ ಕೀಲುಗಳ ಮೇಲೆ ಹೆಚ್ಚು ಪರಿಣಾಮ ಬೀರಿ ಗೌಟ್ ಸಮಸ್ಯೆಗೆ ಕಾರಣವಾಗುತ್ತದೆ. 

ಯೂರಿಕ್ ಆಸಿಡ್ ಹೆಚ್ಚಳದಿಂದಾಗಿ, ಮೂತ್ರಪಿಂಡಗಳು ಹಾನಿಗೊಳಗಾಗುತ್ತವೆ ಮತ್ತು ಮೂತ್ರಪಿಂಡದಲ್ಲಿ ಕಲ್ಲುಗಳು ರೂಪುಗೊಳ್ಳಲು ಪ್ರಾರಂಭಿಸುತ್ತವೆ.  

ಯೂರಿಕ್ ಆಸಿಡ್ ನಿಂದಾಗಿ ಇನ್ಸುಲಿನ್ ಉತ್ಪಾದನೆ ಮತ್ತು ಇನ್ಸುಲಿನ್ ಸಕ್ರಿಯಗೊಳಿಸುವಿಕೆಗೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚು ಸಾಮಾನ್ಯವಾಗಿದೆ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸಬಹುದು.

ದೇಹದಲ್ಲಿನ ರಕ್ತ ಪರಿಚಲನೆಯ ಮೇಲೆ ಪರಿಣಾಮ ಬೀರುತ್ತದೆ.ಇದು ಹೃದಯದ ಕಾರ್ಯನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು. ರಕ್ತನಾಳಗಳು ಮತ್ತು ಅಪಧಮನಿಗಳು ಇದರಿಂದ ಹಾನಿಗೊಳಗಾಗಬಹುದು.

ಓಮ ಕಾಳು ಸೇವನೆಯು ಯೂರಿಕ್ ಆಸಿಡ್ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.ದೈನಂದಿನ ಆಹಾರದಲ್ಲಿ ಓಮ ಕಾಳನ್ನು ಬಳ ಸಬಹುದು. ರಾತ್ರಿ ಮಲಗುವ ಮೊದಲು ಒಂದು ಚಮಚ ಓಮ ಕಾಳನ್ನು  ತಿನ್ನಬಹುದು. 

ಸೂಚನೆ:ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ.ಈ ಮಾಹಿತಿಯ ಹೊಣೆಯನ್ನು Zee Kannada News ಖಚಿತಪಡಿಸಿಕೊಳ್ಳುವುದಿಲ್ಲ.  

ZEENEWS TRENDING STORIES

By continuing to use the site, you agree to the use of cookies. You can find out more by Tapping this link