ನಿಮ್ಮ ರಾಶಿಗೆ ಅನುಗುಣವಾಗಿ ದೀಪಾವಳಿಯನ್ನು ಈ ರೀತಿ ಆಚರಿಸಿ
ಬೆಳಕಿನ ಹಬ್ಬ ದೀಪಾವಳಿಯನ್ನು ನಿಮ್ಮ ರಾಶಿಗೆ ಅನುಗುಣವಾಗಿ ಆಚರಿಸುವುದನ್ನು ತುಂಬಾ ಮಂಗಳಕರ. ಇದರಿಂದ ಜೀವನದಲ್ಲಿ ಸುಖ-ಶಾಂತಿ, ಸಮೃದ್ಧಿ ಲಭಿಸುತ್ತದೆ ಎಂದು ಹೇಳಲಾಗುತ್ತದೆ. ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ನಿಮ್ಮ ರಾಶಿಗೆ ಅನುಗುಣವಾಗಿ ದೀಪಾವಳಿಯನ್ನು ಹೇಗೆ ಆಚರಿಸಬೇಕು ಎಂದು ತಿಳಿಯಿರಿ.
ಮೇಷ ರಾಶಿಯವರು ದೀಪಾವಳಿಯಲ್ಲಿ ಸಂಜೆ ವೇಳೆ ಮಣ್ಣಿನ ಅಣತೆಯಲ್ಲಿ ತುಪ್ಪದ ದೀಪವನ್ನು ಬೆಳಗಿಸಿ.
ವೃಷಭ ರಾಶಿಯವರು ದೀಪಾವಳಿಯ ದಿನ ಮನೆಯನ್ನು ತಾಜಾ ಹೂವುಗಳಿಂದ ಅಲಂಕರಿಸಿ, ಮನೆಯ ಮುಂದೆ ಬಣ್ಣ-ಬಣ್ಣದ ರಂಗೋಲಿ ಬಿಡಿಸಿ. ಸುಖ ಸಮೃದ್ಧಿಗಾಗಿ ಧೂಪದ್ರವ್ಯಗಳನ್ನು ಬೆಳಗಿಸಿ, ಪ್ರಾರ್ಥನೆ ಸಲ್ಲಿಸಿ.
ಮಿಥುನ ರಾಶಿಯವರು ದೀಪಾವಳಿಯ ಪೂಜೆಯ ಸಮಯದಲ್ಲಿ ಮಂತ್ರ ಮತ್ತು ಸ್ತೋತ್ರಗಳನ್ನು ಪಠಿಸಿ.
ಕರ್ಕಾಟಕ ರಾಶಿಯವರು ನಿಮ್ಮ ಮನೆಯಲ್ಲಿ ಪರಿಮಳಯುಕ್ತ ಮೇಣದ ಬತ್ತಿಗಳನ್ನು ಬೆಳಗಿಸಿ ಲಕ್ಷ್ಮಿ ದೇವಿಯನ್ನು ಮನೆಗೆ ಸ್ವಾಗತಿಸುವ ಮೂಲಕ ದೀಪಾವಳಿ ಆಚರಿಸಿ.
ಸಿಂಹ ರಾಶಿಯವರು ಮನೆಯನ್ನು ಸ್ವಚ್ಛಗೊಳಿಸಿ, ಶುದ್ಧೀಕರಿಸಿ. ದೀಪ ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸಿ.
ಕನ್ಯಾ ರಾಶಿಯವರು ದೀಪಾವಳಿಯಲ್ಲಿ ತಮ್ಮ ಮನೆಯಲ್ಲಿ ಅಲಂಕಾರಕ್ಕಾಗಿ ತಾಜಾ ಹಸಿರು ಎಲೆಗಳನ್ನು ಬಳಸಿದರೆ ತುಂಬಾ ಶ್ರೇಷ್ಠ.
ತುಲಾ ರಾಶಿಯವರು ಮುಂಜಾನೆ ಮಾತ್ರವಲ್ಲದೆ ಮುಸ್ಸಂಜೆಯಲ್ಲಿಯೂ ಸಹ ಮನೆ ಮುಂದೆ ಸಗಣಿ ನೀರು ಹಾಕಿ, ರಂಗೋಲಿ ಬಿಡಿಸಿ. ಲಕ್ಷ್ಮಿ ದೇವಿಯನ್ನು ಸ್ವಾಗತಿಸಿ.
ವೃಶ್ಚಿಕ ರಾಶಿಯವರು ಮನೆಯ ಪ್ರವೇಶ ದ್ವಾರವನ್ನು ನಕಾರಾತ್ಮಕತೆಯಿಂದ ರಕ್ಷಿಸಲು ಹೊಸ್ತಿಲಿನಲ್ಲಿ ಅರಿಶಿನ ಕುಂಕುಮವನ್ನು ಹಚ್ಚಿ.
ಧನು ರಾಶಿಯವರು ನಿಮ್ಮ ಜೀವನದಲ್ಲಿ ಸಂತೋಷ, ಸಮೃದ್ಧಿಯನ್ನು ಹೆಚ್ಚಿಸಲು ದೀಪಾವಳಿಯಲ್ಲಿ ಬೇರೆಯವರಿಗೆ ಉಡುಗೊರೆ ನೀಡುವ ಅಭ್ಯಾಸ ರೂಢಿಸಿಕೊಳ್ಳಿ.
ದೀಪಾವಳಿಯಲ್ಲಿ ಮಕರ ರಾಶಿಯವರು ಎಳ್ಳೆಣ್ಣೆ ದೀಪವನ್ನು ಹಚ್ಚಿ ಲಕ್ಷ್ಮಿ ದೇವಿ ಮಂತ್ರವನ್ನು ಪಠಿಸಿ.
ಕುಂಭ ರಾಶಿಯವರು ಪರಿಸರ ಸ್ನೇಹಿ ದೀಪಗಳನ್ನು ಬೆಳಗಿಸುವ ಮೂಲಕ ದೀಪಾವಳಿಯನ್ನು ಆಚರಿಸಿ.
ಮೀನ ರಾಶಿಯವರು ನಿಮ್ಮ ಮನೆಯನ್ನು ವರ್ಣರಂಜಿತ ದೀಪಗಳಿಂದ ಬೆಳಗುವ ಮೂಲಕ ದೀಪಾವಳಿಯನ್ನು ಆಚರಿಸಿ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.